Advertisement

ಟ್ವೆಂಟಿ20ಯಲ್ಲಿ 1,500 ರನ್‌ ರೋಹಿತ್‌2ನೇ ಆಟಗಾರ

08:55 AM Dec 21, 2017 | Team Udayavani |

ಕಟಕ್‌: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಜೇಯ ದ್ವಿಶತಕ ಸಿಡಿಸಿ ಗಮನ ಸೆಳೆದಿದ್ದ ರೋಹಿತ್‌ ಶರ್ಮ ಅವರು ಯುವ ಆಟಗಾರರನ್ನು ಒಳಗೊಂಡ ಟ್ವೆಂಟಿ20 ತಂಡವನ್ನು ಕೂಡ ಮುನ್ನಡೆಸುತ್ತಿದ್ದಾರೆ. ಕಟಕ್‌ನಲ್ಲಿ ಬುಧವಾರ ನಡೆದ ಮೊದಲ ಟ್ವೆಂಟಿ20 ಪಂದ್ಯದಲ್ಲಿ ಅವರು 17 ರನ್ನಿಗೆ ಔಟಾದರೂ ಟ್ವೆಂಟಿ20ರಲ್ಲಿ 1500 ರನ್‌ ಪೂರ್ತಿಗೊಳಿಸಿದ ಭಾರತದ ಎರಡನೇ ಆಟಗಾರ ಎಂದೆನಿಸಿಕೊಂಡಿದ್ದಾರೆ. 

Advertisement

ಈ ಪಂದ್ಯದ ಮೊದಲು ರೋಹಿತ್‌ ಟ್ವೆಂಟಿ20ಯಲ್ಲಿ 1485 ರನ್‌ ಗಳಿಸಿದ್ದರು ಮತ್ತು ಅವರಿಗೆ 15 ರನ್ನುಗಳ ಆವಶ್ಯಕತೆಯಿತ್ತು. ಈ ಪಂದ್ಯದಲ್ಲಿ 17 ರನ್‌ ಗಳಿಸುವ ಮೂಲಕ ಅವರು ಈ ಸಾಧನೆಗೈದರು. ವಿರಾಟ್‌ ಕೊಹ್ಲಿ ಈಗಾಗಲೇ 1,500 ರನ್‌ ಹೊಡೆದಿದ್ದಾರೆ.

ರೋಹಿತ್‌ ಇಷ್ಟರವರೆಗೆ 68 ಟ್ವೆಂಟಿ20 ಪಂದ್ಯಗಳನ್ನಾಡಿದ್ದು 30.30 ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಒಂದು ಶತಕ ಮತ್ತು 12 ಅರ್ಧಶತಕ ಹೊಡೆದಿದ್ದಾರೆ. ರೋಹಿತ್‌ ಟ್ವೆಂಟಿ20 ಇತಿಹಾಸದಲ್ಲಿ 1,500 ರನ್‌ ಪೂರ್ತಿಗೊಳಿಸಿದ 14ನೇ ಕ್ರಿಕೆಟಿಗ ಆಗಿದ್ದಾರೆ. 52.86 ಸರಾಸರಿಯಲ್ಲಿ ರನ್‌ ಪೇರಿಸಿರುವ ಕೊಹ್ಲಿ 1,956 ರನ್‌ ಗಳಿಸಿದ್ದಾರೆ. ಇದು ಟ್ವೆಂಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಗರಿಷ್ಠ ಸಾಧನೆಯಾಗಿದೆ. 18 ಅರ್ಧಶತಕ ಹೊಡೆದಿರುವ ಅವರು ಶತಕ ದಾಖಲಿಸಿಲ್ಲ.

ಟ್ವೆಂಟಿ20ಯಲ್ಲಿ ಗರಿಷ್ಠ ರನ್‌ ಗಳಿಸಿದವರಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡಿನ ಬ್ರೆಂಡನ್‌ ಮೆಕಲಮ್‌ ಅಗ್ರಸ್ಥಾನದಲ್ಲಿದ್ದಾರೆ. 70 ಪಂದ್ಯ ಆಡಿರುವ ಮೆಕಲಮ್‌ 35.66 ಸರಾಸರಿಯಲ್ಲಿ 2,140 ರನ್‌ ಹೊಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next