Advertisement

ಹಳೆಯ ನೆನಪು, ಹೊಸ ತಂತ್ರಜ್ಞಾನ… ಏನಿದು ಟಿ-ಟ್ರೈನ್‌?

09:36 PM Jul 09, 2023 | Team Udayavani |

ಪ್ರವಾಸಿಗರನ್ನು ಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ, ಮತ್ತೆ ಪಾರಂಪರಿಕ ಟ್ರೈನೊಂದನ್ನು ಪರಿಚಯಿಸುತ್ತಿದೆ. ಇದರ ಹೆಸರು ಟಿ ಟ್ರೈನ್‌. ವಂದೇ ಭಾರತ್‌ ಮತ್ತು ವಿಸ್ಟ್ರೋಡಮ್‌ ಕೋಚ್‌ಗಳ ಸೌಲಭ್ಯ ಹೊಂದಿರುವ ಈ ಟ್ರೈನ್‌ ಸ್ಟ್ರೀಮ್‌ ಎಂಜಿನ್‌ ಮಾದರಿಯಲ್ಲಿರುತ್ತದೆ. ಆದರೆ, ಈ ಎಂಜಿನ್‌ ಮಾತ್ರ ಎಲೆಕ್ಟ್ರಿಕ್‌ ಆಧಾರವಾಗಿರುತ್ತದೆ.

Advertisement

ಏನಿದು ಟಿ-ಟ್ರೈನ್‌?

ಇದೊಂದು ವಿಶೇಷ ಪಾರಂಪರಿಕ ರೈಲು. ಆದರೆ, ಪಾರಂಪರಿಕತೆಯ ಜತೆಗೆ, ಆಧುನಿಕ ಸೌಲಭ್ಯಗಳೂ ಇದರಲ್ಲಿರುತ್ತವೆ. ಅಲ್ಲದೆ, ಅದರ ವಿಶೇಷಾನುಭವಗಳೂ ಸಿಗುತ್ತವೆ. ಇದನ್ನು ದಕ್ಷಿಣ ರೈಲ್ವೆಯಲ್ಲಿ ಬಳಕೆ ಮಾಡಲಿದ್ದು, ಪ್ರವಾಸೋದ್ಯಮದ ಉತ್ತೇಜನವೇ ಪ್ರಮುಖ ಉದ್ದೇಶ. ಅಲ್ಲದೆ, ಭಾರತೀಯ ರೈಲ್ವೆಯ ಶ್ರೀಮಂತ ಇತಿಹಾಸವನ್ನೂ ಇದು ಸಾರುತ್ತದೆ.

ಮೊದಲ ರೈಲಿನಂತೆ ವಿನ್ಯಾಸ

ಮೆಮು ಡ್ರೈವಿಂಗ್‌ ಮೋಟಾರ್‌ ಒಳಗೊಂಡ ಇದರಲ್ಲಿ ಎರಡು ಲೋಕೋಗಳಿರುತ್ತವೆ. ಅಂದರೆ, ರೈಲಿನ ಆರಂಭ ಮತ್ತು ಅಂತ್ಯದಲ್ಲಿ ಎರಡು ಎಂಜಿನ್‌ಗಳು ಇರುತ್ತವೆ. ಇದು 1895ರಲ್ಲಿ ಮೊದಲ ಬಾರಿಗೆ ದೇಶೀಯವಾಗಿ ಪರಿಚಯಿಸಿದ ಎಫ್734 ಸ್ಟೀಮ್‌ ಲೋಕೋಮೋಟಿವ್‌ ಎಂಜಿನ್‌ ರೀತಿಯೇ ಇರುತ್ತದೆ.

Advertisement

ನಾಲ್ಕು ಕೋಚ್‌

ಈ ರೈಲಿನಲ್ಲಿ ವಿಸ್ಟೋಡಮ್‌ ರೀತಿಯ ನಾಲ್ಕು ಕೋಚ್‌ಗಳಿದ್ದು, ಎಲ್ಲವೂ ಹವಾನಿಯಂತ್ರಿತವಾಗಿರುತ್ತವೆ. ಇವುಗಳನ್ನು ಇಂಟಿಗ್ರೇಟೆಡ್‌ ಕೋಚ್‌ ಫ್ಯಾಕ್ಟರಿಯಲ್ಲಿ ರೂಪಿಸಲಾಗಿದೆ. ಮೂರು ಕೋಚ್‌ಗಳು ಚೇರ್‌ ಕಾರ್‌ಗಳಾಗಿದ್ದು, ಒಂದರಲ್ಲಿ ರೆಸ್ಟೋರೆಂಟ್‌ ರೀತಿ ಇರುತ್ತದೆ.

48 ಮಂದಿಗೆ ಅವಕಾಶ

ಕೋಚ್‌ಗಳಲ್ಲಿ 48 ಮಂದಿ ಪ್ರಯಾಣಿಸಬಹುದಾಗಿದೆ. ಡಬಲ್‌ ಸೀಟ್‌ ಅರೇಂಜ್‌ಮೆಂಟ್‌ ಇರಲಿದ್ದು, ಒಂದು ರೀತಿ ವಿಸ್ಟೋಡಮ್‌ ಮತ್ತು ವಂದೇಭಾರತ್‌ ಟ್ರೈನಿನ ರೀತಿಯಲ್ಲೇ ಇರುತ್ತವೆ. ಪ್ರತಿಯೊಬ್ಬ ಪ್ರಯಾಣಿಕನಿಗೂ ಚಾರ್ಜಿಂಗ್‌ ಪೋರ್ಟಲ್‌ ನೀಡಲಾಗಿರುತ್ತದೆ. ಗ್ಲಾಸ್‌ಗಳು ಒಡೆಯದಂತೆ ಪ್ರೋಟೆಕ್ಟೀವ್‌ ಲೇಯರ್‌ ಇರುತ್ತದೆ. ರೆಸ್ಟೋರೆಂಟ್‌ ಇರುವ ಕೋಚ್‌ನಲ್ಲಿ 28 ಮಂದಿ ಪ್ರಯಾಣಿಸಬಹುದು.

ರೈಲಿನ ನಿರ್ಮಾಣ

ದಕ್ಷಿಣ ರೈಲ್ವೆಯ ಪೆರಂಬೂರು ಕ್ಯಾರೇಜ್‌ ಆ್ಯಂಡ್‌ ವ್ಯಾಗನ್‌ ವರ್ಕ್‌, ಅವಧಿ ಇಎಂಯು ಕಾರ್‌ ಶೆಡ್‌, ಟ್ರಿಚಿ ಗೋಲ್ಡನ್‌ ರಾಕ್‌ ವರ್ಕ್‌ಶಾಪ್‌ ಇದರ ನಿರ್ಮಾಣದಲ್ಲಿ ಜಂಟಿ ನಿರ್ಮಾಣದಲ್ಲಿ ಪಾತ್ರವಹಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next