ಕಡೂರು: ಕಡೂರು ಮತ್ತು ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಭೂ ಮಂಜೂರು ಪ್ರಕರಣ ಭಾರೀ ಸದ್ದು ಮಾಡಿದ್ದು
ತಹಶೀಲ್ದಾರರೊಬ್ಬರು ಜೈಲು ಪಾಲಾಗಿದ್ದ ಘಟನೆ ಮಾಸುವ ಮುನ್ನವೇ ಕಡೂರಲ್ಲಿ ವೃದ್ಧಾಪ್ಯ ವೇತನ ನೀಡುವಲ್ಲೂ ಭಾರೀ ಗೋಲ್ಮಾಲ್ ನಡೆದಿದ್ದು ಬೆಳಕಿಗೆ ಬಂದಿದೆ.
Advertisement
ಕಡೂರು ತಾಲೂಕಿನ ಹೋಬಳಿಯೊಂದರಲ್ಲಿ 40-50 ವರ್ಷದವರೂ ಪ್ರತಿ ತಿಂಗಳು ವೃದ್ಧಾಪ್ಯ ವೇತನ ಪಡೆಯುತ್ತಿರುವುದು ಈಗ ಬಹಿರಂಗಗೊಂಡಿದ್ದು ಅನರ್ಹರ ಪತ್ತೆಗೆ ಆಡಳಿತ ವರ್ಗ ಮುಂದಾಗಿದೆ. ಅನರ್ಹರು ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವಂತೆ ಇಡೀ ತಾಲೂಕಿನಲ್ಲಿ ಹಿರಿಯ ನಾಗರಿಕರಿಗೆ ನೀಡುವ ವೃದ್ಧಾಪ್ಯ ವೇತನ ಅನರ್ಹರ ಪಾಲಾಗುತ್ತಿರುವ ಶಂಕೆ ಮೂಡಿದ್ದು ಈ ಅಕ್ರಮದ ಹಿಂದಿರುವ ತಪ್ಪಿತಸ್ಥ ಅಧಿಕಾರಿಗಳ ತಲೆದಂಡಕ್ಕೆ ಆಡಳಿತ ವರ್ಗ ಸಜ್ಜಾಗಿದೆ.
Related Articles
ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇವರಲ್ಲಿ ಕೇವಲ 44 ಜನ ಮಾತ್ರ ವಿಚಾರಣೆಗೆ ಹಾಜರಾಗಿದ್ದಾರೆ.
Advertisement
ವಿಚಾರಣೆ ವೇಳೆ 19 ಮಂದಿ ವೃದ್ಧಾಪ್ಯ ವೇತನ ಪಡೆಯಲು ಅನರ್ಹರು ಎಂಬುದು ಬೆಳಕಿಗೆ ಬಂದಿದೆ. 25 ಜನ ಅರ್ಹರಾಗಿದ್ದು ಉಳಿದ ಪ್ರಕರಣಗಳ ತನಿಖೆ ಬಾಕಿ ಇದೆ. ವಿಚಾರಣೆಗೆ ಹಾಜರಾಗದವರ ವೃದ್ಧಾಪ್ಯ ವೇತನ ಮಂಜೂರಾತಿ ತಡೆಹಿಡಿಯಲಾಗಿದ್ದು, ತನಿಖೆ ಮುಂದುವರೆಯಲಿದೆ. ಕಸಬಾ ಹೋಬಳಿಯಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಾಲೂಕಿನ ಎಂಟು ಹೋಬಳಿಗಳಲ್ಲಿನ ಇಂತಹ ಪ್ರಕರಣ ನಡೆದಿದೆಯೇ ಎಂದು ಪರಿಶೀಲನೆ ನಡೆಸಲು ಹೋಬಳಿಗಳ ಆರ್.ಐ. ಮತ್ತು ವಿ.ಎ.ಗಳಿಗೆ ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರು ಸೂಚನೆ ನೀಡಿದ್ದು ಮುಂದಿನ ಎರಡು ವಾರದಲ್ಲಿ ಸಂಪೂರ್ಣ ತನಿಖೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲು ನಿರ್ಧರಿಸಲಾಗಿದೆ.
