Advertisement
ರಾಮಗೊಂಡನಹಳ್ಳಿಯಲ್ಲಿನ ಆರ್.ಜಿ. ಹಳ್ಳಿ ನಾಗರಾಜ್ ನಿವಾಸಕ್ಕೆ ತೆರಳಿದ ತಾಲೂಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ತಾಲೂಕಿನ ಎಲ್ಲ ಕನ್ನಡಿಗರ ಪರವಾಗಿ ಸಮ್ಮೇಳನದ ಅಧಿಕೃತವಾದ ಆಹ್ವಾನ ಪತ್ರದೊಂದಿಗೆ ಗೌರವಿಸಿ, ಆಹ್ವಾನಿಸಿದರು.
Related Articles
Advertisement
ಹುಟ್ಟೂರಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ನನಗೆ ಸಹಕರಿಸಿ, ಆಶೀರ್ವದಿಸಿದ ಶಿಕ್ಷಕರಾದ ಕಬ್ಬೂರು ದುರ್ಗಪ್ಪ, ಅತ್ತಿಗೆರೆಯ ಭರಮಪ್ಪ ಮತ್ತು ಇತರೆ ಗುರುಗಳನ್ನು ನಾನು ಎಂದೂ ಮರೆಯಲಾರೆ. ನನ್ನ ಸಾಹಿತ್ಯಿಕ ಚಟುವಟಿಕೆಗಳಿಗೆ ಸಹಕರಿಸುತ್ತಿರುವ ಎÇ್ಲಾ ಆತ್ಮೀಯರ ಸಹಕಾರ ಅವಿಸ್ಮರಣೀಯ. ತಾಲೂಕು ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರಲ್ಲದೆ ಸಮ್ಮೇಳನದ ಯಶಸ್ಸಿಗೆ ನನ್ನೂರಿನ ಜನರು ಮತ್ತು ತಾಲೂಕಿನ ಎಲ್ಲ ಕನ್ನಡಾಭಿಮಾನಿಗಳು ಸಹಕರಿಸಬೇಕು ಎಂದು ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಆರ್.ಜಿ. ಹಳ್ಳಿ ನಾಗರಾಜ್‌ರವರು ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ಸಾಹಿತ್ಯ ಪರಿಷತ್ತು ಹಾಗೂ ದಾವಣಗೆರೆ ತಾಲೂಕು ಎಲ್ಲಾ ಕನ್ನಡಿಗರ ಪರವಾಗಿ ಅಭಿನಂದನೆ. ಸಮ್ಮೇಳನವನ್ನು ಕನ್ನಡಿಗರೆಲ್ಲರೂ ಸೇರಿ ಕನ್ನಡ ನುಡಿಯ ಜಾತ್ರೆಯೋಪಾದಿಯಲ್ಲಿ ಒಂದು ಹಬ್ಬವನ್ನಾಗಿ ಆನಗೋಡಿನಲ್ಲಿ ನೆರವೇರಿಸಲು ಫೆ. 8 ರಂದು ತಪ್ಪದೆ ಭಾಗವಹಿಸಿ, ಯಶಸ್ಸಿಗೆ ಕಾರಣೀಭೂತರಾಗಬೇಕು ಹಾಗೂ ತನು-ಮನ-ಧನದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಅತ್ತಿಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮಾ ರಮೇಶ್, ಕವಿ ನಾಗರಾಜ್ ಸಿರಿಗೆರೆ, ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎನ್.ಎಸ್. ರಾಜು, ಎಚ್.ಎಸ್. ಮುರುಗೇಂದ್ರಪ್ಪ, ಎಚ್.ಕೆ. ಪಾಲಾಕ್ಷಪ್ಪ ಗೋಪನಾಳ್, ಆರ್.ಜಿ.ಸಿದ್ಧೇಶ್, ಶರಣಪ್ಪ, ರಾಜಶೇಖರ್, ಆರ್.ಜಿ. ರಮೇಶ್, ತಿಪ್ಪೇಸ್ವಾಮಿ,ಆವರಗೆರೆ ರುದ್ರಮುನಿ, ಬಿ.ಎಸ್. ಜಗದೀಶ್, ಬಿ.ಎಂ. ಮುರುಗಯ್ಯ ಕುರ್ಕಿ, ರುದ್ರಪ್ಪ, ಮಹದೇವಪ್ಪ, ರಮೇಶ್, ಸಿದ್ಧೇಶಪ್ಪ, ಮರುಳಸಿದ್ಧಪ್ಪ, ಎಂ. ಷಡಕ್ಷರಪ್ಪ ಬೇತೂರು, ಎಚ್.ಜಿ. ಬಸವರಾಜಪ್ಪ ಹನುಮನಹಳ್ಳಿ, ಜಿ.ಎಸ್. ಸುರೇಂದ್ರ, ದೇವಿಕಾ ಪ್ರಕಾಶ್, ಶರಣಪ್ಪ , ತೋಳಹುಣಸೆ ಶೇಖರಪ್ಪ, ಬಾಡದ ಕೆ.ಸಿ. ರೇವಣಸಿದ್ಧಪ್ಪ, ತಿಪ್ಪೇಸ್ವಾಮಿ ಇತರರು ಅಭಿನಂದಿಸಿದರು. ಎಸ್. ಶರಣಪ್ಪ ಸ್ವಾಗತಿಸಿದರು. ಸುರೇಶ್ ನಿರೂಪಿಸಿದರು. ಕೆ. ರಾಘವೇಂದ್ರ ನಾಯರಿ ವಂದಿಸಿದರು.