Advertisement

ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳು

12:41 PM Jul 04, 2017 | Team Udayavani |

ಪಿರಿಯಾಪಟ್ಟಣ: ಭಾರಿ ಪ್ರಮಾಣದ ಸಿಡಿಮದ್ದು ಸಿಡಿಸಿ ಗ್ರಾಮದ ಜನರ ನಿದ್ರೆಗೆಡಿಸುತ್ತಿರುವ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಬೆಟ್ಟದಪುರ ಸುತ್ತಮುತ್ತಲ ಗ್ರಾಮಗಳ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಬೆಟ್ಟದಪುರದ ಪಕ್ಕದಲ್ಲಿ ಇರುವ ಸೀತೆಬೆಟ್ಟವೆಂಬ ತಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿ ಪ್ರತಿದಿನ ಸಿಡಿಲಿಗೂ ಮಿಗಿಲಾಗಿ ಸಿಡಿಮದ್ದು ಸಿಡಿಸುತ್ತಿದ್ದು, ಈ ಬಗ್ಗೆ ಸ್ಥಳಿಯ ರೈತರು ಹಾಕಿರುವ ಬೋರ್‌ವೆಲ್‌ ಮತ್ತು ಸಮೀಪವೆ ಇರುವ ವೃದ್ಧರು ಮತ್ತು ಮಕ್ಕಳು ಶಬ್ದ ಮಾಲಿನ್ಯದ ನೋವನ್ನು ತಡೆದುಕೊಳ್ಳದೆ ಜನರಿಗೆ ಎಲೆಕ್ಟ್ರಾನಿಕ್‌ ವಸ್ತುಗಳು, ಟೀವಿ, ಮತ್ತು ಫ್ರಿಜ್‌ಗಳು ಶಬ್ದಕ್ಕೆ ಸುಟ್ಟುಹೋಗುತ್ತಿದ್ದು ಇದರಿಂದ ಜನರಿಗೆ ತುಂಬಾ ತೊಂದರೆಯಾಗಿದೆ ಎಂದು ಸಂಬಂಧಪಟ್ಟ ಗಣಿ ಇಲಾಖೆಗೆ ಹಲವಾರು ಬಾರಿ ರೈತರು ದೂರು ನೀಡುತ್ತಿದ್ದು ಇದುವರೆಗೂ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ.

ಅಲ್ಲದೇ ರಾತ್ರಿ ಎಂಟು ಗಂಟೆಯ ನಂತರ ಸಿಡಿಮದ್ದು ಸಿಡಿಸುವುದರಿಂದ ಯಾವುದೇ ಅಧಿಕಾರಿಗಳು ರಾತ್ರಿ ವೇಳೆ ಬರುವುದಿಲ್ಲ ಮತ್ತು ಯಾವುದೇ ಗಣಿಗಾರಿಕೆಗೆ ಸುಪ್ರೀ ಕೋರ್ಟ್‌ ರಾತ್ರಿ ವೇಳೆಯಲ್ಲಿ ಗಣಿಗಾರಿಕೆ ನಡೆಸಿ ವನ್ಯ ಜೀವಿಗಳಿಗೆ ಮತ್ತು ಯಾವುದೇ ಶಬ್ದ ಮಾಲಿನ್ಯ ಮಾಡದಂತೆ ಆದೇಶವಿದ್ದರೂ  ರಾತ್ರಿಯೆಲ್ಲ ಗಣಿಗಾರಿಕೆ ಮಾಡಿ ಜನರಿಗೆ ನಿದ್ದೆ ಬಾರದಂತೆ ತೊಂದರೆಯಾಗಿದೆ.

ಕೂಡಲೇ ಸಂಬಂಧಿಸಿದ ಗಣಿ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮೈಸೂರಿನ ಗಣಿಗಾರಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಬೆಟ್ಟದಪುರ ಮತ್ತು ಸುತ್ತಮುತ್ತಲ ಗ್ರಾಮಗಳಾದ ಕೂರಗಲ್ಲು, ಬ್ಯಾಡರಬಿಳಗುಲಿ, ಮಂಟಿಬಿಳಗೂಲಿ, ಜೋಗನಹಳ್ಳಿ, ಸಾಲುಕೊಪ್ಪಲು ಜನರು ಮತ್ತು ರೈತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next