Advertisement

ಶ್ರೀನು ಮೊಗದಲ್ಲಿ ‘ಓ ಮೈ ಲವ್‌’ ಸ್ಮೈಲ್

04:22 PM Sep 11, 2022 | Team Udayavani |

ಸ್ಮೈಲ್ ಶ್ರೀನು ನಿರ್ದೇಶನದ “ಓ ಮೈ ಲವ್‌’ ಚಿತ್ರ 50 ದಿನ ಪೂರೈಸಿದ್ದು, ಚಿತ್ರ ತಂಡ ಖುಷಿಯಾಗಿದೆ. ಅಕ್ಷಿತ್ ಶಶಿಕುಮಾರ್ ಮತ್ತು ಕೀರ್ತಿ ಕಲ್ಕೆರೆ ಮುಖ್ಯಪಾತ್ರದಲ್ಲಿ ಚಿತ್ರವನ್ನು ಜಿ ರಾಮಾಂಜಿನಿ ನಿರ್ಮಿಸಿದ್ದರು.

Advertisement

ಈ ಬಗ್ಗೆ ಮಾತನಾಡುವ ಶ್ರೀನು, “ನನ್ನ ಹತ್ತು ವರ್ಷಗಳ ಸಿನಿ ಬದುಕಿನಲ್ಲಿ ಅತಿಹೆಚ್ಚು ತೃಪ್ತಿ ತಂದುಕೊಟ್ಟ ಚಿತ್ರವಿದು. ಈ ಒಂದು ಯಶಸ್ಸಿಗೆ ನನ್ನಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಕಲಾವಿದರು ಹಾಗೂ ತಂತ್ರಜ್ಞರುಗಳು ಕಾರಣ. ಒಂದು ಚಿತ್ರಕ್ಕೆ ಕಲಾವಿದರಷ್ಟೇ ತಾಂತ್ರಿಕ ಬಳಗವೂ ಅಷ್ಟೇ ಮುಖ್ಯ. ಅದರಂತೆ ಓ ಮೈ ಲವ್‌ ಚಿತ್ರದ ಯಶಸ್ಸಿನಲ್ಲಿ ತಾಂತ್ರಿಕ ವರ್ಗದ ಪಾಲು ದೊಡ್ಡದಿದೆ. ಅವರ ಸಹಕಾರವಿಲ್ಲದೇ ಹೋಗಿದ್ದರೆ ಸಿನಿಮಾ ಇಷ್ಟೊಂದು ಅದ್ಭುತವಾಗಿ ಮೂಡಿಬರುತ್ತಿರಲಿಲ್ಲ. ನನ್ನ ಪ್ರಯತ್ನಕ್ಕೆ ಸಾಥ್‌ ನೀಡಿದ ಜಿಸಿಬಿ ಪ್ರೊಡಕ್ಷನ್ಸ್‌ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಉತ್ತಮ ಚಿತ್ರಗಳನ್ನು ನಿರ್ಮಿಸಲಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next