Advertisement

ಹಳೇ ಮೊಬೈಲ್‌ಗ‌ಳಿಗೆ ಸಂಕಷ್ಟ

12:30 AM Feb 22, 2019 | |

ಹೊಸದಿಲಿ: ಸ್ಥಳೀಯ ಭೌಗೋಳಿಕ ಮಾಹಿತಿಯನ್ನು ಕ್ಷಣಾರ್ಧದಲ್ಲಿ ನೀಡುವ ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ) ತಂತ್ರಜ್ಞಾನದ ಸೇವೆಗಳು ಏ. 6ರಂದು ಅಥವಾ ಆನಂತರ ವ್ಯತ್ಯಯವಾಗುವ ಸಾಧ್ಯತೆಗಳಿವೆ. 2010ಕ್ಕೂ ಹಿಂದೆ ತಯಾರಾದ ಮೊಬೈಲ್‌ ಸೆಟ್‌ಗಳಲ್ಲಿ ಮಾತ್ರ ಇಂಥ ಸಮಸ್ಯೆ ಕಾಣಿಸಿಕೊಳ್ಳಲಿದೆ.

Advertisement

ಏಕೆ ಹೀಗೆ?: ಜಿಪಿಎಸ್‌ ವ್ಯವಸ್ಥೆಯು, ಬೈನರಿ ಸಂಖ್ಯೆ ಆಧಾರಿತ ಕ್ಲಾಕಿಂಗ್‌ ವ್ಯವಸ್ಥೆಯಾಗಿದ್ದು, 1999ರ ಆ. 21ರಂದು ಇದನ್ನು ಶುರು ಮಾಡಲಾಗಿತ್ತು. ಇದರ ಗಣನೆಯ ಅವಧಿಯು ಅಂದಿನ ಕಾಲಕ್ಕೆ 1,024 ವಾರಗಳಿಗೆ ನಿಗದಿಯಾಗಿ ದ್ದರಿಂದ ಏ. 6ರಂದು ಈ ಕ್ಲಾಕ್‌ ತಾನೇ ತಾನಾಗಿ ರೀ-ಸೆಟ್‌ ಆಗಲಿದೆ. 

ಹೀಗೆ, ರೀ-ಸೆಟ್‌ ಆಗಲಿರುವ ಕ್ಲಾಕಿಂಗ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಸಾಫ್ಟ್ ವೇರ್‌ ಅಪ್‌ಡೇಟ್‌ಗಳು ಹೊಸ ಮೊಬೈಲುಗಳಲ್ಲಿ ಇವೆ. ಆದರೆ, ಹಳೆಯ ಮೊಬೈಲುಗಳಲ್ಲಿ ಅದು ಇರುವುದಿಲ್ಲ. ಹಾಗಾಗಿ, ಆ ಫೋನುಗಳಲ್ಲಿ ಜಿಪಿಎಸ್‌ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದು. ಆದರೆ, ಹಳೆಯ ಫೋನುಗಳ ತಯಾರಿಕಾ ಸಂಸ್ಥೆಗಳು ಆ ಫೋನುಗಳಿಗೆ ಸಾಫ್ಟ್ವೇರ್‌ ಪ್ಯಾಚ್‌ ಕಳಿಸಿದ್ದರೆ ಮಾತ್ರ ಆ ಮೊಬೈಲ್‌ಗ‌ಳು ಹೊಸ ಜಿಪಿಎಸ್‌ ಕ್ಲಾಕಿಂಗ್‌ಗೆ ಹೊಂದಿಕೊಳ್ಳಬಹುದು.

ಹೊಸ ಜಿಪಿಎಸ್‌ ಕ್ಲಾಕಿಂಗ್‌ ವ್ಯವಸ್ಥೆಗೆ ಅನುಗುಣವಾದ ಸಾಫ್ಟ್ವೇರ್‌ ಬೇಕೇಬೇಕು
ಆ ಸಾಫ್ಟ್ವೇರ್‌ ವ್ಯವಸ್ಥೆ ಹಳೆಯ ಫೋನುಗಳಲ್ಲಿ ಅಲಭ್ಯ
2010ರ ಫೋನುಗಳು ಹೊಸ ಜಿಪಿಎಸ್‌ ಕ್ಲಾಕಿಂಗ್‌ಗೆ ಒಗ್ಗುವುದು ಅನುಮಾನ

Advertisement

Udayavani is now on Telegram. Click here to join our channel and stay updated with the latest news.

Next