ಹುಬ್ಬಳ್ಳಿ: ಇಂಧನ ತೈಲ ಬೆಲೆ ಗಗನಮುಖಿಯಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಂಚ ಸಮಾಧಾನ ಒದಗಿಸುವ ಸುಳಿವು ನೀಡಿದ್ದಾರೆ.
ಉಪ ಚುನಾವಣೆಯ ಬಳಿಕ ತೈಲದ ಮೇಲಿನ ಕರ ಇಳಿಸುವ ಕುರಿತು ನಿರ್ಧರಿಸುವುದಾಗಿ ತಿಳಿಸಿದ್ದಾರೆ.
ರಾಜ್ಯದ ಆರ್ಥಿಕತೆಯ ಮೇಲೆ ತೈಲ ಬೆಲೆ ಅವಲಂಬಿತ ವಾಗಿದೆ. ಕರ ಇಳಿಸುವ ಬಗ್ಗೆ ಉಪ ಚುನಾವಣೆಯ ಬಳಿಕ ಪುನರವಲೋಕನ ಮಾಡುತ್ತೇನೆ. ಆರ್ಥಿಕತೆ ಸುಧಾರಣೆ ಯಾದರೆ ತೈಲದ ಮೇಲಿನ ಕರ ಇಳಿಸುವುದು ಸಾಧ್ಯ. ಜನರ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಆರ್‌ಎಸ್‌ಎಸ್ ಹೊಗಳಿಕೆ ವಿಚಾರದ ಬಗ್ಗೆ ಈಗಾಗಲೇ ಉತ್ತರಿಸಿದ್ದೇನೆ. ಇನ್ನು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಹಾನಗಲ್-ಸಿಂದಗಿ ಕ್ಷೇತ್ರಗಳಲ್ಲಿ ಹೆಚ್ಚಿನ ಸಮಯ ಮೀಸಲಿರಿಸಿ ಪ್ರಚಾರ ಮಾಡುತ್ತಿದ್ದೇನೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅತೀ ಹೆಚ್ಚು ಮತಗಳಿಂದ ಆಯ್ಕೆ ಆಗುತ್ತಾರೆ. ಹಾನಗಲ್ ಅಳಿಯ ಬೊಮ್ಮಾಯಿ ಇಲ್ಲಿಗೆ ಏನು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅಲ್ಲಿಗೆ ಹೋಗಿಯೇ ಅವರಿಗೆ ವಿವರಣೆ ನೀಡುತ್ತೇನೆ ಎಂದರು.
ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