ಚಿಕ್ಕಮಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ನ.14 ರಿಂದ 17ರ ವರೆಗೆ ದೀಪಾವಳಿ ಹಬ್ಬವನ್ನು ಆಚರಿಸುವ ಸಂಬಂಧ ಸಾರ್ವಜನಿಕರು ಹಾಗೂ ಅಧಿಕೃತ ಪರವಾನಗಿ ಹೊಂದಿರುವ ಪಟಾಕಿ ಮಾರಾಟಗಾರರು ಮಾರ್ಗಸೂಚಿ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವುದರಿಂದ ಹಬ್ಬದಲ್ಲಿ ಪಟಾಕಿ ಸಿಡಿಮದ್ದು ಮಾರಾಟ ಮಾಡುವುದು ಮತ್ತು ಸಿಡಿಸುವ ಸಂಬಂಧ ಸರ್ಕಾರ ಆದೇಶದೊಂದಿಗೆ ಮಾರ್ಗಸೂಚಿ
ಬಿಡುಗಡೆಗೊಳಿಸಿದ್ದು, ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರವಾನಿಗೆ ಪಡೆದ ಮಾರಾಟಗಾರರು ಮಾತ್ರ ಪಟಾಕಿ ಮಾರಾಟ ಮಾಡಬೇಕು. ಪಟಾಕಿ ಮಾರಾಟ ಮಳಿಗೆ ನ.1 ರಿಂದ 17ರ ವರೆಗೆ ಮಾತ್ರ ತೆರೆದಿರತಕ್ಕದ್ದು. ಪ್ರಾ ಧಿಕಾರದಿಂದ ನೀಡಿರುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ತಾತ್ಕಾಲಿಕ ಮಳಿಗೆಗಳನ್ನು ತೆರೆಯಬೇಕು.
ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ, ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆ ತೆರೆಯುವುದು ಹಾಗೂ ಮಳಿಗೆಗಳು ಕನಿಷ್ಠ ಆರು ಮೀಟರ್ ಅಂತರ ಇರುವಂತೆ ನೋಡಿಕೊಳ್ಳಬೇಕು ಹಾಗೂ ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ಮಾಲಿನ್ಯ ರಹಿತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಿದ್ದಾರೆ. ಪಟಾಕಿ, ಸಿಡಿಮದ್ದು ಮಾರಾಟ ಮಾಡುವ ಮಳಿಗೆ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಸ್ ಮಾಡುವುದು ಹಾಗೂ ಪಟಾಕಿ ಖರೀದಿಗೆ ಬರುವ ಸಾರ್ವಜನಿಕರಿಗೆ ಸಾಮಾಜಿಕ ಅಂತರದೊಂದಿಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿ ಮಾಸ್ಕ್ ಧರಿಸುವಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಅಜಅಜ್ಜಂಪುರ: ಪಟ್ಟಣದ ತರೀಕೆರೆ ರಸ್ತೆಯ ಗಾಂಧಿ ವೃತ್ತದಿಂದ ಕನ್ನಡ ನೂತನ ಶಾಲೆಯವರೆಗಿನ ರಸ್ತೆ ವಿಭಜಕದಲ್ಲಿ ನೂತನವಾಗಿ ಅಳವಡಿಸಿರುವ ಎಲ್ ಇಡಿ ವಿದ್ಯುತ್ ದೀಪಗಳನ್ನು ಶಾಸಕಡಿ.ಎಸ್. ಸುರೇಶ್ ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮುಕ್ಕಾಲು ಕಿಮೀ ರಸ್ತೆ ವಿಭಜಕದಲ್ಲಿ 34 ಪೋಲ್ಸ್‌ಗಳನ್ನು ಹಾಕಲಾಗಿದ್ದು, 68 ವಿದ್ಯುತ್ ಬಲ್ಬ್ ಅಳವಡಿಸಲಾಗಿದೆ. ಪ್ರತೀ ಬಲ್ಬ್ಗಳು 120 ವ್ಯಾಟ್ ಸಾಮರ್ಥ್ಯ ಹೊಂದಿದ್ದು, ಹೆಚ್ಚು ಬೆಳಕು ಹೊರಸೂಸುತ್ತವೆ. ಇವು ರಸ್ತೆಯನ್ನು ಬೆಳಗುವ ಜತೆಗೆ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಲಿವೆ ಎಂದರು.
ತರೀಕೆರೆ ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್, ಜಿಪಂ ಸದಸ್ಯ ಕೆ.ಆರ್. ಆನಂದಪ್ಪ, ಪಪಂ ಸದಸ್ಯಅತ್ತತ್ತಿ ಮಧುಸೂದನ್, ರಂಗಸ್ವಾಮಿ, ವಿನಿಶ ವಿನcರ್ಸ್‌ನ ಚೋಮನಹಳ್ಳಿ ಶ್ರೀಧರ್ ಮತ್ತಿತರರಿದ್ದರು.