Advertisement

ಸ್ಕೀಂ ಹಳೆಯದು ಹೆಸರು ಹೊಸದು

10:03 AM Jan 04, 2020 | Team Udayavani |

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸುಕನ್ಯಾ ಸಮೃದ್ಧಿ ಆಗಾಗ ಬದಲಾವಣೆಗೊಂಡು ಬರುತ್ತಿರುತ್ತದೆ. ಇದೀಗ ಗಜೆಟ್‌ GSR 914(E) dt 12-12-2019 ಅನುಸಾರ ಸುಕನ್ಯಾ ಸಮೃದ್ಧಿ ಅಕೌಂಟ್‌ ಸ್ಕೀಮ್‌ – 2019 ಎಂಬ ಹೊಸ ಆವೃತ್ತಿ ನಮ್ಮೆದುರು ಬಂದು ನಿಂತಿದೆ. ಇದರಲ್ಲಿ ಹೆಸರು ಮಾತ್ರ ಹೊಸತು ಬೇರೆÇÉಾ ಹಳೆಯದೇ.ಒಂಥರಾ ಹೊಸ ಬಾಟಲಿಯಲ್ಲಿ ಹಳೇ ಮದ್ಯವನ್ನು ತುಂಬಿಸಿಕೊಟ್ಟಂತೆ. ಹಳೆಯ ಸುಕನ್ಯಾ ಸಮೃದ್ಧಿ ಯೋಜನಾದಲ್ಲಿ ಈವರೆಗಿನ ಎÇÉಾ ಬದಲಾವಣೆಗಳನ್ನು ಒಟ್ಟಾಗಿಸಿ ಹೊಸತಾಗಿ ಸ್ಕೀಮನ್ನು ನೋಟಿಫೈ ಮಾಡಿ¨ªಾರೆ. ಅಷ್ಟೆ.

Advertisement

ಮೋದಿ ಸರಕಾರದ ಆಶೋತ್ತರಗಳಲ್ಲಿ ಒಂದಾದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಅಂಗವಾಗಿ ಕೇಂದ್ರ ಸರಕಾರವು ಮೈನರ್‌ ಹೆಣ್ಣುಮಕ್ಕಳಿಗಾಗಿಯೇ ವಿಶೇಷವಾಗಿ ಆಯೋಜಿಸಿದ ಸುಕನ್ಯಾ ಸಮೃದ್ಧಿ ಯೋಜನೆಯನ್ನು 2 ಡಿಸೆಂಬರ್‌ 2014ರಂದು ಬಿಡುಗಡೆ ಮಾಡಿದೆ. ಈ ಯೋಜನೆಯು 18-05-2016ರ ಗಜೆಟ್‌ ಪ್ರಕಟನೆಯ ಮೂಲಕ ಕೆಲವು ಮುಖ್ಯ ಬದಲಾವಣೆಗಳನ್ನು ಕಂಡಿದೆ. ಆ ಬಳಿಕ ಇದೀಗ 2018ರ ಅಮೆಂಡೆ¾ಂಟ್‌ ಅನುಸಾರ ಸುಧಾರಣೆ ಕಂಡಿದೆ. ಈ ಎÇÉಾ ಬದಲಾವಣೆಗಳನ್ನು ಒಳಗೊಂಡಂತೆ ಹೊಸ ಹೆಸರಿನಿಂದ ಬಂದಂತಹ ಸುಕನ್ಯಾ ಸಮೃದ್ಧಿ ಸ್ಕೀಮಿನ ಮುಖ್ಯ ವಿವರಗಳು ಈ ಕೆಳಗಿನಂತಿವೆ:

