Advertisement
ಕೋಚಿಮುಲ್‌ನಿಂದ ವಿಭಜನೆ ಆಗುವ ಒಕ್ಕೂಟಕ್ಕೆ ಆಸ್ತಿ ಮತ್ತು ಜವಾಬ್ದಾರಿ ವಿಭಜಿಸುವ ಸಲುವಾಗಿ ಕೂಡಲೇ ಸಮಿತಿ ರಚಿಸಿ, ಅದರಿಂದ ಎರಡೂ ಒಕ್ಕೂಟಕ್ಕೆ ಅಗತ್ಯವಿರುವ ಮೂಲ ಸೌಲಭ್ಯ, ಮಾರುಕಟ್ಟೆ ಒದಗಿಸಲು ಮೂರು ತಿಂಗಳ ಕಾಲಾವಕಾಶಒದಗಿಸಲಾಗಿದೆ. ಈ ವಿಭಜನೆ ಪ್ರಕ್ರಿಯೆಯನ್ನುಮುಂದಿನ ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
Related Articles
Advertisement
ಸಿಎಂ ಐತಿಹಾಸಿಕ ತೀರ್ಮಾನ: ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಆ.30ರಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಿ ಈ ಸಂಬಂಧ ಸಾಧ್ಯತಾ ವರದಿಯನ್ನು ಸಲ್ಲಿಸಲು ಸೂಚನೆ ನೀಡಲಾಗಿತ್ತು.
ಸರ್ಕಾರದ ಸೂಚನೆಯಂತೆ ಸಹಕಾರ ಸಂಘಗಳ ನಿಬಂಧಕರು ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೋಲಾರ ಜಿಲ್ಲೆಯ ಕೋಲಾರ, ಬಂಗಾರಪೇಟೆ, ಮುಳಬಾಗಿಲು, ಮಾಲೂರು ಮತ್ತು ಶ್ರೀನಿವಾಸಪುರ ಸಹಿತ 5 ತಾಲೂಕುಗಳ ವ್ಯಾಪ್ತಿಯಲ್ಲಿ 913 ಡೇರಿಗಳಿದ್ದು, ಜು.2021ರ ಅಂತ್ಯಕ್ಕೆ 5, 13, 905 ಕೇಜಿ ಹಾಲುಶೇಖರಣೆ ಮಾಡಲಾಗುತ್ತಿದೆ. ಹಾಗೆಯೇ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ಮತ್ತು ಚಿಕ್ಕಬಳ್ಳಾಪುರ ಸಹಿತ 6 ತಾಲೂಕುಗಳಲ್ಲಿ 977 ಡೇರಿಗಳಿವೆ. ಜು.2021ರ ಅಂತ್ಯಕ್ಕೆ ದಿನವಹಿ 4.28 ಲಕ್ಷಕೇಜಿ ಹಾಲು ಶೇಖರಣೆ ಮಾಡಲಾಗುತ್ತಿದೆ.
ಎರಡೂ ಜಿಲ್ಲೆಗಳಿಂದ ಒಟ್ಟು 9,56,000 ಕೇಜಿ ಹಾಲು ಶೇಖರಣೆ ಆಗುತ್ತಿದೆ. ಈ ಪೈಕಿ ಸರಾಸರಿ3,50,000 ಲೀ. ಹಾಲು, 60,000 ಲೀ. ಮೊಸರು,4,00,000 ಲೀ. ಯುಎಚ್‌ಟಿ ಹಾಲು ಹಾಗೂ50,000 ಲೀ. ಹಾಲಿನಲ್ಲಿ ಕೆನೆ ಭರಿತ ಪುಡಿಯನ್ನುಮಾರಾಟ ಮಾಡಲಾಗುತ್ತಿದೆ. ಉಳಿದ 96,000 ಲೀ. ಹಾಲನ್ನು ಕೆನೆ ಹಾಲಿನ ಪುಡಿ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಜೊತೆಗೆ 23.09.2016 ರಂದುನಡೆದ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ2015-16ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿಕೋಚಿಮುಲ್ ವಿಭಜಿಸಿ ಪ್ರತ್ಯೇಕ ಹಾಲು ಒಕ್ಕೂಟಸ್ಥಾಪಿಸಲು ತೀರ್ಮಾನಿಸಲಾಗುತ್ತಿದೆ ಎಂದು ವರದಿ ಸಲ್ಲಿಸಿದ್ದಾರೆ.
