ದಾಂಡೇಲಿ : ನಗರದ ಬಸ್ ನಿಲ್ದಾಣದಲ್ಲಿ ಎಲ್ಲಿಂದಲೊ ಬಂದಿರುವ ವೃದ್ದೆಯೊಬ್ಬರು ಮನೆ ಮಂದಿ ಬರುವಿಕೆಗಾಗಿ ಕಾಯುತ್ತಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಮಂಗಳವಾರ ರಾತ್ರಿಯೆ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ವೃದ್ದೆ ಕೃಷ್ಣಬಾಯಿಯನ್ನು ನೋಡಿದ ಸ್ಥಳೀಯ ಬಾಂಬೆಚಾಳದ ಯುವಕ ನವೀನ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೆ ಸ್ಥಳಕ್ಕಾಗಮಿಸಿದ ಪೊಲೀಸರು ವೃದ್ದೆಯನ್ನು ನವೀನ ಅವರ ಜೊತೆ 112 ತುರ್ತು ವಾಹನದ ಮೂಲಕ ನಗರದೆಲ್ಲೆಡೆ ಕರೆದುಕೊಂಡು ಹೋಗಿ ವಿಳಾಸ ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ಕೊನೆಗೆ ವೃದ್ದೆ ಅಸ್ಪಷ್ಟ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಅಜ್ಜಿಯ ವಿಳಾಸ ಪತ್ತೆಯಾಗದೇ ಬಸ್ ನಿಲ್ದಾಣದ ಕ್ಯಾಂಟೀನಿನಲ್ಲಿ ಇರಿಸಿದ್ದಾರೆ.
ಬುಧವಾರ ಮುಂಜಾನೆಯಿಂದ ವೃದ್ದೆ ತನ್ನ ಮನೆ ಮಂದಿ ಬರುವಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಈವರೇಗೆ ಬಂದಿಲ್ಲ. ಈ ಅಜ್ಜಿಯ ಬಗ್ಗೆ ಮಾಹಿತಿಯಿದ್ದವರು ಅಜ್ಜಿಯ ಮನೆ ಮಂದಿಗೆ ಮಾಹಿತಿ ನೀಡುವಂತೆ ಪೊಲೀಸರು ಕರೆ ನೀಡಿದ್ದಾರೆ.
ಇಂದು ಬೆಳಗ್ಗಿನಿಂದಲೆ ಅಜ್ಜಿಯ ಪತ್ತೆ ಕಾರ್ಯದಲ್ಲಿ ನವೀನ್ ಹಾಗೂ ದಲಿತ ಸಂಘರ್ಷ ಸಮಿತಿ ಕೆಂಪು ಸೇನೆಯ ತಾಲೂಕು ಘಟಕದ ಅಧ್ಯಕ್ಷೆ ಮೀನಾಕ್ಷಿ ಇರ್ಲಾ ಅವರುಗಳು ತೊಡಗಿದ್ದಾರೆ. ಅಜ್ಜಿ ಇದೀಗ ಬಸ್ ನಿಲ್ದಾಣದ ಕ್ಯಾಂಟೀನ್ ಪಕ್ಕದಲ್ಲಿದ್ದಾರೆ.