Advertisement

ಹಳೆ ಪೇಪರ್‌ ಹೊರೆಯಲ್ಲ

09:45 PM Oct 04, 2019 | mahesh |

ಕೆಲವರಿಗೆ ಪ್ರತಿದಿನ ಪತ್ರಿಕೆ ಓದದಿದ್ದರೆ ಏನೋ ಕಳೆದುಕೊಂಡ ಭಾವನೆ ಮೂಡುತ್ತದೆ. ಅದಕ್ಕಾಗಿ ಮನೆಗೆ ಪೇಪರ್‌ ಹಾಕಿಸಿಕೊಳ್ಳುತ್ತಾರೆ. ಆದರೆ ಹಳೇ ಪೇಪರ್‌ ನಿರ್ವಹಣೆ ಮಾತ್ರ ತಲೆ ನೋವಾಗಿ ಪರಿಣಮಿಸುತ್ತದೆ. ನಿಯಮಿತವಾಗಿ ಹಳೆ ಪತ್ರಿಕೆಯನ್ನು ಕೊಂಡುಕೊಳ್ಳುವವನು ಬಂದರೆ ಸರಿ. ಇಲ್ಲದಿದ್ದರೆ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ನಿಮಗೊಂದು ವಿಷಯ ಗೊತ್ತೆ? ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಹಳೇ ಪೇಪರ್‌ನಿಂದ ಹಲವು ಉಪಯೋಗಗಳಿವೆ. ಅದನ್ನು ಹೇಗೆಲ್ಲ ಬಳಸಬಹುದು ಎನ್ನುವುದಕ್ಕೆ ಟಿಪ್ಸ್‌ ಇಲ್ಲಿದೆ.

Advertisement

ಗಾಜು ಒರೆಸಲು
ಮನೆಯ ಕಿಟಿಕಿಯ ಗಾಜನ್ನು ಬಟ್ಟೆಯಲ್ಲಿ ಒರೆಸುವುದರಿಂದ ಗೆರೆ ಬೀಳುತ್ತದೆ. ಅದರ ಬದಲಾಗಿ ಹಳೇ ಪೇಪರ್‌ನಿಂದ ಗಾಜನ್ನು ಸ್ವತ್ಛಗೊಳಿಸಬೇಕು. ರಾಸಾಯನಿಕ ಮತ್ತು ಸಾಬೂನು ಬದಲು ನೀರಿಗೆ ವಿನೇಗರ್‌ ಬಳಸಿ ಉಜ್ಜುವುದು ಉತ್ತಮ ಮಾರ್ಗ. ಕಾರಿನ ಗಾಜನ್ನೂ ಇದರಿಂದಲೇ ಶುಚಿಗೊಳಿಸಬಹುದು.

ಕವಾಟಿನ ಬಳಕೆಗೆ
ಅಡುಗೆ ಕೋಣೆಯ ಕವಾಟು, ವಾರ್ಡ್‌ ರೋಬ್‌, ಬಾತ್‌ರೂಮ್‌, ಉಗ್ರಾಣಗಳಲ್ಲಿ ವಸ್ತುಗಳಿಗೆ ಧೂಳು ಮೆತ್ತದಂತೆ ನೆಲಕ್ಕೆ ಪೇಪರ್‌ ಹಾಸುವುದು ಉತ್ತಮ ಮಾರ್ಗ. ಹಳೆಯದಾದಾಗ ಇದನ್ನು ಸುಲಭವಾಗಿ ಬದಲಾಯಿಸಬಹುದು ಎನ್ನುವುದು ಇದರ ಇನ್ನೊಂದು ಅನುಕೂಲತೆ. ಸುಲಭ ಮತ್ತು ಕಡಿಮೆ ಖರ್ಚಿನ ಇದು ನೋಡಲು ನೀಟಾಗಿರುತ್ತದೆ.

