ಮಂಗಳೂರು: ನಗರದ ಶಕ್ತಿನಗರದ ಕಕ್ಕೆಬೆಟ್ಟು ಎಂಬಲ್ಲಿ ಶನಿವಾರ ಪಿಕಪ್ ಲಾರಿಯೊಂದು ಢಿಕ್ಕಿಯಾಗಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಕಕ್ಕೆಬೆಟ್ಟು ಕಾರ್ಮಿಕ ಕಾಲೋನಿ ನಿವಾಸಿ ಕೊರಗಪ್ಪ (85) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಕರಾವಳಿಗರಿಗೆ ಆತಂಕ; ಆರ್ಥಿಕತೆಗೂ ಹೊಡೆತ ಭೀತಿ; ಶಿರಾಡಿ ಘಾಟಿ ಆರು ತಿಂಗಳು ಬಂದ್ ಪ್ರಸ್ತಾವ
ನೆಲದ ಹೆಂಚುಗಳನ್ನು ತುಂಬಿದ್ದ ಪಿಕಪ್ ಹಿಮ್ಮುಖ ತಿರುವು ತೆಗೆದುಕೊಳ್ಳುತ್ತಿದ್ದಾಗ ಟ್ರಕ್‌ನ ಹಿಂದೆ ನಿಂತಿದ್ದ ಕೊರಗಪ್ಪ ಅವರಿಗೆ ಢಿಕ್ಕಿ ಹೊಡೆದಿದೆ. ಕೊರಗಪ್ಪನವರ ತಲೆಯ ಭಾಗಕ್ಕೆ ಗಾಯಗವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮೃತಪಟ್ಟಿದ್ದಾರೆ.
ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.