Advertisement

ಒಕಿನಾವಾದಿಂದ ಹೊಸ ವಿದ್ಯುತ್‌ ಸ್ಕೂಟರ್‌; 40 ಲೀ. ಬೂಟ್‌ ಸ್ಪೇಸ್‌,ಮೂರು ವರ್ಣಗಳಲ್ಲಿ ಲಭ್ಯ

09:07 PM Mar 25, 2022 | Team Udayavani |

ಭಾರತದ್ದೇ ಆದ ಒಕಿನಾವಾ ಆಟೋಟೆಕ್‌ ಕಂಪನಿಯು ಭಾರತದಲ್ಲಿ ಹೊಸ ವಿದ್ಯುತ್‌ ಚಾಲಿತ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Advertisement

“ಒಖಿ 90′ ಎಂಬ ಈ ಸ್ಕೂಟರ್‌ ನೋಡಲು ಸಾಂಪ್ರದಾಯಿಕ ಶೈಲಿಯಲ್ಲೇ ಇದ್ದು, ಡೇ ಟೈಂ ಎಲ್‌ಇಡಿ ರನ್ನಿಂಗ್‌ ಲೈಟ್ಸ್‌, ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳು, ಭಾರತೀಯ ರಸ್ತೆಗಳಿಗಾಗಿಯೇ ವಿಶೇಷವಾಗಿ ವಿನ್ಯಾಸ ಗೊಳಿಸಲಾಗಿರುವ 16 ಇಂಚು ಅಲಾಯ್ಡ್ ವ್ಹೀಲ್‌ಗ‌ಳು, 40 ಲೀಟರ್‌ ಬೂಟ್‌ ಸ್ಪೇಸ್‌ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಕೆಂಪು, ಬಿಳಿ, ನೀಲಿ ಹಾಗೂ ಬೂದು ಬಣ್ಣಗಳಲ್ಲಿ ಇವು ಲಭ್ಯವಿದ್ದು, ಆರಂಭಿಕ ಬೆಲೆ 1.22 ಲಕ್ಷ ರೂ. ಎಂದು ಕಂಪನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next