ಸುಕನ್ಯಾ ಸಮೃದ್ಧಿ ಎನ್ನುವುದು ಒಂದು ಅಂಚೆ ಇಲಾಖೆ ಮಾದರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು ಆಯ್ದ ಪೋಸ್ಟ್‌ ಆಫೀಸು ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಇದರ ಖಾತೆಗಳನ್ನು ತೆರೆಯಬಹುದಾಗಿದೆ. ಈ ಖಾತೆಯನ್ನು ಹೆತ್ತವರು ಅಥವಾ ರಕ್ಷಕರು ತೆರೆಯಬಹುದು. ಹೆತ್ತವರು/ರಕ್ಷಕರು ಕೇವಲ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದು. ಆದರೆ ಅವಳಿ/ತ್ರಿವಳಿ ಹೆರಿಗೆಯಾಗಿದ್ದಲ್ಲಿ ಮೂರನೆಯ ಹೆಣ್ಣು ಮಗುವಿಗೂ ಖಾತೆ ತೆರೆಯಬಹುದು. ಒಂದು ಹೆಣ್ಣು ಮಗುವಿನ ಮೇಲೆ ದೇಶದಾದ್ಯಂತ ಒಂದು ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ. ಈ ಖಾತೆಯನ್ನು ಬ್ಯಾಂಕಿನಿಂದ ಪೋಸ್ಟಾಫೀಸಿಗೂ ಹಾಗೂ ತದ್ವಿರುದ್ಧ ಗತಿಯಲ್ಲೂ ಯಾವುದೇ ಶುಲ್ಕವಿಲ್ಲದೆ ವರ್ಗಾಯಿಸಬಹುದಾಗಿದೆ.

ವಯೋಮಿತಿ
ಖಾತೆ ತೆರೆಯುವಾಗ ಹೆಣ್ಣು ಮಗುವಿಗೆ 10 ವರ್ಷ ವಯಸ್ಸು ಮೀರಿರಬಾರದು. ಆದರೆ ಸ್ಕೀಮು ಆರಂಭದ (2-12-2014) ವರ್ಷ ಮಾತ್ರವೇ ಹಿಂದಿನ 1 ವರ್ಷದಲ್ಲಿ 10 ತುಂಬಿದವರಿಗೂ ವಿಶೇಷ ರಿಯಾಯತಿಯಾಗಿ ಈ ಖಾತೆಯನ್ನು ತೆರೆಯುವ ಅನುಮತಿ ನೀಡಲಾಗಿತ್ತು. ಅಂದರೆ 2 ಡಿಸೆಂಬರ್‌ 2013ರಿಂದ 1 ಡಿಸೆಂಬರ್‌ 2014ರಲ್ಲಿ 10 ತುಂಬಿದವರು. ಆದರೆ ಈಗ ಆ ರಿಯಾಯಿತಿ ಇಲ್ಲ.

ನಿವಾಸ/ಪೌರತ್ವ
ಭಾರತೀಯ ನಿವಾಸಿ ಹಾಗೂ ಪೌರತ್ವಕ್ಕೆ ಮಾತ್ರ ಅನ್ವಯವಾಗುವ ಈ ಖಾತೆಯನ್ನು ಬೇರೆ ದೇಶದ ನಿವಾಸಿ/ಪೌರತ್ವ ಪಡೆದೊಡನೆ ಒಂದು ತಿಂಗಳ ಒಳಗಾಗಿ ಮುಚ್ಚಬೇಕು. ಮುಚ್ಚದಿದ್ದಲ್ಲಿ ಖಾತೆಯಲ್ಲಿನ ಮೊತ್ತದ ಮೇಲೆ ಬಡ್ಡಿ ಸಿಗಲಾರದು.

Advertisement

ಖಾತೆ ಚಲಾವಣೆ
ಈ ಖಾತೆಯನ್ನು ಹೆತ್ತವರು/ರಕ್ಷಕರು ಅಥವಾ 10 ವರ್ಷ ತುಂಬಿದ ನಂತರ ಹೆಣ್ಣು ಮಗು ಸ್ವತಃ ಚಲಾಯಿಸಬಹುದಾಗಿದೆ. 18 ತುಂಬಿದ ನಂತರ ಸ್ವತಃ ಹೆಣ್ಣು ಮಗು ಮಾತ್ರವೇ ಇದನ್ನು ಚಲಾಯಿಸಬೇಕಾಗಿದೆ. ಇದಕ್ಕಾಗಿ ಒಂದು ಪಾಸ್‌ಬುಕ್‌ ನೀಡಲಾಗುತ್ತದೆ.

