Advertisement

ಹಜ್‌ ತೀರ್ಥಾಟಕರಿಗೆ ನೆರವಾದ ಒಐಸಿಸಿ ಸ್ವಯಂಸೇವಕರು

12:29 AM Aug 14, 2019 | Team Udayavani |

ಕಾಸರಗೋಡು : ಸಮಸ್ಯೆ ಅನುಭವಿಸುತ್ತಿರುವ ಹಜ್ಜ್ ತೀರ್ಥಾ ಟಕರಿಗೆ ಒಐಸಿಸಿ ಹಜ್‌ ಸ್ವಯಂ ಸೇವಕರ ಕಾರ್ಯಾಚರಣೆ ಜೆದ್ದಾ ಮಿನಾಯಿಯಲ್ಲಿ ಪ್ರಗತಿ ಹಂತದಲ್ಲಿದೆ. ದಾರಿ ತಪ್ಪಿದ ಹಲವಾರು ಹಜ್ಜಿಗಳಿಗೆ ಮಾರ್ಗದರ್ಶನ ನೀಡಿ, ವೃದ್ಧಾಪ್ಯ ಕಾರಣ, ಶಾರೀರಿಕ ಅಸ್ವಸ್ಥತೆಗಳಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ ಗಾಲಿಕುರ್ಚಿಯಲ್ಲಿ ಸೇವೆ ನೀಡಿ, ವೈದ್ಯಕೀಯ ಸೇವೆ ಲಭ್ಯಗೊಳಿಸಿ, ತಂಪು ಪಾನೀಯಗಳನ್ನು ವಿತರಿಸಿ, ಸ್ವಯಂಸೇವಕರು ಇನ್ನಿರುವ ಎರಡು ದಿನಗಳಲ್ಲಿ ಮಿನಾಯಿಯಲ್ಲಿ ಇರಲಿದೆ ಎಂದು ಸೌದಿ ರೀಜನಲ್ ಸಮಿತಿ ಅಧ್ಯಕ್ಷ ಕೆಟಿಎ ಮುನೀರ್‌ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಇಂಡಿಯನ್‌ ಹಜ್‌ ಮಿಶನ್‌ನ ನಿರ್ದೇಶನಗಳ ಅನುಸಾರ ಸ್ವಯಂ ಸೇವಕರು ಕಾರ್ಯಾಚರಿಸುತ್ತಿದ್ದಾರೆ. ದಮ್ಮಾಂ, ರಿಯಾದ್‌, ಜಿಸಾನ್‌, ಅಬಹ ಮೊದಲಾದ ಸ್ಥಳಗಳಲ್ಲಿ ಸ್ವಯಂಸೇವಕರ ಸಹಿತ ಮುನ್ನೂರಕ್ಕಿಂತ ಹೆಚ್ಚು ಮಂದಿ ಒಐಸಿಸಿ ಕಾರ್ಯಕರ್ತರು ಸೆಲ್ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವಾಗ ನೂರಾರು ಮಂದಿ ವಿವಿಧ ಸಂಘಟನೆಗಳ ಒಕ್ಕೂಟವಾದ ಹಜ್‌ ವೆಲ್ಫೇರ್‌ ಫಾರಂನ ಅಧೀನದಲ್ಲಿ ಸೇವಾ ರಂಗದಲ್ಲಿರುವುದಾಗಿ ಒಐಸಿಸಿ ಹಜ್ಜ್ ಸೆಲ್ ಅಧ್ಯಕ್ಷ ಮುನೀರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next