ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ಕಚ್ಛಾ ತೈಲದ ಬೆಲೆ 110 ಡಾಲರ್ ನಲ್ಲೇ ಮುಂದುವರಿದಿರುವುದು ಜಾಗತಿಕ ಹಣದುಬ್ಬರಕ್ಕಿಂತಲೂ ಹೆಚ್ಚು ಸಮಸ್ಯೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಇದನ್ನೂ ಓದಿ:ರಸಗೊಬ್ಬರ,ಕೀಟನಾಶಕ ಮಳಿಗೆಗಳ ಮೇಲೆ ಕೃಷಿ ಅಧಿಕಾರಿಗಳ ದಿಢೀರ್ ದಾಳಿ
“ ಒಂದು ವೇಳೆ ಬ್ಯಾರೆಲ್ ತೈಲ ಬೆಲೆ 110 ಡಾಲರ್ ನಲ್ಲಿಯೇ ಮುಂದುವರಿದಲ್ಲಿ, ಆಗ ನೀವು ಕೇವಲ ಹಣದುಬ್ಬರದ ಬಗ್ಗೆ ಮಾತ್ರ ಮಾತನಾಡಬೇಡಿ, ಯಾಕೆಂದರೆ ನೀವು ಅದಕ್ಕಿಂತಲೂ ದೊಡ್ಡದಾದ ಸಮಸ್ಯೆಯ ಬಗ್ಗೆ ಮಾತನಾಡಬೇಕಾಗುತ್ತದೆ. ಆರ್ಥಿಕ ಹಿಂಜರಿತದ ಪದ ಎಲ್ಲಿಂದ ಬಂತು ಎಂಬುದು ನಿಮಗೆ ಗೊತ್ತಾ? ಎಂಬುದಾಗಿ ಪುರಿ ದಾವೋಸ್ ನಲ್ಲಿ ಸಿಎನ್ ಬಿಸಿ ಟಿವಿ18ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ಒಂದು ವೇಳೆ ಜಾಗತಿಕ ಆರ್ಥಿಕತೆ ಆ ದಿಕ್ಕಿನಲ್ಲಿ ಸಾಗಿದರೆ, ಆಗ ತೈಲ ಉತ್ಪಾದಕರು ಸೇರಿದಂತೆ ಪ್ರತಿಯೊಬ್ಬರು ಹಣದುಬ್ಬರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಪುರಿ ಎಚ್ಚರಿಸಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಇಂಧನ ಬೆಲೆ ಸೇರಿದಂತೆ ಹಲವಾರು ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿರುವುದಾಗಿ ವರದಿ ತಿಳಿಸಿದೆ.