ಖಾತೆಯ ಅವಧಿ
ಈ ಖಾತೆಯ ಒಟ್ಟು ಅವಧಿ 21 ವರ್ಷ, ಅಂದರೆ ಖಾತೆ ತೆರೆದ ದಿನಾಂಕದಿಂದ 21 ವರ್ಷಗಳವರೆಗೆ. ಅವಧಿ 21 ವರ್ಷಗಳಾದರೂ ಕಂತು ಕಟ್ಟುವ ಅವಧಿ ಕೇವಲ 15 (ಮೊದಲು 14 ಇತ್ತು) ವರ್ಷಗಳು ಮಾತ್ರ. 21 ವರ್ಷಗಳ ಬಳಿಕ ಖಾತೆಯ ಮೇಲೆ ಯಾವುದೇ ಬಡ್ಡಿ ಸಿಗಲಾರದು. (ಮೊದಲು ಖಾತೆಯನ್ನು ಮುಂದುವರಿಸಬಹುದಿತ್ತು; ಹಾಗೂ ಬಡ್ಡಿ ಸಿಗುತ್ತಲಿತ್ತು. ಆದರೀಗ ಆ ಸೌಲಭ್ಯವಿಲ್ಲ)

ಕಂತು
ಕನಿಷ್ಠ ರೂ. 250 ರಿಂದ (ಹಿಂದೆ ರೂ. 1,000 ಇತ್ತು) ಈ ಖಾತೆಯ ಆರಂಭ ಮಾಡಬಹುದು. ಆ ಬಳಿಕ ವಾರ್ಷಿಕ ಗರಿಷ್ಠ ರೂ. 1,50,000ವನ್ನು ಈ ಖಾತೆಗೆ ಕಟ್ಟಬಹುದು. ಗರಿಷ್ಟ ಮಿತಿಯನ್ನು ಮೀರಿ ಠೇವಣಿ ಮಾಡಿದರೆ ಆ ಹೆಚ್ಚುವರಿ ಮೊತ್ತದ ಮೇಲೆ ಬಡ್ಡಿ ಸಿಗಲಾರದು; ಅಲ್ಲದೆ ಆ ಹೆಚ್ಚುವರಿ ಮೊತ್ತವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದಾಗಿದೆ. ಈ ಖಾತೆಗೆ ವಾರ್ಷಿಕ ಕನಿಷ್ಠ ಠೇವಣಿಯ ಮಿತಿ ರೂ. 250 (ಈ ಮೊದಲು ರೂ. 1000 ಆಗಿತ್ತು) ಯಾವುದೇ ವರ್ಷ ಈ ಕನಿಷ್ಠ ಠೇವಣಿಯನ್ನು ಕಟ್ಟದೇ ಇದ್ದಲ್ಲಿ ಅದನ್ನು ವಾರ್ಷಿಕ ರೂ. 50ರ ತಪ್ಪು ದಂಡದೊಂದಿಗೆ ಆ ಬಳಿಕ ಕಟ್ಟ ತಕ್ಕದ್ದು. ಒಂದು ವೇಳೆ ಖಾತೆಯ ಆರಂಭದಿಂದ 15 ವರ್ಷಗಳ ಅವಧಿಯವರೆಗೂ ಈ ರೀತಿ ತಪ್ಪು ದಂಡ ಕಟ್ಟಿ ಒಂದು ನಿಷ್ಕ್ರಿಯ ಖಾತೆಯನ್ನು ಊರ್ಜಿತಗೊಳಿಸದಿದ್ದಲ್ಲಿ ಆ ಖಾತೆಯಲ್ಲಿ ಆರಂಭದಿಂದ ಮಾಡಿದ ಎÇÉಾ ಠೇವಣಿಗಳ ಮೇಲೂ ಎಸ್‌ಬಿ ಖಾತೆಯ ಬಡ್ಡಿ ದರ ಮಾತ್ರವೇ ಸಿಕ್ಕೀತು. ಇದೊಂದು ಕರಾಳ ಕಾಯಿದೆ.

