Advertisement

ನೀಲಗಿರಿ ಮರ ತೆರವಿಗೆ ಮೀನಮೇಷ

05:43 PM Nov 21, 2020 | Suhan S |

ಯಲಬುರ್ಗಾ: ಅಂರ್ತಜಲಕ್ಕೆ ಕಂಟಕವಾಗಿರುವ ನೀಲಗಿರಿ ಮರಗಳ ತೆರವಿಗೆ ತಾಲೂಕಿನಲ್ಲಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ರೈತಾಪಿ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಇತ್ತೀಚೆಗೆ ತಾಲೂಕಿನಲ್ಲಿ ಕೆರೆಗಳ ಅಭಿವೃದ್ಧಿ ಕಾರ್ಯ ನಿರಂತರವಾಗಿ ನಡೆದಿದೆ. ಅದರ ಮಧ್ಯೆ ತಾಲೂಕಿನಲ್ಲಿರುವ ಕೆರೆಗಳ ದಡದಲ್ಲಿ ಸಾವಿರಾರು ನೀಲಗಿರಿ ಮರಗಳಿವೆ. ಅಂತರ್ಜಲ ಕಬಳಿಸುವ ಮರಗಳ ತೆರವಿಗೆ ನಿರ್ಲಕ್ಷ್ಯ ವಹಿಸಲಾಗಿದೆ. ಪರಿಸರ ಮಾರಕ ಮತ್ತು ಅಂತರ್ಜಲವನ್ನು ಬರಿದು ಮಾಡುವ ನೀಲಗಿರಿ ಮರಗಳನ್ನು ತೆರವುಗೊಳಿಸದೇ ಇರುವುದು ಅಚ್ಚರಿ ಮತ್ತು ಆಘಾತ ಉಂಟು ಮಾಡಿದೆ.

ಅಪಾರ ಪ್ರಮಾಣದಲ್ಲಿ ನೀಲಗಿರಿ ಮರಗಳಿರುವ ಕಾರಣಕ್ಕೆ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆಕುಸಿದಿದೆ. ರಾಜ್ಯದಲ್ಲಿ ಹಲವು ವರ್ಷಗಳ ಹೋರಾಟದಬಳಿಕ ಪರಿಸರಕ್ಕೆ ಮಾರಕವಾಗುವ ಈ ನೀಲಗಿರಿ ಬೆಳೆಸುವುದನ್ನು ನಿಷೇಧಿ ಸಿ 2017ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ನೀಲಗಿರಿ ಮರ ಯಾವುದೇ ಹಣ್ಣು ಬಿಡುವುದಿಲ್ಲ, ಪ್ರಾಣಿ, ಪಕ್ಷಿಗಳಿಗೂ ಆಸರೆ ಆಗುವುದಿಲ್ಲ, ಅದರ ಜೊತೆಗೆ ಅಂರ್ತಜಲಕ್ಕೆ ಮಾರಕವಾಗುತ್ತದೆ.ಇಂತಹ ಮರವನ್ನು ಸರಕಾರ ಸಂಪೂರ್ಣ ನಿಷೇಧ ಮಾಡಿ ಆದೇಶ ಹೊರಡಿಸಿದರೂ ಇಂದಿಗೂಆ ಮರ ನಿಷೇಧವಾಗಿಲ್ಲ.

ತಾಲೂಕಿನಲ್ಲಿ ನೀಲಗಿರಿ: ತಾಲೂಕಿನ ತಲ್ಲೂರು, ಮಲಕಸಮುದ್ರ, ಕುದರಿಮೋತಿ, ಬಳೂಟಗಿ, ಮುರಡಿ, ಬಹುತೇಕ ಕೆರೆಗಳ ಆವರಣದಲ್ಲಿ ನೀಲಗಿರಿ ಸಸಿಗಳು ಇವೆ. ಜೊತೆಗೆ ತಾಲೂಕಿನ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಸಾವಿರಾರು ನೀಲಗಿರಿ ಗಿಡಗಳಿವೆ. ಸರಕಾರಿ ಜಾಗೆಯಲ್ಲಿ ಅತ್ಯಧಿಕವಾಗಿ ಗಿಡಗಳು ಬೆಳೆದಿವೆ.

