Advertisement

ಫೆ.11ರಂದು ತೆರೆ ಕಾಣಲಿದೆ ಶ್ರೀನಿ, ಅದಿತಿ ಪ್ರಭುದೇವ ನಟನೆಯ “ಓಲ್ಡ್ ಮಾಂಕ್”

02:23 PM Dec 21, 2021 | Team Udayavani |

ಬೀರಬಲ್ ಖ್ಯಾತಿಯ ಶ್ರೀನಿ ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿರುವ “ಓಲ್ಡ್ ಮಾಂಕ್” ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಫೆಬ್ರವರಿ 11ರಂದು “ಓಲ್ಡ್ ಮಾಂಕ್” ಚಿತ್ರ ಥಿಯೇಟರ್ ಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

Advertisement

“ಓಲ್ಡ್ ಮಾಂಕ್” ಚಿತ್ರ ಸೆಟ್ಟೇರಿಯಾಗಿಂದಲೂ ತನ್ನ ಭಾರೀ ಸುದ್ದಿ ಮಾಡಿದೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಹಿಟ್ ಲಿಸ್ಟ್ ಸೇರಿದೆ. ಇದೀಗ ಫೆ.11ರಂದು ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಯುಎಇನಲ್ಲಿ ಇನ್ನು ಸೆನ್ಸಾರ್‌ ಫ್ರೀ; 21 ವರ್ಷ ಮೇಲ್ಪಟ್ಟವರಿಗೆ ವೀಕ್ಷಣೆಯ ಹೊಸ ವ್ಯವಸ್ಥೆ

“ಓಲ್ಡ್ ಮಾಂಕ್” ಚಿತ್ರದಲ್ಲಿ ಶ್ರೀನಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಉಳಿದಂತೆ ಹಿರಿಯ ನಟ ರಾಜೇಶ್‌, ಡಿಂಗ್ರಿ ನಾಗರಾಜ್‌, ಎಸ್‌ ನಾರಾಯಣ್‌, ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್‌, ಸುನೀಲ್‌ ರಾವ್‌, ಸುಜಯ್‌ ತಾರಾಗಣದಲ್ಲಿದ್ದಾರೆ.  ಪ್ರದೀಪ್‌ ಶರ್ಮಾ ಚಿತ್ರದ ನಿರ್ಮಾಪಕರು. ಭರತ್​ ಪರಶುರಾಮ್​ ಛಾಯಾಗ್ರಹಣ, ಸೌರಭ್​-ವೈಭವ್​ ಸಂಗೀತ ನಿರ್ದೇಶನ, ದೀಪು ಎಸ್​. ಕುಮಾರ್ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next