ದಾಖಲೆಗಳು
ಈ ಖಾತೆಯನ್ನು ತೆರೆಯಲು ಮಗುವಿನ ಜನ್ಮ ಪತ್ರ, ಹೆತ್ತವರ ವಿಳಾಸ ಮತ್ತು ಗುರುತು ಪುರಾವೆ, ಪ್ಯಾನ್‌ ಇತ್ಯಾದಿ ಅಗತ್ಯ. ಮಗು 18 ತುಂಬಿದ ಬಳಿಕ ಅವಳ ದಾಖಲೆಗಳೂ ಅಗತ್ಯ.

ಬಡ್ಡಿದರ
ಅಂಚೆಯ ಸಣ್ಣ ಉಳಿತಾಯದಲ್ಲಿ ಪ್ರತಿ ತ್ತೈಮಾಸಿಕ ಅವಧಿಗೆ ಬಡ್ಡಿ ದರಗಳನ್ನು ಪೂರ್ವಭಾವಿಯಾಗಿ ಘೋಷಿಸುವ ಕಾನೂನು ಬಂದಿದೆ. ಹಾಗೆಯೇ ಈ ಸ್ಕೀಮಿನ ಬಡ್ಡಿ ದರವೂ ಪ್ರತಿ ತ್ತೈಮಾಸಿಕ ವರ್ಷ ಬದಲಾಗುತ್ತದೆ. ಸದ್ಯಕ್ಕೆ 1-10-2019 ಬಳಿಕ ಇದರ ಘೋಷಿತ ವಾರ್ಷಿಕ ಬಡ್ಡಿದರ ಶೇ.8.4. ಇದು ಪಿಪಿಎಫ್ (ಶೇ.7.9) 5 ವರ್ಷದ ಎನ್‌ಎಸ್‌ಸಿ ದರ (ಶೇ.7.9) ಹಾಗೂ ಎಮ…ಐಎಸ್‌ (ಶೇ.7.6) ಗಳಿಗಿಂತ ಜಾಸ್ತಿ. ಸೀನಿಯರ್‌ ಸಿಟಿಜನ್‌ ಸ್ಕೀಮಿನಲ್ಲಿ ಮಾತ್ರ ಅಂಚೆ ಇಲಾಖೆ ಶೇ.8.6 ಬಡ್ಡಿ ದರ ನೀಡುತ್ತದೆ. ಪ್ರತಿ ತ್ತೈಮಾಸಿಕ ಘೋಷಿತವಾದ ಬಡ್ಡಿದರ ಆ ತ್ತೈಮಾಸಿಕಕ್ಕೆ ಮಾತ್ರವೇ ಅನ್ವಯವಾಗುತ್ತದೆ- ಮುಂದಿನ ತ್ತೈಮಾಸಿಕಕ್ಕೆ ಪುನಃ ಹೊಸ ಬಡ್ಡಿದರ. ಆದರೆ ಈ ತ್ತೈಮಾಸಿಕವಾಗಿ ಅನ್ವಯವಾಗುವ ಬಡ್ಡಿಯನ್ನು ವಾರ್ಷಿಕವಾಗಿ ವರ್ಷಾಂತ್ಯದಲ್ಲಿ (ಮಾರ್ಚ್‌ 31) ಮಾತ್ರವೇ ಕ್ರೆಡಿಟ್‌ ಮಾಡಲಾಗುತ್ತದೆ ಮತ್ತದು ವಾರ್ಷಿಕವಾಗಿಯೇ ಚಕ್ರೀಕೃತಗೊಳ್ಳುತ್ತದೆ. ಪ್ರತಿ ತಿಂಗಳ 5ನೆಯ ತಾರೀಕಿನ ಹಾಗೂ ಮಾಸಾಂತ್ಯದ ನಡುವಿನ ಕನಿಷ್ಠ ಬ್ಯಾಲನ್ಸ್‌ ಮೊತ್ತದ ಮೇಲೆ ಆ ತಿಂಗಳಿನ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.

