Advertisement

ತೈಲ ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ನಿಂದ ಪ್ರತಿಭಟನೆ

06:46 PM Jun 26, 2021 | Team Udayavani |

ಕೆಜಿಎಫ್:ದಿನ ಬಳಕೆ ವಸ್ತುಗಳು ಮತ್ತು ಇಂಧನ ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ತಾಲೂಕು ಕಚೇರಿಗೆಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೀಕ್ಷಕ ಕೆ.ರಾಜೇಂದ್ರನ್‌, ಈ ದೇಶವನ್ನುಆಳುತ್ತಿರುವ ಪ್ರಧಾನಿ, ಲಕ್ಷಾಂತರ ಜನ ಕೋವಿಡ್‌ನಿಂದ ಮೃತಪಟ್ಟಿರುವವರಿಗೆಪರಿಹಾರ ನೀಡಲು ನಿರಾಕರಿಸಿದ್ದಾರೆ.

Advertisement

ನಮ್ಮಲ್ಲಿ ಪರಿಹಾರ ನೀಡಲು ದುಡ್ಡು ಇಲ್ಲಎಂದು ಸುಪ್ರಿಂಕೋರ್ಟಿಗೆ ಹೇಳುತ್ತಾರೆ. ಈ ಸರ್ಕಾರ 3500 ಕೋಟಿ ರೂ.ವಲ್ಲಭಾಯ್‌ ಪಟೇಲ್‌ ಪ್ರತಿಮೆಗೆ ಖರ್ಚು ಮಾಡಿದೆ. 10500 ಪಿಎಂ ಕೇರ್‌ ಫ‌ಂಡ್‌ವಸೂಲಿ ಮಾಡಿದ್ದಾರೆ. ಕನಿಷ್ಠ ಒಂದು ಕುಟುಂಬಕ್ಕೆ 10 ಸಾವಿರ ರೂ. ನೀಡಬೇಕಿತ್ತು.ಅದುಕೊಡಲಿಲ್ಲ. ಇದೇ ಬಿಜೆಪಿ ಅಚ್ಚೇ ದಿನ್‌ ಎಂದು ಮೂದಲಿಸಿದರು.

ಸುಳ್ಳು ಹೇಳಿ ಆಡಳಿತ ನಡೆಸುತ್ತಿದೆ: ಬಡ ಕುಟುಂಬದವರಿಗೆ ಲಾಕ್‌ಡೌನ್‌ಸಮಯದಲ್ಲಿ ಊಟ ಮಾಡಲು ಸಹಶಕ್ತರಿಲ್ಲ. ದೆಹಲಿಯಲ್ಲಿ ರೈತರ ಚಳವಳಿಗೆ ಬೆಲೆಕೊಡುತ್ತಿಲ್ಲ. ಸುಮ್ಮನೆ ಸುಳ್ಳು ಹೇಳಿಕೊಂಡು ಆಡಳಿತ ನಡೆಸುತ್ತಿರುವ ಇವರಿಂದಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ.

ಬಿಜಿಎಂಎಲ್‌ ಕಾರ್ಮಿಕರಿಗೆ 52 ಕೋಟಿ ರೂ.ಕೊಡಬೇಕಿತ್ತು. ಅದನ್ನುಕೂಡಕೊಡುತ್ತಿಲ್ಲ ಎಂದು ಆರೋಪಿಸಿದರು.ಜೆಡಿಎಸ್‌ನಿಂದ ಲೋಕಸಭೆ ಚುನಾವಣೆಗೆ ನಿಂತಿದ್ದ ಕೋಲಾರ ಕೇಶವ ಎಂಬಾತನನ್ನು ಕರೆದುಕೊಂಡು ಬಂದು ಕೆಲವು ಮಂದಿ, ಅವರನ್ನು ಚುನಾವಣೆಗೆ ನಿಲ್ಲಿಸಲುಹೊರಟಿದ್ದಾರೆ.

ಕೆಜಿಎಫ್ನಲ್ಲಿ ದುಡ್ಡು ಕೊಟ್ಟರೆ ಚುನಾವಣೆಯಲ್ಲಿ ಗೆಲ್ಲಬಹುದುಎಂದು ಅಂದುಕೊಂಡಿದ್ದಾರೆ. ಜೆಡಿಎಸ್‌ ಮುಖಂಡರು ಮೋಸ ಮಾಡಿದ್ದಾರೆ ಎಂದುಹೇಳುತ್ತಿದ್ದಾರೆ. ಈತನೇ ಮೋಸ ಮಾಡಿದ್ದರಿಂದ ಹೈಕೋರ್ಟನಲ್ಲಿ ಕೇಸ್‌ ಹಾಕಿದ್ದಾರೆ.ನಮ್ಮ ಮಾಜಿ ಶಾಸಕರಿಗೆ ಕೂಡ ಮೋಸ ಮಾಡಿದ್ದಾರೆ. ನಮ್ಮಲ್ಲಿರುವ ವ್ಯಕ್ತಿಯನ್ನುಅಭ್ಯರ್ಥಿಯನ್ನಾಗಿ ಮಾಡಿ ವಿಧಾನಸಭೆಗೆಕಳಿಸಬೇಕು ಎಂದು ಹೇಳಿದರು.

Advertisement

ನಗರಸಭೆಮಾಜಿಅಧ್ಯಕ್ಷದಯಾನಂದ್‌ ಮಾತನಾಡಿ,ಅಸಂಘಟಿತಕಾರ್ಮಿಕರಿಗೆ,ಕೋವಿಡ್‌ನಿಂದ ಮೃತಪಟ್ಟವರಿಗೆ ಈ ಸರ್ಕಾರ ಏನೂ ಮಾಡಿಲ್ಲ. ಬರೀಘೋಷಣೆಯಲ್ಲಿಯೇ ಇದೆ. ಅವರಿಗೆ ಪಕ್ಷದ ಕಿತ್ತಾಟವನ್ನು ಸರಿ ಹೊಂದಿಸುವುದೇಕಷ್ಟವಾಗಿದೆ ಎಂದು ಆರೋಪಿಸಿದರು. ನಂತರ ತಾಲೂಕುಕಚೇರಿ ಸಿಬ್ಬಂದಿಗೆ ಮನವಿಸಲ್ಲಿಸಲಾಯಿತು. ಮುಖಂಡರಾದ ಪರಂಧಾಮನ್‌, ನೂರುಲ್ಲಾ, ಶಣ್ಮುಗಬಾಬು,ಬಾಬು, ನಾಗರಾಜ್‌, ನಾಮದೇವ್‌, ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next