Advertisement

ತೈಲ ಬೆಲೆ ಏರಿಕೆ: ಕೇಂದ್ರದ ಭೂತದಹನ

09:58 AM Jun 07, 2018 | Team Udayavani |

ಕ‌ಲಬುರಗಿ: ಪೆಟ್ರೋಲ್‌ ಬೆಲೆಯನ್ನು 79ರೂ., ಡಿಸೆಲ್‌ನ್ನು 70ರೂ.ಗೆ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲಕ್ಕೆ 50ರೂ. ಹೆಚ್ಚಳ ಮಾಡಿರುವುದನ್ನು ಖಂಡಿಸಿ ನಗರದ ಸರ್ದಾರ ವಲ್ಲಭಬಾಯಿ ಪಟೇಲ್‌ ವೃತ್ತದಲ್ಲಿ ಎಸ್‌ಯುಸಿಐ ಕಾರ್ಯಕರ್ತರು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಎಚ್‌.ವಿ.ದಿವಾಕರ, ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಇಬ್ರಾಹಿಂಪೂರ, ಕೇಂದ್ರ ಸರ್ಕಾರವು ಜನವಿರೋಧಿ ನೀತಿ ಹೊಂದಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ತೈಲ ಬೆಲೆಗಳನ್ನು ರೂ.ಗಳ ಲೆಕ್ಕದಲ್ಲಿ ಹೆಚ್ಚಿಸುತ್ತಿದೆ. ಆದರೆ ದರ ಇಳಿಸುವಾಗ ಪೈಸೆಗಳ ಲೆಕ್ಕದಲ್ಲಿ ಇಳಿಸುತ್ತಿದೆ. ಇದು ಅನ್ಯಾಯ ಹಾಗೂ ವಿಪರ್ಯಾಸ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲಗಳ ಬೆಲೆ 2013ರಿಂದ ಕುಸಿತಗೊಂಡಿದ್ದು, ಒಂದು ಸಮಯದಲ್ಲಿ ಒಂದು ಬ್ಯಾರೆಲ್‌ ಗೆ 30 ಡಾಲರ್‌ನಷ್ಟು ಕಡಿಮೆಯಾಗಿದೆ. ಅಂದರೆ ಒಂದು ಲೀಟರ್‌ ಪೆಟ್ರೋಲ್‌ 16.88ರೂ.ಗೆ ಸಿಗಬಹುದಿತ್ತು. ಆದರೂ ತೈಲ ಬೆಲೆ ದರಗಳು ಇಳಿಕೆಯಾಗದೇ ಹೆಚ್ಚುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್‌ ಮೇಲೆ ಶೇ.205 ರಷ್ಟು ಹಾಗೂ ಡಿಸೆಲ್‌ ಮೇಲೆ ಶೇ.436 ರಷ್ಟು ಕೇಂದ್ರ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. 2014 ರಿಂದ ಕೇಂದ್ರ ಅಬಕಾರಿ ಸುಂಕ ಹೆಚ್ಚುತ್ತಲೇ ಹೋಗುತ್ತಿದೆ. ಕಚ್ಚಾತೈಲದ ಶುದ್ಧೀಕರಣ ಹಂತದಲ್ಲಿ ತಗಲುವ ವೆಚ್ಚ ಕೇವಲ 38 ರೂ., ಇದಕ್ಕೆ ಹತ್ತಾರು ರೂಪಗಳ ತೆರಿಗೆ ವಿಧಿಸಿ 80 ರೂ.ಗಳನ್ನು ವಿಧಿಸಿದೆ. ಇದು ಹಗಲು ದರೋಡೆ ಎಂದು ತರಾಟೆಗೆ ತೆಗೆದುಕೊಂಡರು.

ಈ ಹೆಚ್ಚುವರಿ ದರ ಕಳೆದ ನಾಲ್ಕು ವರ್ಷಗಳಲ್ಲಿ 16 ಲಕ್ಷ ಕೋಟಿ ರೂ.ಗಳಷ್ಟು ಕೇಂದ್ರ ಸರ್ಕಾರದ ಖಜಾನೆ ಸೇರಿದೆ. ಈ ದರೋಡೆ ಹಣವನ್ನು ದೇಶದ ಅತಿ ಶ್ರೀಮಂತರ ಸಾಲ ಮನ್ನಾ ಮಾಡಲು ನೀಡಲಾಗಿದೆ. ಚುನಾವಣೆ ಮುಗಿವವರೆಗೆ ತಡೆದು ನಂತರ ಏರಿಕೆ ಮಾಡಲಾಗಿದೆ ಎಂದು ದೂರಿದರು. ಕೂಡಲೇ ತೈಲೋತ್ಪನ್ನಗಳ ಬೆಲೆ ಹೆಚ್ಚಳ ಹಿಂದೆ ಪಡೆಯಬೇಕು, ಇಲ್ಲವಾದರೆ ಬೆಲೆ ಹಿಂದೆ ಪಡೆಯುವವರೆಗೆ ಹೋರಾಟಕ್ಕೆ ಮುಂದಾಗಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next