Advertisement

ಏರಿ ತಗ್ಗಿದ ಕಚ್ಚಾ ತೈಲ ಬೆಲೆ

11:17 PM Oct 11, 2019 | Team Udayavani |

ಹಾಂಕಾಂಗ್‌: ಇರಾನ್‌ನ ತೈಲ ಹಡಗಿನ ಮೇಲೆ ರಾಕೆಟ್‌ ದಾಳಿ ನಡೆದ ಬಳಿಕ ಕಚ್ಚಾ ತೈಲದ ಬೆಲೆಯಲ್ಲಿ ಏಕಾಏಕಿ ಏರಿಕೆಯಾಗಿದೆ. ಬ್ರೆಂಟ್‌ ಕಚ್ಚಾ ತೈಲದ ಬೆಲೆ ಶೇ.2.3ರಷ್ಟು ಏರಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 60.46 ಅಮೆರಿಕನ್‌ ಡಾಲರ್‌ ವರೆಗೆ ಒಂದು ಹಂತದಲ್ಲಿ ಏರಿಕೆಯಾಗಿತ್ತು. ವೆಸ್ಟ್‌ ಟೆಕ್ಸಾಸ್‌ ಇಂಟರ್‌ ಮಿಡಿಯೇಟ್‌ ಕಚ್ಚಾ ತೈಲಕ್ಕೆ ಶೇ.2.1ರಷ್ಟು ಅಂದರೆ ಪ್ರತಿ ಬ್ಯಾರೆಲ್‌ಗೆ 54.69 ಅಮೆರಿಕನ್‌ ಡಾಲರ್‌ನಷ್ಟು ಏರಿಕೆಯಾಗಿತ್ತು. ಆದರೆ ಈ ಏರಿಕೆ ಕೇವಲ ಒಂದು ಹಂತದ ವರೆಗೆ ಮಾತ್ರ ಇತ್ತು. ನಂತರ ಕಚ್ಚಾ ತೈಲದ ಬೆಲೆ ಯಥಾ ಸ್ಥಿತಿಗೆ ತಲುಪಿದವು. ಸದ್ಯಕ್ಕೆ ಬೆಲೆ ಯಥಾಸ್ಥಿತಿಗೆ ಬಂದಿದ್ದರೂ, ಕೊಲ್ಲಿ ಪ್ರದೇಶದಲ್ಲಿ ತೈಲ ಸಾಗಿಸುವ ಹಡಗುಗಳ ಮೇಲಿನ ಭದ್ರತೆ ಮತ್ತು ರಾಜಕೀಯ ಸ್ಥಿತ್ಯಂತರದ ಮೇಲೆ ಯಾವ ರೀತಿಯ ಪ್ರತಿಕೂಲ ಪರಿಣಾಮ ಉಂಟಾಗುತ್ತದೆಯೋ ಎಂಬ ಆತಂಕವನ್ನು ನಿರ್ಮಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next