Advertisement
ಚುನಾವಣಾ ಆಯೋಗದ ಆದೇಶದ ಮೇರೆಗೆ ನೀತಿ ಸಂಹಿತೆ ಜಾರಿಯಿರುವ ವರೆಗೆ ನಗರಸಭೆಯ ಪೌರಾಯುಕ್ತ ರಾಗಿ ನೇಮಕಗೊಂಡಿರುವ ಚಲಪತಿ ಅವರು ನಗರದ ಹೃದಯಭಾಗದಲ್ಲಿರುವ ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿರುವ ಈಶ್ಯಾನ ಮೂಲೆ
ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಅನೇಕ ವರ್ಷ
ಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯ ವಸ್ತುಗಳ ಕಸದ ರಾಶಿಯನ್ನು ಶನಿವಾರ ಬೆಳಗ್ಗೆ ತಾವೇ ಮುಂದೆ ಖುದ್ದಾಗಿ ಪೌರಸೇವಾ ಕಾರ್ಮಿಕರ ಜೊತೆಗೆ ನಿಂತು ಕಸದ ರಾಶಿಯನ್ನು ತೆಗೆಯುವ ಕಾರ್ಯ ಮಾಡಿದರು.
ಸ್ವತ್ಛತಾ ಕಾರ್ಯದಲ್ಲಿ ನಗರಸಭೆಯ ಆರೋಗ್ಯ ನಿರೀಕ್ಷರಾದ ರಮೇಶ್
ಹಾಗೂ 25ಕ್ಕೂ ಹೆಚ್ಚಿನ ಪೌರಕಾರ್ಮಿಕರು ಭಾಗಿಯಾಗಿದ್ದರು. ಈಶ್ಯಾನ ಮೂಲೆ ಆಂಜನೇಯ ಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್.ಎಂ.ಎಸ್.ರವಿಶಂಕರ್, ಸದಸ್ಯರಾದ ರೈಲ್ವೆ ರಂಗಸ್ವಾಮಿ ಹಾಗೂ ಇನ್ನಿತರ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನಗರಸಭಾ ಪೌರಾಯುಕ್ತರ ಕಾರ್ಯವನ್ನು ಶ್ಲಾ àಸಿ
ಶಾಲು ಹೊದಿಸಿ ಗೌರವಿಸಿದರು.
Related Articles
ನಂತರ ಪೌರಾಯುಕ್ತರು ಮಾತನಾಡಿ, ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಸೇವಕರು ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಮಾತಿಗಿಂತಲೂ ಕೃತಿ ಲೇಸು ಎಂಬ ಬಗ್ಗೆ ನಾವುಗಳು ಅಚಲ ವಿಶ್ವಾಸವನ್ನು ಬೆಳೆಸಿಕೊಂಡು ಮತ್ತೂಬ್ಬರಿಗೆ ತಾಕೀತು ಮಾಡುವ ಜೊತೆಗೆ ತಾವೇ ಖುದ್ದಾಗಿ ಮುಂದೆ ನಿಂತಾಗ ನಮ್ಮ ಜೊತೆ ಜೊತೆಗೆ ಇನ್ನಿತರರು ಕೈ ಜೋಡಿಸಲು ಪ್ರೇರಣೆ
ಬರುತ್ತದೆ. ಈ ಬಗ್ಗೆ ಅಧಿಕಾರಿಗಳು ನಮ್ಮ ಜೊತೆಯ ಅಧಿಕಾರಿಗಳ ಜೊತೆಗೆ ಕೆಲಸ ಮಾಡಿದರೇ ತಪ್ಪು ಎನ್ನುವ ಕೀಳರಿಮೆಯನ್ನು ಬಿಟ್ಟಾಗ ಮಾತ್ರ ಎಲ್ಲರೊಂದಿಗೆ ಕೂಡಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
Advertisement
ಪ್ರಾಮಾಣಿಕತೆಗೆ ಬೆಲೆಯಿದೆ: ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಎಂದಿಗೂ ಎಲ್ಲೆಡೆ ಬೆಲೆಯಿದೆ. ಅದನ್ನು ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ನಾವು ನಮಲ್ಲಿ ಬೆಳೆಸಿಕೊಂಡಾಗ ಮಾತ್ರ ನಮ್ಮ ಮನಸ್ಸು ಮೆಚ್ಚುವಂತೆ ನಡೆದುಕೊಳ್ಳಬಹುದು, ಅಂತೆಯೇಸಾರ್ವಜನಿಕರಿಂದಲೂ ಪ್ರಶಂಸೆಗೆ ಪಾತ್ರರಾಗಬಹುದು ಎಂದು
ಹೇಳಿದರು. ಸಾರ್ವಜನಿಕರು ಹಾಗೂ ವಿವಿಧ ಜನಪರ ಸಂಘಟನೆಗಳು ನಗರದ ಸ್ವತ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ಕರೆ ನೀಡಿದರು.