Advertisement
ಶಿಲಾ ಶಾಸನವು 82 ಸೆಂ.ಮೀ ಅಗಲ, 66 ಸೆಂ.ಮೀ ಎತ್ತರ ಹಾಗೂ 15 ಸೆಂ.ಮೀ ದಪ್ಪವನ್ನು ಹೊಂದಿದ್ದು, ಗ್ರಾನೈಟ್ ಶಿಲೆಯಿಂದ ಮಾಡಲ್ಪಟ್ಟಿದೆ. 12 ಸಾಲುಗಳನ್ನು ಹೊಂದಿರುವ ಈ ಶಿಲಾ ಶಾಸನದಲ್ಲಿ ಅಕ್ಷರಗಳು ಅಲ್ಲಲ್ಲಿ ತೃಟಿತವಾಗಿರುವುದು ಕಂಡು ಬರುತ್ತದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಿಲಾ ಶಾಸನದ ಮೇಲ್ಭಾಗದಲ್ಲಿ ಸೂರ್ಯ – ಚಂದ್ರ ಹಾಗೂ ಬಲ ಭಾಗದಿಂದ ಖಡ್ಗ, ದೀಪ, ಶಿವಲಿಂಗ ಮತ್ತು ನಂದಿಯನ್ನು ಕೆತ್ತನೆ ಮಾಡಲಾಗಿದೆ. ನಂತರದಲ್ಲಿ ಶಾಸನದ ಪಾಠವನ್ನು ಕಾಣಬಹುದು. ಸ್ವಸ್ತಿ ಶ್ರೀ ಎಂಬ ವಾಕ್ಯದೊಂದಿಗೆ ಪ್ರಾರಂಭವಾಗುವ ಈ ಶಾಸನದಲ್ಲಿ ಶಕವರುಷ 1211, ವಿರೋಧಿ ಸಂವತ್ಸರದ ಉಲ್ಲೇಖವನ್ನು ಕಾಣಬಹುದು. (ಕ್ರಿಸ್ತ ಶಕೆಗೆ ಪರಿವರ್ತಿಸಿದಾಗ 1289ಕ್ಕೆ ಸರಿ ಹೊಂದುತ್ತದೆ) ಹಾಗೆಯೇ ಅರಿರಾಯ ಗಂಡರ ದಾವಣಿ ಕಾಳಲದೇವಿ ಮತ್ತು ಪಾಂಡ್ಯ ಅರಸ ಎಂಬ ಉಲ್ಲೇಖವು ಕಂಡುಬರುತ್ತದೆ.
Advertisement
ಶಿರ್ಲಾಲು : 13ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನ ಪತ್ತೆ
01:30 AM Dec 05, 2018 | Karthik A |
Advertisement
Udayavani is now on Telegram. Click here to join our channel and stay updated with the latest news.