ಅವಧಿಪೂರ್ವ ಹಿಂಪಡೆತ
ಪಿಪಿಎಫ್ ಖಾತೆಯಂತೆಯೇ ಇಲ್ಲೂ ಅವಧಿಪೂರ್ವ ಹಿಂಪಡೆತ ಮಾಡಬಹುದಾಗಿದೆ. ಖಾತೆದಾರಳ ಉಚ್ಚ ಶಿಕ್ಷಣದ ನೈಜವಾದ ಖರ್ಚಿನ ಬಾಬ್ತು ಖಾತೆಯಲ್ಲಿ ಹಿಂದಿನ ವರ್ಷಾಂತ್ಯದಲ್ಲಿದ್ದ ಮೊತ್ತದ ಶೇ. 50ರ ವರೆಗೆ ಹಿಂಪಡೆಯಬಹುದಾಗಿದೆ. ಆದರೆ ಇದಕ್ಕಾಗಿ ಅವಳಿಗೆ 18 ತುಂಬಿರಬೇಕಾದುದು ಅಥವಾ ಹತ್ತನೆಯ ತರಗತಿ ತೇರ್ಗಡೆ ಆಗಿರಬೇಕಾಗಿರುವುದು ಅವಶ್ಯ. ಈ ಸಂದರ್ಭದಲ್ಲಿ ವಿದ್ಯಾಭ್ಯಾಸ ಹಾಗೂ ಶುಲ್ಕದ ಸಂಪೂರ್ಣ ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಶುಲ್ಕ ಮತ್ತಿತರ ಖರ್ಚುಗಳ ಪಟ್ಟಿ ಒದಗಿಸಬೇಕು. ಒಂದೇ ಏಟಿಗೆ ಅಥವಾ 5 ವಾರ್ಷಿಕ ಕಂತುಗಳಾಗಿ (ವರ್ಷಕ್ಕೆ ಒಂದೇ ಬಾರಿ) ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಇದರಲ್ಲಿ ಪಿಪಿಎಫಿಫ್ನಂತೆ ಸಾಲ ಸೌಲಭ್ಯ ಇಲ್ಲ.