ತಾಲೂಕಿನ ಒಂದು ಹೋಬಳಿಯಲ್ಲಿ ವಿಚಾರಣೆಗೆ ಹಾಜರಾದ ಕೆಲವರಲ್ಲೇ ಇಷ್ಟೊಂದು ಅನರ್ಹ ಪ್ರಕರಣಗಳು ಬೆಳಕಿಗೆ ಬಂದಹಿನ್ನೆಲೆಯಲ್ಲಿ ಉಳಿದ ಎಂಟು ಹೋಬಳಿಗಳಲ್ಲೂ ಪರಿಶೀಲಿಸಿ ಅನರ್ಹರ ಪತ್ತೆಗೆ ಮುಂದಾಗಲಾಗಿದೆ. ಮುಂದಿನ ಎರಡು ವಾರಗಳಲ್ಲಿ ವರದಿ ಜಿಲ್ಲಾಡಳಿತದ ಕೈ ಸೇರಲಿದ್ದು, ತಪ್ಪಿತಸ್ಥ ಅಧಿಕಾರಿಗಳ ತಲೆದಂಡ ಖಚಿತವಾಗಿದೆ.
ಒಟ್ಟಾರೆ ನ್ಯಾಯಯುತವಾಗಿ ಸಂಧ್ಯಾಕಾಲದಲ್ಲಿರುವ ವೃದ್ಧರಿಗೆ ಸೇರಬೇಕಾದ ಮಾಸಾಶನ ಅನರ್ಹರ ಪಾಲಾಗುತ್ತಿದೆ. ಈ
ಸಂಬಂಧ ಜಿಲ್ಲಾಡಳಿತ ಬೇರೆ ತಾಲೂಕುಗಳಲ್ಲೂ ಪ್ರಕರಣ ನಡೆದಿದೆಯೇ ಎಂಬುದರ ತನಿಖೆಗೆ ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ. ಅನೇಕರ ತಲೆದಂಡ?
ತಾಲೂಕಿನ ಉಳಿದ ಹೋಬಳಿಗಳಲ್ಲಿಯೂ ಇಂತಹ ಅನರ್ಹ ಪ್ರಕರಣಗಳು ಹೆಚ್ಚಿವೆ ಎಂಬ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿವೆ. ಕೆಲ ದಿನಗಳ ಹಿಂದೆ ಅನರ್ಹರಿಗೆ ಮಾಸಾಶನ ಮಂಜೂರು ಮಾಡಿರುವ ಆರೋಪ ದೃಢಪಟ್ಟು ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಸಂಪೂರ್ಣ ಪರಿಶೀಲನೆ ನಡೆದರೆ ತನಿಖೆ ದಿಕ್ಕು ತಪ್ಪದಿದ್ದರೆ ಅನೇಕರ ತಲೆದಂಡ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿದೆ. ತಾಲೂಕಿನ ಕಸಬಾ ಹೋಬಳಿಯಲ್ಲಿ ಅನರ್ಹರು ವೃದ್ಧಾಪ್ಯ ವೇತನ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದ ತಕ್ಷಣ ಮಾಸಾಶನ ಫಲಾನುಭವಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗದವರ ಹಣ ತಡೆಹಿಡಿಯಲಾಗಿದೆ. ಮುಂದಿನ ಎರಡು ವಾರದಲ್ಲಿ ಪ್ರಕರಣದ ತನಿಖೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು.
*ಪೂರ್ಣಿಮಾ. ತಹಶೀಲ್ದಾರ್. ಕಡೂರು ತಾಲೂಕಿನಲ್ಲಿ ಅನರ್ಹರು ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಜಿಲ್ಲೆಯ ಉಳಿದ ತಾಲೂಕು ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದಿಲ್ಲ.
*ನಾರಾಯಣರಡ್ಡಿ ಕನಕರಡ್ಡಿ,
ಅಪರ ಜಿಲ್ಲಾಧಿಕಾರಿ. *ಎ.ಜೆ.ಪ್ರಕಾಶ್ಮೂರ್ತಿ