Advertisement

ಔಷಧಕ್ಕಾಗಿ 15 ಕಿ.ಮೀ. ನಡೆದು ಬಂದ ವೃದ್ದೆ!

05:20 PM Apr 10, 2020 | Team Udayavani |

ಸುಳ್ಯ: ಕೋವಿಡ್-19 ಕಾರಣ ಲಾಕ್ ಡೌನ್ ಇರುವುದರಿಂದ ಬಹಳ ಜನರು ಪರಿತಪಿಸುತ್ತಿದ್ದಾರೆ. ವಾಹನ ಸಿಗದೆ ಪರಿತಪಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೊಲ್ಲದೊಗ್ರದ ವೃದೆಯೋರ್ವರು ಔಷಧಕ್ಕಾಗಿ 15 ಕಿ.ಮೀ ದೂರದ ಗುತ್ತಿಗಾರಿಗೆ ನಡೆದು ಬಂದ ಘಟನೆ  ನಡೆದಿದೆ.

Advertisement

ತುಂಬಾ ನಿತ್ರಾಣಗೊಂಡಿದ್ದ ಅಜ್ಜಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ಈ ವಿಷಯ ತಿಳಿದುಬಂದಿದೆ. ನಂತರ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಯುತ ಗುತ್ತಿಗಾರ್, ಗ್ರಾಮ ಪಂಚಾಯತ್ ಪಿಡಿಒ ಶ್ಯಾಮಪ್ರಸಾದ್ ಹಾಗೂ ತುರ್ತು ಕಾರ್ಯಪಡೆ ಸದಸ್ಯರು ಆಕೆಗೆ ಸೂಕ್ತ ಔಷಧದ ವ್ಯವಸ್ಥೆ ಮಾಡಿ ಖಾಸಗಿ ವಾಹನದಲ್ಲಿ ಮನೆಗೆ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next