ಅವಧಿಪೂರ್ವ ಮುಕ್ತಾಯ
18 ತುಂಬಿ ಮದುವೆ ಆಗುವ ಸಂದರ್ಭದಲ್ಲಿ ಮಾತ್ರ ಈ ಖಾತೆಯನ್ನು ಅವಧಿಪೂರ್ವ ಮುಕ್ತಾಯಗೊಳಿಸಿ ಸಂಪೂರ್ಣ ದುಡ್ಡನ್ನು ವಾಪಾಸು ಪಡಕೊಳ್ಳಲು ಬರುತ್ತದೆ. ಖಾತೆದಾರಳಿಗೆ 18 ತುಂಬಿದ ಬಗ್ಗೆ ನೋಟರಿ ನೋಡುವುದು ಅಗತ್ಯ. ಮದುವೆಯ 1 ತಿಂಗಳು ಮೊದಲು ಅಥವಾ 3 ತಿಂಗಳು ನಂತರದ ಅವಧಿಯೊಳಗೆ ಈ ಮುಕ್ತಾಯ ನಡೆಯತಕ್ಕದ್ದು. ಈ ಮೊದಲು ಮದುವೆಯ ಕಾರಣಕ್ಕ ಶೇ. 50 ಹಿಂಪಡೆತ ಸೌಲಭ್ಯ ಮಾತ್ರ ಇದ್ದಿದ್ದು. ಈಗ ಶೇ.100 ಮುಕ್ತಾಯದ ಸೌಲಭ್ಯವನ್ನು ನೀಡಲಾಗಿದೆ. ಅವಧಿ ಪೂರ್ವ ಮುಕ್ತಾಯ ಖಾತೆದಾರಳ ಮೃತ್ಯು ಸಂಭವಿಸಿದಾಗಲೂ ಕಡ್ಡಾಯವಾಗಿ ಮಾಡಬೇಕು. ಮೃತ್ಯುವಿನ ಬಳಿಕದ ಬಡ್ಡಿ ದರ ಕೇವಲ ಪೋಸ್ಟಾಫೀಸಿನ ಎಸ್‌ಬಿ ಖಾತೆಯ ಬಡ್ಡಿ ಲೆಕ್ಕದಲ್ಲಿ ಮಾತ್ರ ಸಿಗುತ್ತದೆ. ಕೆಲವೊಮ್ಮೆ ಖಾತೆದಾರಳ ತೀವ್ರ ಅನಾರೋಗ್ಯ ಅಥವಾ ರಕ್ಷಕರ ಮೃತ್ಯು ಸಂಭವಿಸಿ ಖಾತೆಯನ್ನು ಮುಂದುವರಿಸಲು ಕಷ್ಟವಾದಲ್ಲಿ ಖಾತೆಯನ್ನು ಅವಧಿಪೂರ್ವವಾಗಿ ಮುಕ್ತಾಯಗೊಳಿಸಲು ಸಾಧ್ಯವಿದೆ. ಆದರೆ ಇಂತಹ ಮುಕ್ತಾಯ ಖಾತೆಗೆ 5 ವರ್ಷವಾದರೂ ಆಗದೆ ಸಾಧ್ಯವಿಲ್ಲ.

ಕರ ವಿನಾಯಿತಿ
ಈ ಯೋಜನೆಗೆ ಸೆಕ್ಷನ್‌ 80ಸಿ ಅಡಿಯಲ್ಲಿ ಕರ ವಿನಾಯಿತಿಯನ್ನು ಘೋಷಿಸಲಾಗಿದೆ. ಅಂದರೆ ಪಿಪಿಎಫ್, ವಿಮೆ, 5 ವರ್ಷದ ಬ್ಯಾಂಕ್‌ ಎಫ್ಡಿ , ಎನ್‌ಎಸ್‌ಸಿ ಇತ್ಯಾದಿ ಯೋಜನೆಗಳ ಒಟ್ಟಾರೆ ಮಿತಿ ರೂ. 1,50,000ದ ಒಳಗೆ ಇದನ್ನೂ ಸೇರಿಸಿಕೊಳ್ಳಲಾಗಿದೆ.

ಅದಲ್ಲದೆ, ಪಕ್ಕಾ ಪಿಪಿಎಫ್ ಶೈಲಿಯಲ್ಲಿಯೇ ಇದರಲ್ಲಿ ಬರುವ ಬಡ್ಡಿಯ ಮೇಲೂ ಕೂಡಾ ಯಾವುದೇ ರೀತಿಯ ಕರ ಇರುವುದಿಲ್ಲ. ಅಂದರೆ ಪ್ರತಿ ವರ್ಷ ಖಾತೆಗೆ ಸೇರಿಸಲ್ಪಡುವ ಬಡ್ಡಿಯ ಮೇಲಾಗಲಿ ಅಥವಾ ಮೆಚೂÂರಿಟಿಯ ಸಂದರ್ಭದಲ್ಲಿ ಹಿಂಪಡೆಯುವ ಮೊತ್ತಕ್ಕಾಗಲಿ ಯಾವುದೇ ರೀತಿಯ ಆದಾಯ ಕರ ಇರುವುದಿಲ್ಲ.ಇದೊಂದು Exempt-Exempt-Exempt ಮಾದರಿಯ ಮೂರೂ ಹಂತಗಳಲ್ಲಿ ಕರ ವಿನಾಯಿತಿ ನೀಡುವ ಕಾಮಧೇನು.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next