ಹುಳಿಯಾರು: ಸ್ಥಗಿತಗೊಂಡಿರುವ ಮಾಸಾಶನವನ್ನು ಪುನರ್ ಆರಂಭಿಸು ವಂತೆ 1 ವರ್ಷದಿಂದ ಅಲೆಯುತ್ತಿದ್ದರೂ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಹುಳಿಯಾರು ಹೋಬಳಿಯ ಕಲ್ಲೇನ ಹಳ್ಳಿಯ 83ರ ಇಳಿ ವಯಸ್ಸಿನ ಚಿಕ್ಕ ತಿಮ್ಮಯ್ಯನ ಅಳಲಾಗಿದೆ.
ಕಾದುಕುಳಿತ ತಿಮ್ಮಯ್ಯ: ಚಿಕ್ಕತಿಮ್ಮಯ್ಯ ಅವರಿಗೆ 2-7-2007 ರಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ಮಂಜೂರಾಗಿತ್ತು. ಅಲ್ಲಿಂದ ಸೆಪ್ಟೆಂಬರ್ 2018 ರವರೆಗೆ ಪ್ರತಿ ತಿಂಗಳು ತಪ್ಪದೇ ಮಾಸಾಶನ ಬರುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಮಾಸಾಶನ ನಿಂತು ಹೋಗಿದೆ. ಈ ತಿಂಗಳ ಬರಬಹುದು, ಮುಂದಿನ ತಿಂಗಳು ಬರಬಹುದು ಎಂದು ವೃದ್ಧ ತಿಮ್ಮಯ್ಯ ಕಾದಿದ್ದಾರೆ.
ಬರೋಬ್ಬರಿ 6 ತಿಂಗಳಾದರೂ ಮಾಸಾ ಶನ ಬಾರದಿದ್ದಾಗ ಹುಳಿಯಾರು ನಾಡಕಚೇರಿಗೆ ಬಂದು ಮಾಸಾಶನ ಸ್ಥಗಿತಗೊಂಡಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸಂಬಂಧಪಟ್ಟವ ರಿಂದ ಬರುತ್ತೆ ಹೆದರಬೇಡಿ ಎನ್ನುವ ಭರವಸೆ ದೊರೆಯಿತೇ ವಿನಹಃ ಹಣ ಮಾತ್ರ ಬಂದಿಲ್ಲ. ಪರಿಣಾಮ ಪ್ರತಿ ತಿಂಗಳು ತಮ್ಮೂರಿಗೆ ಬರುವ ಅಂಚೆ ಸಿಬ್ಬಂದಿಯನ್ನು ಕೇಳಿ ಸೋತು ಹೋಗಿದ್ದಾರೆ.
ಪ್ರಯತ್ನ ಪಟ್ಟಿಲ್ಲ: ಅಂಚೆ ಸಿಬ್ಬಂದಿ ತಮಗೆ ಮಾಸಾಶನ ಬಂದಿಲ್ಲ ಎಂದಾ ಗಲೆಲ್ಲಾ ನಡೆದಾಡಲು ಶಕ್ತಿಯಿಲ್ಲದಿದ್ದರೂ ಮತ್ತೂಬ್ಬರ ಸಹಾಯ ಪಡೆದು ಬಸ್ ಏರಿ ನಾಡಕಚೇರಿಗೆ ಬಂದು ವಿಚಾರಿ ಸುತ್ತಿದ್ದರು. ಪ್ರತಿ ಬಾರಿ ಬಂದಾಗಲೆಲ್ಲಾ ಸಿಬ್ಬಂದಿ ಒಂದೊಂದು ಸಬೂಬು ಹೇಳಿ ಸಾಗಹಾಕುವುದು ಬಿಟ್ಟರೆ ಮಾಸಾ ಶನ ಪುನರ್ ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಪಟ್ಟಿಲ್ಲ. ವಯೋಸಹಜ ಚಿಕ್ಕತಿಮ್ಮಯ್ಯಗೆ ಕಿವಿ ಅಸ್ಪಷ್ಟವಾಗಿ ಕೇಳಿಸುತ್ತದೆ. ಕಣ್ಣುಗಳು ಅಲ್ಪಸ್ವಲ್ಪ ಮಾತ್ರ ಕಾಣುತ್ತವೆ. ಓಡಾಡಲು ಮೊದಲಿನಷ್ಟು ಶಕ್ತಿ ಉಳಿದಿಲ್ಲ. ಜೊತೆಗೆ ವಯೋಸಹಜ ಕಾಯಿಲೆಗಳು ಕಾಡು ತ್ತಿವೆ. ಉದ್ಯೋಗ ನಿಮಿತ್ತ ಮಕ್ಕಳೆಲ್ಲರೂ ಮಂಗಳೂರಿಗೆ ಗುಳೆ ಹೋಗಿರುವು ದರಿಂದ ಊಟ, ತಿಂಡಿ, ಮಾತ್ರೆ ಹೀಗೆ ಪ್ರತಿಯೊಂದಕ್ಕೂ ಆಸರೆ ಯಾಗಿದ್ದ ಮಾಸಾಶನ ಈಗ ಸ್ಥಗಿತಗೊಂಡಿರುವು ದರಿಂದ ಜೀವನ ನಿರ್ವಹಣೆ ಕಷ್ಟ ವಾಗಿದೆ. ಇನ್ನಾ ದರೂ ಅಧಿಕಾರಿಗಳು ವೃದ್ಧನ ಕಷ್ಟಕ್ಕೆ ಸ್ಪಂದಿಸುವರೇ ಎಂದು ಕಾದು ನೋಡಬೇಕಿದೆ.
● ಎಚ್.ಬಿ.ಕಿರಣ್ ಕುಮಾರ್