Advertisement
ಹೀರೋ ಆಗಲು ಬೇಕಾದ ಹಣವನ್ನು ಹೇಗೆ ವ್ಯವಸ್ಥೆ ಮಾಡುತ್ತಾನೆ. ಹಣ ಮಾಡಲು ಯಾವ ದಾರಿ ಹಿಡಿಯುತ್ತಾನೆ. ಈ ದಾರಿಯಲ್ಲಿ ಅವನಿಗೆ ಯಾರು ಎದುರಾಗುತ್ತಾರೆ. ಇದನ್ನೆಲ್ಲ ಕ್ಲೈಮ್ಯಾಕ್ಸ್‌ನಲ್ಲಿ ನೋಡುವ ಕುತೂಹಲವಿದ್ದರೆ, ಈ ವಾರ ತೆರೆಗೆ ಬಂದಿರುವ “ರೇಸ್’ ಚಿತ್ರವನ್ನು ನೋಡಬಹುದು. ಹಣವಿಲ್ಲದವರು ಹಣ ಮಾಡಲು ಶ್ರೀಮಂತರ ಹಿಂದೆ ಬೀಳುವುದು, ಶ್ರೀಮಂತರಾಗಲು ಶಾರ್ಟ್‌ಕಟ್ ಹಿಡಿಯುವುದು,
Related Articles
Advertisement
ಇನ್ನು “ರೇಸ್’ ಚಿತ್ರದಲ್ಲಿ ತೆರೆಮೇಲೆ ಬಹುತೇಕ ಹೊಸ ಪ್ರತಿಭೆಗಳೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ದಿವಾಕರ್, ಸಂತೋಷ್, ರಕ್ಷಾ ಶಣೈ ಹೀಗೆ ಬಹುತೇಕ ಕಲಾವಿದರು ಅಭಿನಯದಲ್ಲಿ ಇನ್ನೂ ಸಾಕಷ್ಟು ಪಳಗಬೇಕಿದೆ. ಉಳಿದಂತೆ ಇತರರು ಅಭಿನಯಿಸಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿನಿರ್ದೇಶಕರು ಹೇಳಿದ ಕೆಲಸವನ್ನು ಕ್ಯಾಮರಾ ಮುಂದೆ ಕಷ್ಟಪಟ್ಟು ನಿರ್ವಹಿಸಿದ್ದಾರೆ ಎನ್ನಬಹುದು.
ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ನಿಭಾಯಿಸಲು ಹೆಣಗಾಡಿರುವುದು ಪ್ರತಿದೃಶ್ಯದಲ್ಲೂ ಕಾಣುತ್ತದೆ. ಇನ್ನು ಚಿತ್ರದ ಛಾಯಾಗ್ರಹಣ ಒಂದಷ್ಟು ಗಮನ ಸೆಳೆಯುತ್ತದೆ. ಅದನ್ನು ಹೊರತುಪಡಿಸಿದರೆ, ಸಂಕಲನ ಚಿತ್ರಕ್ಕೆ ಪೂರಕವಾಗುವುದಕ್ಕಿಂತ ಮಾರಕವಾಗಿರುವುದೇ ಹೆಚ್ಚು. ರಾಜ್ ಕಿರಣ್ ಸಂಗೀತ ಸಂಯೋಜನೆಯ ಹಾಡುಗಳಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ, ಹೆಚ್ಚು ಹೊತ್ತು ಕಿವಿಯಲ್ಲಿ ಉಳಿಯುವುದಿಲ್ಲ. ಹಿನ್ನೆಲೆ ಸಂಗೀತ, ಧ್ವನಿಗ್ರಹಣ ಬಗ್ಗೆ ನಿರ್ದೇಶಕರು ಹೆಚ್ಚು ಗಮನ ಕೊಟ್ಟಂತೆ ಇಲ್ಲ.
ಚಿತ್ರ: ರೇಸ್ನಿರ್ಮಾಣ: ಎಸ್.ವಿ.ಆರ್ ಪ್ರೊಡಕ್ಷನ್ಸ್
ನಿರ್ದೇಶನ: ಹೇಮಂತ್ ಕೃಷ್ಣ
ತಾರಾಗಣ: ದಿವಾಕರ್, ಸಂತೋಷ್, ನಕುಲ್ ಗೋವಿಂದ್, ರಕ್ಷಾ ಶೆಣೈ, ಶ್ರುತಿ ಮತ್ತಿತರರು * ಜಿ.ಎಸ್. ಕಾರ್ತಿಕ ಸುಧನ್