Advertisement
ನಗರದ ಚಾಮರಾಜಪುರಂನ ಶ್ರೀ ರವಿವರ್ಮ ಚಿತ್ರಕಲಾ ಶಾಲೆ ಮೈಸೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ರಾಜ ರವಿವರ್ಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂವತ್ಸರಿಕ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಕಲಾವಿದರು ನಾಡಿನ ನಿರಂಕುಶ ಪ್ರಭುಗಳಾಗಿದ್ದು, ಭಾಷೆ ಮತ್ತು ಮಾಧ್ಯಮ ಬೇರೆ ಬೇರೆ ಯಾದರೂ ಮನಸ್ಸಿನಲ್ಲಿ ಅನಿಸಿದ್ದನ್ನು ನೇರವಾಗಿ ನಿರ್ಭಯದಿಂದ ಅಭಿವ್ಯಕ್ತಿ ಗೊಳಿಸಬೇಕು.
Related Articles
Advertisement
ಭ್ರಷ್ಟಾಚಾರ ರಹಿತ, ನೇರ ನುಡಿಯ ಸ್ವಭಾವದ ವ್ಯಕ್ತಿತ್ವ ಪ್ರತಿಯೊಬ್ಬರನ್ನು ನಿರೀಕ್ಷೆಗೂ ಮೀರಿದ ಪ್ರತಿಫಲವನ್ನು ನೀಡಲಿದೆ. ಆದ್ದರಿಂದ ಪ್ರಾಮಾಣಿಕ ಸಮರ್ಪಣ ಭಾವದಿಂದ ಸಮಾಜಕ್ಕೆ ಕೆಲಸ ಮಾಡಬೇಕಿದ್ದು, ವರ್ತಮಾನದ ಶಿಶುವಾಗಿರುವ ನಾವು ನಮ್ಮೊಳಗಿನ ದನಿಯನ್ನು ಅಭಿವ್ಯಕ್ತಿ ಗೊಳಿಸಬೇಕಿದೆ ಎಂದು ಹೇಳಿದರು.
ಸರ್ಕಾರಗಳು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ನೀಡುವ ಪ್ರಶಸ್ತಿಗಳಂತೆ ಚಿತ್ರಕಲಾವಿದ ಹಾಗೂ ದೃಶ್ಯ ಕಲಾವಿದರಿಗೂ ಪ್ರಶಸ್ತಿ ನೀಡಿದರೆ ಕಲೆಯ ಚಟುವಟಿಕೆಗಳು ಮತ್ತಷ್ಟು ಉತ್ತುಂಗಕ್ಕೆ ಏರುವ ಜತೆಗೆ ಕಲೆಯ ಬೆಳವಣಿಗೆಗೂ ಸಹಾಯವಾಗಲಿದೆ. ಜತೆಗೆ ಪ್ರತಿಯೊಂದು ಕಲೆಯ ಶಾಲೆಗಳು ಪ್ರಾಯೋಗಿಕ, ತಾತ್ವಿಕವಾಗಿ ಕಲೆಯ ಬಗ್ಗೆ ಬೋಧನೆ ಮಾಡುತ್ತವೆ. ಆದರೆ ಪಠ್ಯದ ಜತೆಯಲ್ಲಿ ಪಠ್ಯೇತರ ಚಟುವಟಿಕೆ ಮನ್ನಣೆ ನೀಡುವ ಕಾಲೇಜುಗಳು ಪ್ರಗತಿ ಸಾಧಿಸಲಿದೆ.
ಆದ್ದರಿಂದ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಗಳನ್ನು ಹುಟ್ಟು ಹಾಕುವ ಜತೆಗೆ ಪಠ್ಯೇತರಕ್ಕೆ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಕಲೆ ಅಭಿವೃದ್ಧಿ ಪಡಿಸಬೇಕು ಎಂದರು. ಕಾರ್ಯಕ್ರಮದ ಅಂಗವಾಗಿ ಶಾಲೆಯ ವಾರ್ಷಿಕ ಸಾಧಕರಾದ ಪೂಜಾ ಮೆಹ್ತಾ, ಮೋಹನ್ ರಾಜ್ ಹಾಗೂ ಬಿ. ಕುಮಾರ್ ಅವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ರವಿವರ್ಮ ಚಿತ್ರಕಲಾ ಶಾಲೆ ಪ್ರಾಚಾರ್ಯ ಶಿವಕುಮಾರ ಕೆಸರಮಡು, ಕಾವಾ ಕಾಲೇಜಿನ ಮುಖ್ಯಸ್ಥ ಬಸವರಾಜು ಹಾಜರಿದ್ದರು.