ಸಾಕು ಪ್ರಾಣಿಯ ತಟ್ಟೆಯ ಕೆಳಗೆ
ನೀವು ಮನೆಯಲ್ಲಿ ನಾಯಿ, ಬೆಕ್ಕು ಸಾಕುತ್ತಿದ್ದರೆ ಹಳೇ ಪೇಪರ್‌ ಬಳಕೆಗೆ ಬರುತ್ತದೆ. ಪ್ರಾಣಿಗಳು ಆಹಾರ ಸೇವಿಸುವಾಗ ಚೂರುಗಳು ಬಿದ್ದು ನೆಲ ಹಾಳಾಗುತ್ತದೆ. ಇದನ್ನು ತಡೆಯಲು ತಟ್ಟೆ ಕೆಳಗೆ ಪೇಪರ್‌ ಇಡಬಹುದು. ಇದನ್ನು ಶುಚಿಗೊಳಿಸಲು ಸುಲಭ.

ಕ್ಯಾರಿ ಬ್ಯಾಗ್‌ನೆಲದಲ್ಲಿ ಕರಗದ, ಉರಿಸಿದರೆ ವಾಯು ಮಾಲಿನ್ಯಕ್ಕೆ ಕಾರಣವಾ ಗುವ ಪ್ಲಾಸ್ಟಿಕ್‌ ಬಳಕೆ ಪರಿಸರಕ್ಕೆ ಮಾರಕ. ಹೀಗಾಗಿ ಇದಕ್ಕೆ ಪರ್ಯಾಯವಾಗಿ ಪೇಪರ್‌ ಬಳಸಬಹುದು. ಪೇಪರ್‌ ಮಡಚಿ ಗಮ್‌ ಹಾಕಿ ಕ್ಯಾರಿ ಬ್ಯಾಗ್‌ ತಯಾರಿಸಬಹುದು. ಸಣ್ಣ-ಪುಟ್ಟ, ಹಗುರ ವಸ್ತುಗಳನ್ನು ಸಾಗಿಸಲು ಇದನ್ನು ಬಳಸಬಹುದು.

Advertisement

ಇದನ್ನು ಗಮನಿಸಿ
· ಪೇಪರ್‌ ಅನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಅದನ್ನು ಜೋಡಿಸಲೆಂದೇ ಹಾಲ್‌ನ ಮೂಲೆಯಲ್ಲಿ ಸ್ಥಳ ಗುರುತಿಸಿ.
· ಪೇಪರ್‌ ಅನ್ನು ದಿನಾಂಕದ ಪ್ರಕಾರ ನೀಟಾಗಿ ಅಟ್ಟಿ ಇಡಿ. ತುರ್ತಾಗಿ ಯಾವುದಾದರೂ ದಿನಾಂಕದ ಸುದ್ದಿ ನೋಡಬೇಕಾದರೆ ಸುಲಭವಾಗಿ ತೆಗೆಯುವಂತಿರಬೇಕು.
· ಕಿಟಕಿ ಗಾಜು ಒಡೆದಿದ್ದರೆ ರಿಪೇರಿ ಮಾಡುವ ತನಕ ಪೇಪರ್‌ನಿಂದ ಮುಚ್ಚಬಹುದು.
· ತೆರೆದ ಸ್ಥಳದಲ್ಲಿರುವ ಸಣ್ಣ-ಪುಟ್ಟ ವಸ್ತುಗಳ ಮೇಲೆ ಧೂಳು ಕೂರದಂತೆ ಪೇಪರ್‌ನಿಂದ ಮುಚ್ಚಬಹುದು.
· ಗಾಜಿನ ಪ್ರೇಮ್‌ ಸಾಗಿಸುವಾಗ ಒಡೆಯದಂತೆ ಮಧ್ಯದಲ್ಲಿ ಪೇಪರ್‌ ಇಡಬೇಕು.
· ಕರಕುಶಲ ವಸ್ತುಗಳನ್ನು ತಯಾರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next