Advertisement

ಕ್ಯಾನ್ಸರ್‌ನಿಂದ ಬಳಲುತ್ತಿರುವ ಯಜಮಾನ: ಆರ್ಥಿಕ ನೆರವಿಗಾಗಿ ಮನವಿ

06:00 AM Apr 11, 2018 | Team Udayavani |

ಉಡುಪಿ: ವಡ್ಡರ್ಸೆ ಎಂ.ಜಿ. ಕಾಲನಿಯ ರಘು ಪೂಜಾರಿ (45) ಅವರು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಕುಟುಂಬ ಕಂಗಾಲಾಗಿದೆ. ರಘು ಅವರು ಕೂಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ರಮಣಿ ಪೂಜಾರಿ ಅವರು ಹೋಂ ನರ್ಸ್‌ ಆಗಿ ದುಡಿಯುತ್ತಿದ್ದರು. ಒಬ್ಬ ಮಗ ಮತ್ತು ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 

Advertisement

ಗಂಟಲು ಕ್ಯಾನ್ಸರ್‌ನಿಂದ  ಬಳಲುತ್ತಿರುವ ಪತಿಯ ಔಷಧೋಪಚಾರಕ್ಕಾಗಿ ಪ್ರತಿ ತಿಂಗಳು 15,000 ರೂ. ವ್ಯಯಿಸುತ್ತಿದ್ದೇನೆ. ಗದ್ದೆ, ಒಡವೆ ಎಲ್ಲ ಮಾರಾಟ ಮಾಡಿದ್ದೇನೆ. ಸಾಲ ಮಾಡಿಯೂ ಆಗಿದೆ. ಇನ್ನು ಹಣ ಹೊಂದಿಸಿಕೊಳ್ಳುವುದೇ ಅಸಾಧ್ಯ ಎಂದು ರಮಣಿ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

ಈ ಕುಟುಂಬಕ್ಕೆ ಸಹಾಯ ಮಾಡಲು ಇಚ್ಛಿಸುವವರು ರಮಣಿ ಪೂಜಾರ್ತಿ ಅವರ ಸಿಂಡಿಕೇಟ್‌ ಬ್ಯಾಂಕ್‌ನ ವಂಡ್ಸೆ ಶಾಖೆಗೆ ಹಣ ಜಮೆ ಮಾಡಬಹುದಾಗಿದೆ. ಖಾತೆ ಸಂಖ್ಯೆ 02862250007870  IFSC  Code:  SYNB0000286.

Advertisement

Udayavani is now on Telegram. Click here to join our channel and stay updated with the latest news.

Next