Advertisement
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕರಡು ಮತದಾರರ ಪಟ್ಟಿ ಪ್ರಕಟ-ಪರಿಶೀಲನೆ, ತಿದ್ದುಪಡಿ, ಸೇರ್ಪಡೆ,ಮಾರ್ಪಾಡು ಹಾಗೂ ಮತದಾರ ಪಟ್ಟಿಪರಿಷ್ಕರಣೆ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಈ ಕುರಿತಂತೆ ಮತಗಟ್ಟೆವಾರು ವ್ಯಾಪಕ ಪ್ರಚಾರ ಮಾಡಬೇಕು. ಕಡಿಮೆ ನೋಂದಣಿ ಇರುವ ಕಡೆ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು.
Related Articles
Advertisement
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಮತದಾರರ ಪರಿಷ್ಕರಣೆ ಕುರಿತಂತೆ ಎಲ್ಲ ತಹಶೀಲ್ದಾರಗಳು ವೈಯಕ್ತಿಕವಾಗಿ ಗಮನಹರಿಸಬೇಕು. ಬಿಎಲ್‌ಒಗಳೊಂದಿಗೆ ಪ್ರತಿನಿತ್ಯ ಮಾತನಾಡಿ, ಮತಗಟ್ಟೆವಾರು ಮತದಾರರ ಪರಿಷ್ಕರಣೆ ಕುರಿತಂತೆ ಮಾಹಿತಿ ಪಡೆಯಬೇಕು. ಪ್ರಗತಿ ಕಡಿಮೆ ಇರುವ ಮತಗಟ್ಟೆಗೆಭೇಟಿ ನೀಡಿ ಪ್ರಗತಿಗೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ 1,470ಮತಗಟ್ಟೆಗಳಿವೆ. ಈ ಪೈಕಿ 254 ನಗರ ಪ್ರದೇಶಗಳಲ್ಲಿಹಾಗೂ 1,216 ಗ್ರಾಮೀಣ ಪ್ರದೇಶಗಳಲ್ಲಿವೆ. ಎಲ್ಲಮತಗಟ್ಟೆಗಳಿಗೂ ರ್‍ಯಾಂಪ್ ವ್ಯವಸ್ಥೆ, ಕುಡಿಯುವ ನೀರು, ಅಗತ್ಯ ಪಿಠೊಪಕರಣಗಳು, ವಿದ್ಯುತ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳು ಒಳಗೊಂಡಿವೆ. 2019ರಯೋಜಿತ ಜಿಲ್ಲೆಯ ಜನಸಂಖ್ಯೆ 17,44,036 ಒಳಗೊಂಡಿದೆ. ಮತದಾರರ 2020 ನ.18ರವರೆಗೆ ಮತದಾರರ ನೋಂದಣಿಯಂತೆ 12,66,772 ಮತದಾರರಿದ್ದಾರೆ. ಜಿಲ್ಲೆಯ ಜನಸಂಖ್ಯೆಯ ಶೇ. 71.06 ಮತದಾರರ ಪ್ರಮಾಣವಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ವಿವರಿಸಿ, ಹೊಸ ನೋಂದಣಿ, ತಿದ್ದುಪಡಿ ಹಾಗೂ ಮಾರ್ಪಡಿಗಾಗಿ ಸ್ವೀಕರಿಸಿರುವ ಅರ್ಜಿಗಳ ವಿವರಕುರಿತಂತೆ ಸಭೆಗೆ ಮಾಹಿತಿ ನೀಡಿದರು.
ಜಿಪಂ ಸಿಇಒ ರಮೇಶ ದೇಸಾಯಿ, ಉಪವಿಭಾಗಾಧಿಕಾರಿಗಳಾದ ಡಾ| ದಿಲೀಷ್ ಶಶಿ, ಅನ್ನಪೂರ್ಣ ಮುದಕಮ್ಮನವರ, ಚುನಾವಣಾ ತಹಶೀಲ್ದಾರ್ ಪ್ರಶಾಂತ ನಾಲವಾರ, ಹಾವೇರಿ ತಹಶೀಲ್ದಾರ್ ಜಿ.ಎಸ್. ಶಂಕರ್, ಹಾನಗಲ್ಲತಹಶೀಲ್ದಾರ್ ಪಿ.ಎಸ್. ಯರಿಸ್ವಾಮಿ, ಶಿಗ್ಗಾವಿ ತಹಶೀಲ್ದಾರ್ ಪ್ರಕಾಶ ಕುದರಿ, ಸವಣೂರು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣನವರ, ಹಿರೇಕೆರೂರು ತಹಶೀಲ್ದಾರ್ ಆರ್.ಎಚ್. ಭಾಗವಾನ್, ರಾಣೆಬೆನ್ನೂರು ತಹಶೀಲ್ದಾರ್ ಬಸವನಗೌಡ ಕೋಟೂರ, ಬ್ಯಾಡಗಿ ತಹಶೀಲ್ದಾರ್ ರವಿ ಕೊರವರ ಇದ್ದರು.
ಯಾವ ಮತಗಟ್ಟೆಗಳಲ್ಲಿ ಜನಸಂಖ್ಯೆ ಪ್ರಮಾಣಕ್ಕಿಂತ ಮತದಾರರ ನೋಂದಣಿ ಪ್ರಮಾಣ ಕಡಿಮೆ ಇದೆ.ವಿಶೇಷವಾಗಿ ಮಹಿಳಾ ಮತದಾರರ ನೋಂದಣಿ ಪ್ರಮಾಣ ಕಡಿಮೆ ಇದೆ. ಇಂತಹ ಮತಗಟ್ಟೆಗಳಿಗೆ ಭೇಟಿ ನೀಡಿ ನೋಂದಣಿ ಪ್ರಮಾಣವನ್ನು ಹೆಚ್ಚು ಮಾಡಬೇಕು. -ಮನೋಜ್ ಜೈನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು