ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸಕ್ಕರೆ ಕಾರ್ಖಾನೆ ಗೋದಾಮಿನಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ ಭಾವಚಿತ್ರ ಇರುವ ಅಪಾರ ಪ್ರಮಾಣದ ಟಿ-ಶರ್ಟ್ ಹಾಗೂ ಗೋಡೆ ಗಡಿಯಾರಗಳು ಇರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಯರಗಲ್-ಮದರಿ ಬಳಿ ಇರುವ ಸಕ್ಕರೆ ಕಾರ್ಖಾನೆಗೆ ಸೇರಿದ ಗೋದಾಮಿನಲ್ಲಿ ಅಕ್ರಮವಾಗಿ ಟಿ-ಶರ್ಟ್, ಗೋಡೆ ಗಡಿಯಾರಗಳು ಸೇರಿದಂತೆ ಚುನಾವಣೆಯಲ್ಲಿ ಜನರಿಗೆ ಹಂಚಲು ಇತರೆ ವಸ್ತುಗಳನ್ನು ದಾಸ್ತಾನು ಮಾಡಿದ್ದಾಗಿ ಕಂದಾಯ, ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಕೂಡಲೇ ದಾಳಿ ನಡೆಸಿರುವ ಅಧಿಕಾರಿಗಳ ತಂಡ, ಟಿ-ಶರ್ಟ್, ಗಡಿಯಾರಗಳು, ಕೈಚೀಲಗಳು ಪರಿಶೀಲನೆ ವೇಳೆ ಪತ್ತೆಯಾಗಿವೆ. ಹೀಗೆ ಪತ್ತೆಯಾದ ವಸ್ತುಗಳ ಮೇಲೆ ಮಾಜಿ ಸಚಿವ ಎಸ್.ಆರ್.ಪಾಟೀಲ ಅವರ ಭಾವಚಿತ್ರ ಇರುವುದು ಕಂಡುಬಂದಿದೆ.
ದಾಸ್ತಾನು ಮಾಡಿದವರು ಯಾರು, ಎಲ್ಲಿಗೆ ಸಾಗಿಸಲು ಯೋಜಿಸಿದ್ದರು, ಪತ್ತೆಯಾಗಿರುವ ವಸ್ತುಗಳ ಮೌಲ್ಯ ಎಷ್ಟು ಎಂದೆಲ್ಲಾ ಸಮಗ್ರ ಮಾಹಿತಿ ಸಂಗ್ರಹಿಸಿ, ಲೆಕ್ಕ ಹಾಕುವಲ್ಲಿ ನಿರತರಾಗಿದ್ದಾರೆ.
Related Articles
ಹೀಗಾಗಿ ಅಧಿಕಾರಿಗಳು ಪ್ರಕರಣದ ಕುರಿತು ಮಾಧ್ಯಮಗಳಿಗೆ ಹೆಚ್ಚಿನ ವಿವರ ನೀಡುತ್ತಿಲ್ಲ.