Advertisement

ಹಳೇ ಕಾಲದ ಶಿಲಾಶಾಸನ ಪತ್ತೆ

10:02 PM May 21, 2020 | Sriram |

ಉಡುಪಿ: ಆತ್ರಾಡಿ ಮೂಲಕ ಮೂಡುಬೆಳ್ಳೆಗೆ ವಾಹನದಲ್ಲಿ ಸಂಚರಿಸುವಾಗ ರಸ್ತೆ ಪಕ್ಕದ ಮೈಲುಗಲ್ಲಿನಲ್ಲಿ ಕಿ.ಮೀ. ಪರಿಶೀಲಿಸುವ ಸಾರ್ವಜನಿಕರಿಗೆ ಗುಂಡುಪಾದೆಯ ಬಸ್‌ ನಿಲ್ದಾಣದ ಬಳಿ ಶಿಲಾಶಾಸನಕ್ಕೆ ಬಿಳಿ ಬಣ್ಣ ಹಚ್ಚಿರುವುದು ಕಂಡುಬಂದಿದೆ.

Advertisement

ಈ ಶಾಸನದ ಮೇಲ್ಭಾಗದಲ್ಲಿ ಸೂರ್ಯ ಚಂದ್ರ, ಮಧ್ಯದಲ್ಲಿ ದೊಡ್ಡದಾದ ಶಿವಲಿಂಗ ಕಂಡುಬಂದಿದ್ದರೂ ಶಾಸನದಲ್ಲಿ ಬರೆಯುವ ಭಾಗದಲ್ಲಿ ಸಿಮೆಂಟ್‌ ಹಚ್ಚಿದಂತೆ ಕಾಣಿಸುವುದರಿಂದ ಸರಿಯಾದ ಚಿತ್ರಣ ಕಾಣದಂತಾಗಿದೆ. ಈ ಶಿಲಾಶಾಸನವು ಸುಮಾರು ಎರಡೂವರೆ ಅಡಿ ಉದ್ದ, ಒಂದೂವರೆ ಅಡಿ ಅಗಲ ಹೊಂದಿದೆ.

ಈ ಶಾಸನವು ಮುಂದಿನ ದಿನಗಳಲ್ಲಿ ಮೈಲುಗಲ್ಲಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು, ಗತಕಾಲದ ಶಿಲಾಶಾಸನವೊಂದು ರಸ್ತೆಬದಿಯಲ್ಲಿ ಮೈಲುಗಲ್ಲಾಗಿ ಪರಿವರ್ತನೆಯಾಗದೇ ಮುಂದಿನ ಪೀಳಿಗೆಗೆ ಇದರ ಮಾಹಿತಿ ತಿಳಿಯುವಂತಾಗಬೇಕು ಹಾಗೂ ಶಾಸನದ ರಕ್ಷಣೆಯಾಗಬೇಕು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕು ಎನ್ನುವುದು ಹಲವರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next