Advertisement

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಪಕ್ಷಪಾತ ಧೋರಣೆ

05:22 PM Nov 08, 2022 | Team Udayavani |

ತುಮಕೂರು: ಜಿಲ್ಲಾ ಒಕ್ಕಲಿಗರ ಸಂಘದ ಆಡಳಿ ತಾಧಿಕಾರಿ ಚುನಾವಣಾ ವಿಚಾರದಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಅವರನ್ನು ವಜಾ ಮಾಡಬೇಕು ಹಾಗೂ ಷೇರು ಹಣ ಕಟ್ಟಿರುವ ಎಲ್ಲರಿಗೂ ಸದಸ್ಯತ್ವ ನೀಡಿ, ಮತದಾನಕ್ಕೆ ಅವಕಾಶ ಕಲ್ಪಿಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ತುಮಕೂರು ಉಪವಿಭಾಗಾಧಿಕಾರಿ ಅಜಯ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಒಕ್ಕಲಿಗ ಮುಖಂಡರಾದ ಬ್ಯಾಟರಂಗೇ ಗೌಡ ಮಾತನಾಡಿ, ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತಾವಧಿ 2022ರ ಮಾರ್ಚ್‌ 31ಕ್ಕೆ ಪೂರ್ಣಗೊಂಡಿದ್ದು, ಸಹಕಾರ ಇಲಾಖೆ ಆಡಳಿತಾಧಿಕಾರಿ ಗಳನ್ನು ನೇಮಕ ಮಾಡಿದೆ. ಆದರೆ ನಿಗದಿತ ಅವಧಿ ಯೊಳಗೆ ಚುನಾವಣೆ ನಡೆಸದ ಕಾರಣ ಕರ್ನಾಟಕ ಹೈಕೋರ್ಟ್‌ ಸದರಿ ಆಡಳಿತಾಧಿಕಾರಿಗಳಿಗೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ಆದೇಶ ಮಾಡಿದೆ ಎಂದರು.

ಶಿಫಾರಸು, ಸದಸ್ಯತ್ವ: ಹೈಕೋರ್ಟ್‌ ಆದೇಶವನ್ನು ನೆಪವಾಗಿಟ್ಟುಕೊಂಡು 2008-09ನೇ ಸಾಲಿನಿಂದಲೂ ಸುಮಾರು 22 ಸಾವಿರ ಜನರು ಷೇರು ಹಣ ಹೂಡಿಕೆ ಮಾಡಿ, ಸದಸ್ಯತ್ವಕ್ಕಾಗಿ ಕಾಯುತಿದ್ದರೂ ಅವರಿಗೆ ಸದಸ್ಯತ್ವ ನೀಡದೆ ಕೆಲವು ವ್ಯಕ್ತಿಗಳ ಕಡೆ ಯಿಂದ ಶಿಫಾರಸಾಗಿ ಇತ್ತೀಚೆಗೆ ಷೇರು ಶುಲ್ಕ ತುಂಬಿ ರುವ 500 ಜನರಿಗೆ ಮಾತ್ರ ಸದಸ್ಯತ್ವ ನೀಡಿ, ಅವ ರನ್ನೇ ಮತದಾರರೆಂದು ಘೋಷಿಸಿ ಚುನಾವಣೆ ನಡೆ ಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಿ: ಕೂಡಲೇ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಿ, ಈಗಾಗಲೇ ಷೇರು ಬಂಡವಾಳ ಹೂಡಿ, ಸದಸ್ಯತ್ವಕ್ಕೆ ಕಾಯು ತ್ತಿರುವ 22 ಸಾವಿರ ಜನರಿಗೂ ಸದಸ್ಯತ್ವ ನೀಡಿ, ಮತದಾರರಾಗಿ ಪರಿಗಣಿಸಿ ಚುನಾವಣೆ ನಡೆಸ ಬೇಕೆಂದು ಆಗ್ರಹಿಸಿದರು. ಬೆಳ್ಳಿ ಬ್ಲಿಡ್‌ ಬ್ಯಾಂಕ್‌ನ ಬೆಳ್ಳಿ ಲೋಕೇಶ್‌ ಮಾತ ನಾಡಿ, ಒಕ್ಕಲಿಗರ ಸಂಘದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ವ್ಯಕ್ತಿ ಕೆಲವರ ಕೈಗೊಂಬೆ ಯಂತೆ ವರ್ತಿಸುತ್ತಿದ್ದು, ಮತದಾರರ ಕರಡು ಪಟ್ಟಿಗೆ ಸುಮಾರು 125ಕ್ಕೂ ಹೆಚ್ಚು ಅಕ್ಷೇಪಣೆಗಳನ್ನು ಸಲ್ಲಿಸಿದ್ದರೂ ಒಂದಕ್ಕೂ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.

