Advertisement

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

07:56 PM Jun 16, 2021 | Team Udayavani |

ಮದ್ದೂರು: ಪೆಟ್ರೋಲ್‌ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ಕಾರ್ಯಕರ್ತರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಪೆಟ್ರೋಲ್‌ ಬಂಕ್‌ ಬಳಿಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಕೆ.ಹೊನ್ನಲಗೆರೆ ಬಿ.ಹೊಸೂರು ಗ್ರಾಮದ ಕೀರ್ತನಪೆಟ್ರೋಲ್‌ ಬಂಕ್‌ ಆವರಣದಲ್ಲಿ ಕೆಪಿಸಿಸಿಸದಸ್ಯ ಎಸ್‌.ಗುರುಚರಣ್‌ ನೇತೃತ್ವದಲ್ಲಿ ಜಮಾವಣೆಗೊಂಡು ಕೇಂದ್ರ-ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲಉತ್ಪನ್ನಗಳ ಬೆಲೆ ಇಳಿಕೆಯಾಗಿದ್ದರೂಪ್ರಧಾನಿ ನರೇಂದ್ರಮೋದಿ ನೇತೃತ್ವದಸರ್ಕಾರ ದಿನನಿತ್ಯ ಡೀಸೆಲ್‌ ಹಾಗೂಪೆಟ್ರೋಲ್‌ ಬೆಲೆ ಹೆಚ್ಚಳ ಮಾಡುವ ಜತೆಗೆದೇಶದಲ್ಲಿ ದಶಕ ದಾಟಿದರೂ ಯಾವುದೇಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿರುವುದಾಗಿ ದೂರಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದಜೋಗೀಗೌಡ, ಪಿ. ಸಂದರ್ಶ, ಕಿಸಾನ್‌ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್‌.ಮೋಹನ್‌ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ಅಧ್ಯಕ್ಷ ಕದಲೂರು ರಾಮಕೃಷ್ಣ,ಮುಖಂಡರಾದ ನಾಗೇಗೌಡ, ಕೆ.ಆರ್‌.ಮಹೇಶ್‌, ಗೋಪಿ, ಅರುಣ್‌ಕುಮಾರ್‌,ಅಭಿಷೇಕ್‌, ಆಶೀಪ್‌ ಅಲಿಖಾನ್‌,ರಾಜೇಶ್‌ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next