Advertisement

ಅಕ್ಷಿತ್‌ ಶಶಿಕುಮಾರ್‌ “ಓ ಮೈ ಲವ್‌”ಜೂ.24 ಕ್ಕೆ ತೆರೆಗೆ

12:25 PM May 10, 2022 | Team Udayavani |

ಪ್ರೀತಿ ಪ್ರೇಮದ ಜೊತೆಗೆ ತಂದೆ ಮಗನ ಸಂಬಂಧದ ಕಥಾನಕ ಹೊಂದಿರುವ ಆ್ಯಕ್ಷನ್‌ ಲವ್‌ ಸಿನಿಮಾ “ಓ ಮೈ ಲವ್‌’ ಚಿತ್ರದ ಗ್ಲಿಂಪ್ಸ್‌ ಎ2 ಮ್ಯೂಸಿಕ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.  ಈ ಗ್ಲಿಂಪ್ಸ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಖುಷಿಯಾಗಿದೆ.

Advertisement

ಸ್ಮೈಲ್‌ ಶ್ರೀನು ನಿರ್ದೇಶನದ ಈ ಚಿತ್ರವನ್ನು ಜಿ.ರಾಮಾಂಜಿನಿ ನಿರ್ಮಿಸಿದ್ದಾರೆ. ಜೊತೆಗೆ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದು, ಶ್ರೀನು ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದಾರೆ. ಶಶಿಕುಮಾರ್‌ ಪುತ್ರ ಅಕ್ಷಿತ್‌ ನಾಯಕರಾಗಿರುವ ಈ ಚಿತ್ರದಲ್ಲಿ ಕೀರ್ತಿ ನಾಯಕಿ. ಈಗಾಗಲೇ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜೂ. 24ಕ್ಕೆ “ಓ ಮೈ ಲವ್‌’ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚರಣ್‌ ಅರ್ಜುನ್‌ ಸಂಗೀತ ಸಂಯೋಜಿಸಿರುವ ಈ ಚಿತ್ರದ ಎಲ್ಲಾ ಹಾಡುಗಳನ್ನು ಡಾ. ವಿ.ನಾಗೇಂದ್ರ ಪ್ರಸಾದ್‌ ಸಾಹಿತ್ಯ ರಚಿಸಿದರೆ, ಮುರಳಿ ನೃತ್ಯ ಸಂಯೋಜನೆ ಮಾಡಿದ್ದಾರೆ. ತೆಲುಗು ಖಳನಟ ದೇವ್‌ ಗಿಲ್‌, ಎಸ್‌.ನಾರಾಯಣ್‌, ಸಾಧುಕೋಕಿಲ, ಟೆನ್ನಿಸ್‌ ಕೃಷ್ಣ ಹಾಗೂ ಪವಿತ್ರಾ ಲೋಕೇಶ್‌ ಚಿತ್ರದ ತಾರಾಗಣದಲ್ಲಿದ್ದಾರೆ. ಸದ್ಯದಲ್ಲೇ ಟ್ರೇಲರ್‌ ರಿಲೀಸ್‌ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next