ಅಧಿಕಾರಿಗಳ ನಿರ್ಲಕ್ಷ್ಯ: ಸರಕಾರ ನೀಲಗಿರಿ ತೆರವಿಗೆಆದೇಶ ಹೊರಡಿಸಿ ಹಲವಾರು ವರ್ಷಗಳಾದರೂ ತಾಲೂಕಿನ ತಹಶೀಲ್ದಾರ್‌ ಹಾಗೂ ಸಣ್ಣನೀರಾವರಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಂಬಂಧಪಟ್ಟ ಅಧಿಕಾರಿಗಳು ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.ತಾಲೂಕಿನಲ್ಲಿ ಅಂತರ್ಜಲ ಬಹುತೇಕವಾಗಿ ಬತ್ತಿ ಹೋಗುತ್ತಿದೆ. ಇದಕ್ಕೆ ತಾಲೂಕಿನಲ್ಲಿ ಹೆಚ್ಚಾಗಿ ಕಂಡುಬರುವ ನೀಲಗಿರಿಯೂ ಒಂದು ಕಾರಣ ಎಂದುಸಂಶೋಧನೆಗಳು ಸಾರಿ ಸಾರಿ ಹೇಳುತ್ತಿವೆ. ಮಣ್ಣಿನ ಫಲವತ್ತತೆ, ಜನರ ಆರೋಗ್ಯದ ಮೇಲೆ ಪರಿಣಾಮ,ಮಳೆ, ಮೋಡವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದ ನೀಲಗಿರಿ, ಅಂರ್ತಜಲಕ್ಕೆ ಸಂಪೂರ್ಣ ಮಾರಕವಾಗಿದೆ. ನೀಲಗಿರಿ ಮರದ ವಿರುದ್ಧ ಅಭಿಯಾನ: ತಾಲೂಕಿನಲ್ಲಿ ನೀಲಗಿರಿ ಮರಗಳ ವಿರುದ್ಧ ಶೀಘ್ರದಲ್ಲಿ ರೈತ ಸಮೂಹ ಹಾಗೂ ಜಲತಜ್ಞರ ಸಮಿತಿವೊಂದು ಅಭಿಯಾನಹಮ್ಮಿಕೊಳ್ಳಲಾಗುತ್ತಿದೆ ಎಂದು ಜಲ ಕಾರ್ಯಕರ್ತಈರಣ್ಣ ತೋಟದ ತಿಳಿಸಿದ್ದಾರೆ. ಶೀಘ್ರದಲ್ಲಿ ಮರಗಳ ತೆರವಿಗೆ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸುಂದರ ಪರಿಸರ ನಿರ್ಮಾಣಕ್ಕೆ ಹಾಗೂ ರೈತರ ಹಿತ ಕಾಪಾಡಲು ಶೀಘ್ರದಲ್ಲಿ ನೀಲಗಿರಿಗಳ ತೆರವಿಗೆ ಮುಂದಾಗಬೇಕಿದೆ.

Advertisement

ಸಂಶೋಧನೆಯಿಂದ ಮರದ ವಿಶಿಷ್ಟತೆ ತಿಳಿದು ಬಂದಿದೆ. ಅಂತರ್ಜಲಕ್ಕೆ ನೀಲಗಿರಿ ಕಾರಣವಾಗಿವೆ. ಶೀಘ್ರದಲ್ಲಿಯೇ ತಾಲೂಕಿನಲ್ಲಿರುವ ನೀಲಗಿರಿ ತೆರವಿಗೆ ಮುಂದಾಗಿರೈತರ ಹಿತ ಕಾಪಾಡಬೇಕು. ಶೀಘ್ರದಲ್ಲಿ ತಾಲೂಕಿನಲ್ಲಿ ನೀಲಗಿರಿ ವಿರುದ್ಧ ಅಭಿಯಾನ ಆರಂಭವಾಗಲಿದೆ. –ಈರಣ್ಣ ತೋಟದ, ರೈತ

ಕಳೆದ 10 ವರ್ಷಗಳಿಂದ ನೀಲಗಿರಿ ಸಸಿಗಳನ್ನು ನೆಡಲಾಗಿಲ್ಲ, ಶೀಘ್ರದಲ್ಲೇ ನೀಲಗಿರಿಗಳನ್ನು ತೆರವುಗೊಳಿಸಲಾಗುತ್ತದೆ. ಇದಕ್ಕೆ ವಿವಿಧ ಇಲಾಖೆಗಳ ಸಹಕಾರ ಅವಶ್ಯಕವಾಗಿದೆ. –ಅಂದಪ್ಪ ಕುರಿ, ಉಪ ವಲಯ ಅರಣ್ಯಾಧಿಕಾರಿ ಯಲಬುರ್ಗಾ

 

-ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next