ಎನ್‌ಡಿಡಿಬಿಯ ನಿವೃತ್ತ ಡಿಜಿಎಂ ಆರ್‌ವಿಎಂ ಮೋಹನ್‌ಕುಮಾರ್ ಅವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ವಿಭಜನೆಯಿಂದಾಗಿ ಕೋಲಾರ ಒಕ್ಕೂಟಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಬದಲಾಗಿ ಚಿಕ್ಕಬಳ್ಳಾಪುರ ಉದ್ದೇಶಿತ ಜಿಲ್ಲಾ ಹಾಲು ಒಕ್ಕೂಟವು ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯವನ್ನು ನೀಡಿದ್ದಾರೆ ಎಂದುಕರ್ನಾಟಕ ಸಹಕಾರ ಹಾಲು ಮಹಾಮಂಡಳಿಯ(ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕರು ವರದಿಸಲ್ಲಿಸಿರುವುದನ್ನು ಪರಿಗಣಿಸಿ ಸರ್ಕಾರ ಆದೇಶ ಹೊರಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವ ಸಲುವಾಗಿ ರಾಜ್ಯ ಸರ್ಕಾರ ಸ್ಪಷ್ಟ ಅದೇಶ ಹೊರಡಿಸುವ ಮೂಲಕ ಜಿಲ್ಲೆಯ ಜನರ ಬಹು ನಿರೀಕ್ಷಿತಬೇಡಿಕೆ ಈಡೇರಿಸಿದೆ. ಅದಕ್ಕಾಗಿ ಜಿಲ್ಲೆಯ ಜನರು, ಹಾಲು ಉತ್ಪಾದಕರ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಸಹಕಾರ ಸಚಿವ ಎಸ್.ಟಿ.ಸೋಮಶೇಖರ್,ವಿಶೇಷವಾಗಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಾಡಲು ಶ್ರಮಿಸಿದ ಸಚಿವ ಡಾ.ಕೆ.ಸುಧಾಕರ್‌ಗೆ ಅಭಿನಂದಿಸುತ್ತೇನೆ. – ಕೆ.ವಿ.ನಾಗರಾಜ್, ಮಾಜಿ ಅಧ್ಯಕ್ಷ, ಕೋಚಿಮುಲ್
ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಾಡಲಿಸಂತೋಷ. ಆದರೆ, ಮದರ್‌ಡೇರಿಯಲ್ಲಿರುವ 4 ವಿಧಾನಸಭಾಕ್ಷೇತ್ರಗಳ ಮಾರ್ಕೆಂಟಿಂಗ್ ನಮ್ಮಒಕ್ಕೂಟಕ್ಕೆ ಸೇರಿಸಬೇಕು. ಬೆಂಗಳೂರಿನ11 ವಾರ್ಡ್‌ಗಳ ಮಾರ್ಕೆಟ್ ವ್ಯವಸ್ಥೆ ಕಲ್ಪಿಸಿದರೆ ಒಕ್ಕೂಟ, ಹಾಲು ಉತ್ಪಾದಕರುತೊಂದರೆ ಅನುಭವಿಸುತ್ತಾರೆ. – ಭರಣಿ ವೆಂಕಟೇಶ್, ನಿರ್ದೇಶಕ, ಕೋಚಿಮುಲ್.
–ಎಂ.ಎ.ತಮೀಮ್ ಪಾಷ