Advertisement
ಪುರಸಭೆಯ ಕಂದಾಯ ವಾರ್ಡ ನಂಬರ್ 4/1 ಟಿಟಿಎಸ್ ನಂ 11774/ಎ/73ಟಿಎಂಸಿ ನಂಬರ್ 2081ರಲ್ಲಿ , 1030 ಮತ್ತು 1140 ಅಳತೆಯಲ್ಲಿ ಮೂರು ಮಹಡಿಯ ಮನೆಯನ್ನು ವಾಸಕ್ಕೆ ಅಂತಾ ಅನಧಿಕೃತವಾಗಿ ಕಟ್ಟಡ ನಿರ್ಮಾಣಮಾಡಿ ನೆಲ ಮತ್ತು ಮೊದಲ ಮಹಡಿಯ ಸ್ವಯಂ ಘೋಷಿತ ಆಸ್ತಿ ತೆರಿಗೆ ಭರಣಾ ಮಾಡಿದ್ದು ಕಂಡು ಬಂದಿದೆ.
ಪಟ್ಟಣದ ಆಯಿಲ್‌ಮಿಲ್ ಪ್ಲಾಟ್(ಜಯಲಕ್ಷ್ಮೀನಗರ)ನ ಕವಿತಾ ಚನ್ನಪ್ಪ ಬಾಡನವರ ಮನೆಯಲ್ಲಿ ಕಾನೂನು ಬಾಹಿರವಾಗಿ ಗರ್ಭಪಾತ ಮಾಡುತ್ತಿದ್ದ ಸಂಗತಿ. ಮೇ-29 ರಂದು ಪ್ರಕರಣ ಬೆಳಕಿಗೆ ಬಂದ ನಂತರ ಪತ್ರಿಕೆಗಳ ವರದಿ ಮೂಲಕ ಪುರಸಭೆಯ ಗಮನಕ್ಕೆ ಬಂದಿದೆ. 2019 ಮತ್ತು 2022 ರಲ್ಲಿ ಕವಿತಾ ಬಾಡನವರ ಮನೆಯ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯ ಮಾಹಿತಿಯನ್ನು ಪುರಸಭೆಗೆ ನೀಡಿಲ್ಲ ಯಾಕೆ?. ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆ ನಡೆದ ಹಾಗೂ ಪ್ರಸ್ತುತ ಪ್ರಕರಣಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ತಕ್ಷಣ ಪುರಸಭೆಗೆ ಸಲ್ಲಿಸಬೇಕೆಂದು ಕೋರಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಪುರಸಭೆ ಮುಖ್ಯಾಧಿಕಾರಿಗಳು ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.