Advertisement

ಅಧಿಕಾರಿಗಳ ನಿರ್ಲಕ್ಷ್ಯ: ಕೊಬ್ಬರಿ ಬೆಲೆ ಕುಸಿತ

06:11 AM Jun 07, 2020 | Lakshmi GovindaRaj |

ತಿಪಟೂರು: ಅಧಿಕಾರಿಗಳ ಕೊರತೆಯಿಂದಾಗಿ ಕೊಬ್ಬರಿ ಬೆಲೆ ಇಳಿಕೆಯಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ನಾಮಕೇವಾಸ್ತೆಯಲ್ಲಿದ್ದು, ಕೊಬ್ಬರಿಗೆ ಬೆಂಬಲ ಬೆಲೆ ಹಾಗೂ ನಫೆಡ್‌ ಕೇಂದ್ರ ಸ್ಥಾಪಿಸುವ ಬಗ್ಗೆ ಸರ್ಕಾರಕ್ಕೆ  ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ತಾಲೂಕು ಜೆಡಿಎಸ್‌ಮುಖಂಡ ಎಂ. ನಾಗರಾಜು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಪಿಎಂಸಿ ಕಾರ್ಯದರ್ಶಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

Advertisement

ಎಪಿಎಂಸಿಗೆ ಪ್ರತಿ ಹರಾಜು ಸಂದರ್ಭದಲ್ಲಿ ಕೇವಲ 4,500  ಚೀಲ ಕೊಬ್ಬರಿ ಮಾತ್ರ ರೈತರಿಂದ ಬಂದಿದ್ದು, ಇದರಿಂದ ಸೆಸ್ ಆದಾಯ ಕೂಡ ಕಡಿಮೆಯಾಗಿದೆ ಎಂದರು. ಹೊರಭಾಗಗಳಿಂದ ಹೆಚ್ಚು ಕೊಬ್ಬರಿ ಮಾರಾಟ ವಾಗುತ್ತಿದ್ದು  ಎಪಿಎಂಸಿಗೆ ಕೊಬ್ಬರಿ ಸರಿಯಾಗಿ ಬಾರದೇ ಇರಲು ಅಧಿಕಾರಿಗಳು ಕೂಡ ಕಾರಣರಾಗಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲಿ 37 ಕೋಟಿ ರೂ. ಹಣವಿದ್ದು, ಆ ಹಣದಲ್ಲಿ ಎಪಿಎಂಸಿ ಆವರಣ ಸ್ವತ್ಛತೆ, ಕುಡಿವ ನೀರು, ಸೇರಿದಂತೆ ಗ್ರಾಮೀಣ  ಭಾಗದ ರಸ್ತೆಗಳನ್ನು ಪ್ರಾರಂಭಿಸಬಹುದು.

ಆದರೆ ಅಧಿಕಾರಿಗಳು ಯಾವುದೇ ಕೆಲಸ ಮಾಡದಿದ್ದರೂ ಬೇಕಾಬಿಟ್ಟಿ 3 ರಿಂದ 4 ಲಕ್ಷ ರೂ. ಬಳಸಿಕೊಳ್ಳುತ್ತಿದ್ದು, ಎಪಿಎಂಸಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು. ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ಶಿವಸ್ವಾಮಿ  ಮಾತನಾಡಿ, ತಾಲೂಕಿನಲ್ಲಿ ಕೊಬ್ಬರಿ ಬೆಲೆ ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವವಾಡುತ್ತಿದ್ದು ಜನಪ್ರತಿ ನಿಧಿಗಳು ಗಮನಹರಿಸುತ್ತಿಲ್ಲ. ಕೇಂದ್ರ ಸರ್ಕಾರ ರೈತರಿ ಗಿಂತ ಕೈಗಾರಿಕೆಗಳಿಗೆ  ಸಾಲ ನೀಡಲು ಗಮನ ಹರಿಸುತ್ತಿದೆ.

ರೈತನಿಗೂ ಕೂಡ ಸಾಲ ನೀಡುವ ಸಂದರ್ಭದಲ್ಲಿ ಸರ್ಕಾರವೇ ಜಾಮೀನುದಾರ ಆಗಬೇಕು ಎಂದು ಒತ್ತಾಯಿಸಿದರು. ಜೆಡಿಎಸ್‌ ತಾ. ಉಪಾಧ್ಯಕ್ಷ ಉಮಾಮಹೇಶ್‌, ಎಪಿ ಎಂಸಿ ಮಾಜಿ ಉಪಾಧ್ಯಕ್ಷ ಎನ್‌.ಸಿ.  ರಮೇಶ್‌, ರಾಜ್ಯ ಜೆಡಿಎಸ್‌ ಯುವ ಪ್ರಧಾನ ಕಾರ್ಯದರ್ಶಿ ಗುರು ಪ್ರಸನ್ನ, ತಾ.ಪ್ರಧಾನ ಕಾರ್ಯದರ್ಶಿ ರಾಜಶೇಖರ್‌, ಮುಖಂಡ ರಾದ ರಾಕೇಶ್‌, ತಿಮ್ಮೇಗೌಡ, ಈಶಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next