Advertisement

ಹಳೆಯಂಗಡಿ : ಹೆದ್ದಾರಿಯ ಹೊಂಡ ಗುಂಡಿಗೆ ತಾತ್ಕಾಲಿಕ ಮುಕ್ತಿ

08:24 PM Jul 10, 2019 | Sriram |

ಹಳೆಯಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿಯ ಮುಖ್ಯ ಜಂಕ್ಷನ್‌ನಲ್ಲಿ ನಿರ್ಮಾಣವಾಗಿರುವ ಹೊಂಡ ಗುಂಡಿಗಳನ್ನು ಹೆದ್ದಾರಿ ನಿರ್ವಹಿಸುತ್ತಿರುವ ನವಯುಗ್‌ ಸಂಸ್ಥೆಯಿಂದ ಬುಧವಾರ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

Advertisement

ತಿರುವಿನಲ್ಲಿಯೇ ಘನ ವಾಹನಗಳ ಸಹಿತ ಸರ್ವಿಸ್‌ ಬಸ್ಸುಗಳು ಹಾಗೂ ಇತರ ವಾಹನಗಳ ಸಂಚರಿಸುವುದರಿಂದ ಗುಂಡಿಗಳು ಹೆಚ್ಚಾಗಿದೆ. ಬುಧವಾರ ಬೆಳಗ್ಗೆ ಕಾಂಕ್ರೀಟ್‌ ಮಿಶ್ರಿತ ಜಲ್ಲಿಯನ್ನು ಟಿಪ್ಪರ್‌ನಲ್ಲಿ ತಂದು ಜೇಸಿಬಿ ಮೂಲಕ ಗುಂಡಿಗಳಿಗೆ ಮುಚ್ಚಿದ್ದು ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ನಡೆಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದ ಸಮಯದಲ್ಲಿ ಮಳೆ ನೀರು ನಿಂತು ಹೊಂಡಗಳು ನಿರ್ಮಾಣ ದುರಸ್ತಿಗೆ ಮಂಗ ಳವಾರ ಪ್ರತಿಭಟನೆ ಮೂಲಕ ಹೆದ್ದಾರಿ ಇಲಾಖೆ ಹಾಗೂ ನವಯುಗ್‌ ಸಂಸ್ಥೆಗೆ ತಿಳಿಸಲಾಗಿತ್ತು. ದುರಸ್ತಿ ಕಾರ್ಯ ಮಾಡುತ್ತಿರುವುದು ಸಮಾಧಾನ ತಂದಿದೆ..

Advertisement

Udayavani is now on Telegram. Click here to join our channel and stay updated with the latest news.

Next