ಡಿಆರ್‌-ಒಕ್ಕಲಿಗ ಮುಖಂಡರ ನಡುವೆ ವಾಗ್ವಾದ: ಮುಖಂಡರ ಒತ್ತಾಯದಂತೆ ಮನವಿ ಸ್ವೀಕರಿಸಲು ತುಮಕೂರು ಉಪವಿಭಾಗಾಧಿಕಾರಿ ಅಜಯ್‌ ಅವರೊಂದಿಗೆ ಆಗಮಿಸಿದ, ಸಹಕಾರ ಇಲಾಖೆಯ ಡಿ.ಆರ್‌.ಎನ್‌.ವೆಂಕಟೇಶ್‌ ಅವರೊಂದಿಗೆ ವಾಗ್ವಾದಕ್ಕೆ ಇಳಿದ ಮುಖಂಡರು, ಆಡಳಿತಾಧಿಕಾರಿ ಗಳೊಂದಿಗೆ ನೀವು ಸಹ ಸೇರಿ ಆರ್ಹರಿಗೆ ಸದಸ್ಯತ್ವ ನೀಡದೆ ಅನ್ಯಾಯ ಮಾಡುತ್ತಿದ್ದೀರಿ, ಮೊದಲು ಆಡಳಿತಾಧಿಕಾರಿಯನ್ನು ವಜಾಗೊಳಿಸಿ ಎಂದು ಒತ್ತಾಯಿಸಿದರು. ಈ ವೇಳೆ ಕೆಲ ಕಾಲ ಅಧಿಕಾರಿ ಯೊಂದಿಗೆ ಜೋರು ಮಾತಿನಲ್ಲಿಯೇ ವಾಗ್ವಾದಕ್ಕಿಳಿ ದರು. ಉಪವಿಭಾಗಾಧಿಕಾರಿ ಅಜಯ್‌ ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿ,ಮುಂದಿನ ಎರಡು ದಿನದಲ್ಲಿ ಸಹಕಾರ ಇಲಾಖೆ ಅಧಿಕಾರಿಗಳು ಮತ್ತು ಮುಖಂಡರ ಸಭೆ ಕರೆದು ಚರ್ಚೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಭರವಸೆ ನೀಡಿದರು.

Advertisement

ಉಪವಿಭಾಗಾಧಿಕಾರಿಗಳ ಭರವಸೆಯ ನಂತರ ಪ್ರತಿಭಟನೆ ಕೈಬಿಡಲಾಯಿತು. ದೇವಪ್ರಕಾಶ್‌, ವಕೀಲ ರಾದ ರವಿಗೌಡ, ಚಿಕ್ಕರಂಗಣ್ಣ, ಕೆಂಪರಾಜು, ಕೈದಾಳ ರಮೇಶ್‌, ಸತ್ಯಪ್ಪ, ವಿಜಯಕುಮಾರ್‌, ಮಂಜು ನಾಥಗೌಡ, ಪಾಲಿಕೆ ದಸ್ಯರಾದ ಧರಣೇಂದ್ರ ಕುಮಾರ್‌, ಶ್ರೀನಿವಾಸಕುಮಾರ್‌, ಮನೋಹರ ಗೌಡ, ಲಕ್ಕೇಗೌಡ, ಕುಣಿಗಲ್‌ ಶ್ರೀನಿವಾಸಗೌಡ, ಚಿಕ್ಕಸಾರಂಗಿ ಕುಮಾರ್‌ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next