ಇದು ಸೋಶಿಯಲ್ ಮೀಡಿಯಾ ಜಮಾನ. ಇಲ್ಲಿ ದಿನಕ್ಕೆ ಹತ್ತಾರು ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಇದರಲ್ಲಿ ಅನೇಕ ವಿಡಿಯೋ ವೈರಲ್ ಆಗುತ್ತದೆ. ಆದರೆ ಅದರ ಸತ್ಯಾಸತ್ಯತೆ ಬಗ್ಗೆ ನಾವು ಜಾಸ್ತಿಯೇನು ಯೋಚಿಸದೆ ಬೇರೊಂದು ಕಡೆ ಫಾರ್ವಡ್ ಮಾಡಿ ಬಿಡುತ್ತೇವೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮುದುಕನೊಬ್ಬ ತನ್ನ ಸೊಸೆಯನ್ನೇ ಮದುವೆಯಾಗಿರುವ ವಿಡಿಯೋವೊಂದು ಹರಿದಾಡಿತ್ತು. ತನ್ನ ಪತಿಯ ನಿಧನದ ಬಳಿಕ ತಾನು ಮಾವನನ್ನೇ ಮದುವೆಯಾಗಿದ್ದೇನೆ. ನನ್ನನು ಯಾರೂ ನೋಡಿಕೊಳ್ಳಲು ಇಲ್ಲದ ಕಾರಣ ನಾನು ಈ ಮದುವೆಯಾಗಿದ್ದೇನೆ ಎಂದು ವಿಡಿಯೋದಲ್ಲಿ ಯುವತಿ ಹೇಳಿದ್ದಾಳೆ.
ಈ ವಿಡಿಯೋ ಯೂಟ್ಯೂಬ್ ನಲ್ಲಿ ಆಪ್ಲೋಡ್ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ. 6:30 ನಿಮಿಷದ ವಿಡಿಯೋ ಕ್ಲಿಪ್ ನ ವಿಡಿಯೋ ಕೆಲ ನಿಮಿಷಗಳ ವಿಡಿಯೋವನ್ನಾಗಿ ಕಟ್ ಮಾಡಿ ರಲ್ ಮಾಡಲಾಗಿದೆ.
ದೇವಸ್ಥಾನದ ಆವರಣದಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ವಿಡಿಯೋ ಮಾಡುತ್ತಾ, ಮದುವೆಯಾಗಿದ್ದಾರೆ ಎನ್ನಲಾದ ಇಬ್ಬರಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ತನ್ನ ಇಚ್ಛೆಗೆ ಅನುಸಾರವಾಗಿ ನಾವು ಮದುವೆಯಾಗಿದ್ದೇವೆ ಇಬ್ಬರು ಹೇಳಿದ್ದಾರೆ. ಇನ್ನು ವ್ಯಕ್ತಿ ನಮ್ಮ ಮನೆಯ ವಿಚಾರವೆಂದು ಹೇಳಿದ್ದಾನೆ.
ಇದು ನಿಜವಾದ ವಿಡಿಯೋವೆಂದು ಅನೇಕ ಮಂದಿ ಇದನ್ನು ಶೇರ್ ಮಾಡಿದ್ದಾರೆ. ಆದರೆ 6:30 ನಿಮಿಷದ ಪೂರ್ತಿ ವಿಡಿಯೋ ನೋಡಿದಾಗ ಸೂಚನೆಯಲ್ಲಿ (Disclaimer ) ಇದು ಪೂರ್ತಿ ಕಾಲ್ಪನಿಕವಾಗಿರುವ ವಿಡಿಯೋ, ಇದು ಕಾಲ್ಪನಿಕ ಏಕೆಂದರೆ ವಾಸ್ತವವು ಹೇಳಲು ಅಥವಾ ತೋರಿಸಲು ತುಂಬಾ ಕಹಿಯಾಗಿರುತ್ತದೆ. ಇದೊಂದು ಸ್ಕ್ರಿಪ್ಟ್ ವಿಡಿಯೋವೆಂದು ಹೇಳಲಾಗಿದೆ.