ತಾಳಿಕೋಟೆ: ಕೊರೊನಾ ತಡೆಗಟ್ಟುವ ಸಲುವಾಗಿಹೊರಡಿಸಿದ ಮಾರ್ಗಸೂಚಿಗಳಂತೆ ಶುಕ್ರವಾರತಹಶೀಲ್ದಾರ್ ಅನಿಲಕುಮಾರ ಢವಳಗಿ, ಪಿಎಸೈವಿನೋದ ದೊಡಮನಿ ಮತ್ತು ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ನೇತೃತ್ವದ ತಂಡ ಪಟ್ಟಣದಎಲ್ಲ ಅಂಗಡಿಗಳಿಗೆ ಬೀಗ ಹಾಕಿಸಿದರಲ್ಲದೇಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದೆಂದುಎಚ್ಚರಿಸಿದರು.
ಪಟ್ಟಣದ ಶಿವಾಜಿ ವೃತ್ತದಿಂದ ವಿಜಯಪುರವೃತ್ತದವರೆಗೆ ಹಾಗೂ ಕೆಇಬಿವರೆಗೆ ಅಲ್ಲದೇಅಂಬೇಡ್ಕರ್ ಸರ್ಕಲ್, ಕತ್ರಿ ಬಜಾರ್ ಒಳಗೊಂಡುಮುಖ್ಯ ರಸ್ತೆಯಲ್ಲಿದ್ದ ಕಿರಾಣಿ, ಸಲೂನ್, ಕಾಯಪಲ್ಲೆಮಾರಾಟಗಾರರನ್ನು ಹೊರತು ಪಡಿಸಿ ಇನ್ನೂಳಿದಎಲ್ಲ ಅಂಗಡಿಗಳಿಗೆ ಬೀಗ ಹಾಕಿಸಿದರಲ್ಲದೇಇಂದು ರಾತ್ರಿ 9ರಿಂದ ಸೋಮವಾರ ಬೆಳಗ್ಗೆ6ರವರೆಗೆ ಯಾವುದೇ ಅಂಗಡಿ ಮುಂಗಟ್ಟುತೆರೆಯುವಂತಿಲ್ಲ.
ಜನ ಕೂಡಾ ರಸ್ತೆಗೆ ಬರುವಂತಿಲ್ಲ.ಇಡಿ ಪಟ್ಟಣ ಸಂಪೂರ್ಣ ಲಾಕ್ ಆಗಲಿದೆ ಎಂದುತಹಶೀಲ್ದಾರ್ ಅನಿಲಕುಮಾರ ಢವಳಗಿ ಪತ್ರಿಕೆಗೆಮಾಹಿತಿ ನೀಡಿದರು. ಸೋಮವಾರದಿಂದ ಅಗತ್ಯವಸ್ತುಗಳಿಗೆ ಬೆಳಗ್ಗೆ 6ರಿಂದ 10ರವರೆಗೆ ಅವಕಾಶಕಲ್ಪಿಸಲಾಗಿದೆ. ಕಿರಾಣಿ, ಹಾಲು, ಆಸ್ಪತ್ರೆ, ಔಷಧಅಂಗಡಿ ಒಳಗೊಂಡು ಅಗತ್ಯ ವಸ್ತುಗಳಿಗೆ ಮಾತ್ರಅವಕಾಶ ಇರಲಿದೆ.
ಇನ್ನುಳಿದಂತೆ ಎಲ್ಲ ಅಂಗಡಿಮುಂಗಟ್ಟುಗಳು ಮೇ 4ರವರೆಗೆ ಬಂದ್ ಆಗಲಿವೆ.ಮಾಸ್ಕ್ ಇಲ್ಲದೇ ಯಾರೂ ಕೂಡಾ ಹೊರಬರಬಾರದು ಮತ್ತು ಮಾಸ್ಕ್ ಇಲ್ಲದೇ ಅಗತ್ಯವಸ್ತು ಮಾರಾಟಗಾರರೂ ಕೂಡಾ ಕೂಡುವಂತಿಲ್ಲ.ಗ್ರಾಹಕರಿಗೆ ಸಾಮಾಜಿಕ ಅಂತರದೊಂದಿಗೆವ್ಯವಹಾರ ಮಾಡಬೇಕು ಇದನ್ನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿ ಶಿಸ್ತು ಕ್ರಮಜರುಗಿಸಲಾಗುವುದು ಎಂದರು.
ಶ್ರೀಪಾದ ಜೋಶಿ, ಎಸ್.ಎ. ಘತ್ತರಗಿ,ಶಿವು ಜುಮನಾಳ, ಎಎಸೈ ಆರ್.ಎಸ್. ಭಂಗಿ,ಸಿಬ್ಬಂದಿಯಾದ ಎಂ.ಎಲ್. ಪಟ್ಟೇದ, ಗಿರೀಶಚಲವಾದಿ, ಸಂಗಮೇಶ, ರಾಜಕುಮಾರ ಇದ್ದರು.