Advertisement
ಬೆಂಡೆಕಾಯಿಂದ ಪಲ್ಯ, ಫ್ರೈ , ಕರಿ, ಸಾಂಬಾರು, ಬೆಂಡೆಕಾಯಿ ಹುಳಿ,ಗೊಜ್ಜು ಹೀಗೆ ನಾನಾ ರೀತಿಯ ಅಡುಗೆಯನ್ನು ಮಾಡಬಹುದು.ಆದರೆ ನಾವು ಇಂದು ನಿಮಗಾಗಿ ಬೆಂಡೆಕಾಯಿ ಮಸಾಲ ಫ್ರೈ ಮತ್ತು ಬೆಂಡೆ ಪಲ್ಯವನ್ನು ಮಾಡುವ ವಿಧಾನವನ್ನು ತಿಳಿಸುತ್ತಿದ್ದೇವೆ.
ಬೇಕಾಗುವ ಸಾಮಗ್ರಿಗಳು
ಬೆಂಡೆಕಾಯಿ-10ರಿಂದ 15, ಕೊತ್ತಂಬರಿ ಪುಡಿ-1ಚಮಚ, ಜೀರಿಗೆ ಪುಡಿ-ಅರ್ಧ ಚಮಚ, ಖಾರದ ಪುಡಿ-1ಚಮಚ, ಜೀರಿಗೆ ಪುಡಿ-ಸ್ವಲ್ಪ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ,ಒರೆಸಿ ಅದರಲ್ಲಿ ನೀರಿನಂಶ ಇದ್ದರೆ ತೆಗೆಯಿರಿ. ತದನಂತರ ಅದನ್ನು ಉದ್ದವಾಗಿ ಎರಡು ಭಾಗವಾಗಿ ಕಟ್ ಮಾಡಿ ಒಂದು ಬೌಲ್ ಗೆ ಹಾಕಿರಿ. ಆಮೇಲೆ ಇದಕ್ಕೆ ಜೀರಿಗೆ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ, ಒಂದು ಚಮಚ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ, ಕಾದನಂತರ ಮಿಶ್ರಣಮಾಡಿಟ್ಟ ಬೆಂಡೆಕಾಯಿಯನ್ನು ಹಾಕಿ ಎಣ್ಣೆಯಲ್ಲಿ ಕರಿಯಿರಿ.ಚಿಪ್ಸ್ ತರ ಗರಿಗರಿಯಾಗಿ ಕರಿದರೆ ರುಚಿಕರವಾದ ಬೆಂಡೆ ಮಸಾಲ ಫ್ರೈ ಸವಿಯಲು ಸಿದ್ಧ.
Related Articles
ಬೇಕಾಗುವ ಸಾಮಗ್ರಿಗಳು
ಬೆಂಡೆಕಾಯಿ-20ರಿಂದ 25, ಸಾಸಿವೆ-1ಚಮಚ, ಜೀರಿಗೆ-ಅರ್ಧ ಚಮಚ, ಟೊಮೆಟೋ -1, ಅರಿಶಿನ ಪುಡಿ-ಸ್ವಲ್ಪ, ಗರಂ ಮಸಾಲ-ಅರ್ಧ ಚಮಚ, ಖಾರದ ಪುಡಿ-2ಚಮಚ, ಈರುಳ್ಳಿ -1, ಶುಂಠಿ-ಬೆಳ್ಳುಳ್ಳಿ ಪೇಸ್ಟ್-1ಚಮಚ, ಎಣ್ಣೆ-3 ಚಮಚ, ಕಸೂರಿ ಮೇಥಿ-ಸ್ವಲ್ಪ ಮತ್ತು ರುಚಿಗೆ ತಕ್ಕಷ್ಟು ಉಪ್ಪು.
Advertisement
ತಯಾರಿಸುವ ವಿಧಾನಮೊದಲಿಗೆ ಬೆಂಡೆಕಾಯಿಯನ್ನು ತೊಳೆದು ಸಣ್ಣದಾಗಿ ಹೆಚ್ಚಿರಿ. ನಂತರ ಒಂದು ಬಾಣಲೆಗೆ 2ಚಮಚ ಎಣ್ಣೆಯನ್ನು ಹಾಕಿ ಕಟ್ ಮಾಡಿಟ್ಟ ಬೆಂಡೆಕಾಯಿಯನ್ನು ಹಾಕಿ 2ರಿಂದ 3 ನಿಮಿಷಗಳ ಕಾಲ ಹುರಿದಿಟ್ಟುಕೊಳ್ಳಿ. ತದನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ,ಈರುಳ್ಳಿ,ಟೊಮೆಟೋ,ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೇಯಿಸಿರಿ.ನಂತರ ಅರಿಶಿನ ಪುಡಿ,ಖಾರದ ಪುಡಿ,ಕಸೂರಿ ಮೇಥಿ,ಗರಂ ಮಸಾಲ ಪುಡಿ ಹಾಗೂ ಹುರಿದಿಟ್ಟ ಬೆಂಡೆಕಾಯಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ ಬೇಯಿಸಿದರೆ ಬೆಂಡೆಕಾಯಿ ಪಲ್ಯ ಸವಿಯಲು ಸಿದ್ಧ. ಇದು ಚಪಾತಿ ಹಾಗೂ ಅನ್ನದ ಜೊತೆಗೆ ಚೆನ್ನಾಗಿ ಹೊಂದುತ್ತದೆ.