ಅಧಿಕಾರಿ ವಿನಯ್‌ಕುಮಾರ್ ನೇತೃತ್ವದ ತಂಡ ತನಿಖೆ ಆರಂಭಿಸುವ ಮುನ್ನವೇ, ಜೈಲಿನಲ್ಲಿ ಕೈದಿಗಳ ಎತ್ತಂಗಡಿ
ಕಾರ್ಯ ನಡೆಸಲಾಗಿದೆ. ಇದು ಸಾಕ್ಷ್ಯ ನಾಶಪಡಿಸುವ ಪ್ರಯತ್ನವೆಂದೇ ಹೇಳಲಾಗುತ್ತಿದ್ದು, ಡಿಐಜಿ ರೂಪಾ ಅವರಿಗೆ
ಜೈಲಿನ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದ ಶಂಕೆ ಮೇರೆಗೆ ರಾತ್ರೋರಾತ್ರಿ ಸುಮಾರು 32 ಮಂದಿ ಕೈದಿಗಳನ್ನು ಬೇರೆ
ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ.
Advertisement
ಸೋಮವಾರದಿಂದ ವಿನಯ್‌ಕುಮಾರ್ ಅವರು ತನಿಖೆ ಆರಂಭಿಸಲಿದ್ದಾರೆ. ಈ ಸಂದರ್ಭದಲ್ಲಿ ಕೈದಿಗಳು ಅವ್ಯವಹಾರದಬಗ್ಗೆ ಮಾಹಿತಿ ನೀಡಬಾರದು ಎನ್ನುವ ಉದ್ದೇಶದಿಂದ ಸಂದೇಹಾಸ್ಪದ ಕೈದಿಗಳನ್ನ ಮೈಸೂರು, ಬೆಳಗಾವಿ ಮತ್ತು
ಬಳ್ಳಾರಿ ಬಂದೀಖಾನೆ ಗಳಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕೈದಿಗಳಾದ ಅನಂತ ಮೂರ್ತಿ, ಚಂದ್ರು,
ರಾಮ ಮೂರ್ತಿ ವರ್ಗಾವಣೆಗೊಂಡ ವರಲ್ಲಿ ಪ್ರಮುಖರಾಗಿದ್ದಾರೆ. ಮೈಸೂರಿಗೆ ನಾಲ್ವರು, ಬೆಳಗಾವಿಯ ಹಿಂಡಲಗ ಜೈಲಿಗೆ ಎಂಟು ಮಂದಿ ಹಾಗೂ ಇನ್ನುಳಿದವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು
ಮೂಲಗಳು ತಿಳಿಸಿವೆ. ವಿಚಾರಣಾಧೀನ ಹಾಗೂ ಸಜಾಬಂಧಿ ಕೈದಿಗಳನ್ನು ಸ್ಥಳಾಂತರ ಮಾಡಿರುವುದು ತನಿಖೆಯ ದಿಕ್ಕು ತಪ್ಪಿಸುವ ಒಂದು ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.
ಅಧಿಕಾರಿಗಳು ಕೈದಿಗಳ ಸ್ಥಳಾಂತರಕ್ಕೆ ನೀಡುವ ಕಾರಣವೇ ಬೇರೆಯಾಗಿದೆ. ಅಕ್ರಮ ಆರೋಪದ ಬಗ್ಗೆ ಡಿಐಜಿ ರೂಪಾ
ಮತ್ತು ಡಿಜಿ ಸತ್ಯನಾರಾಯಣರಾವ್ ಪ್ರತ್ಯೇಕವಾಗಿ ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೈದಿಗಳು ಪರ-ವಿರೋಧ
ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ್ದರ ಹಿನ್ನೆಲೆಯಲ್ಲಿ ಭದ್ರತೆ ದೃಷ್ಠಿಯಿಂದ ಬೇರೆ ಕಾರಾಗೃೃಹಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾವನ ಸಾವಿನ ಸುದ್ದಿ ತಿಳಿಸಲು ಬಿಡಲಿಲ್ಲ!
ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೊಬ್ಬರ ತಂದೆಯ ಸಾವಿನ ಸುದ್ದಿ ತಿಳಿಸಲು ಬಂದ ಪತ್ನಿಯನ್ನು ಒಳಗಡೆ ಬಿಡದೇ ಕಾರಾಗೃಹ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡ ಘಟನೆ ಭಾನುವಾರ ಪರಪ್ಪನ ಅಗ್ರಹಾರ ಜೈಲಿನ ಬಳಿ ನಡೆದಿದೆ. ಪ್ರಕರಣವೊಂದರಲ್ಲಿ ತುಮಕೂರಿನ ಬೆಳ್ಳಾವಿ ಗ್ರಾಮದ ನಿವಾಸಿ ರಾಜಣ್ಣ ಎಂಬವರು ವಿಚಾರಣಾಧೀನ ಕೈದಿ ಯಾಗಿ ಜೈಲಿನಲ್ಲಿ¨ªಾರೆ. ಶನಿವಾರ ರಾಜಣ್ಣರ ತಂದೆ ಸಾವನ್ನಪ್ಪಿದ್ದು, ಈ ಸಂಬಂಧ ರಾಜಣ್ಣ ಪತ್ನಿ ಅರುಣಾ ಮತ್ತು ನಾದಿನಿ ಪ್ರೇಮಾ ಭಾನುವಾರ ಜೈಲಿಗೆ ಆಗಮಿಸಿದ್ದರು. ಬೆಳಗ್ಗೆಯಿಂದ ಅರುಣಾ ಅವರು ಪತಿಯನ್ನು ಭೇಟಿ
ಯಾಗಲು ಸಾಕಷ್ಟು ಪ್ರಯತ್ನಿಸಿದ್ರೂ ಸಾಧ್ಯವಾಗಿಲ್ಲ.
Related Articles
ಸಿಬ್ಬಂದಿ ಸ್ಪಂದಿಸಿಲ್ಲ. ಕಳೆದ ಎರಡು ದಿನದಿಂದ ಜೈಲಿನಲ್ಲಿ ಗಲಾಟೆ ನಡಿತಿದ್ದು, ಭಾನುವಾರವಾದ್ದರಿಂದ ಕೈದಿಗಳನ್ನು
ನೋಡಲು ಸಾಧ್ಯ ವಿಲ್ಲ ಎಂದು ಉತ್ತರಿಸಿ ದ್ದಾರೆ. ಕೊಡಿಗೆಹಳ್ಳಿ ಪೊಲೀ ಸರು ರಾಜಣ್ಣನನ್ನ ವಶಕ್ಕೆ ಪಡೆದು ಬಂಧಿಸಿದ್ದರು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಜೈಲಿನ ಸಿಬ್ಬಂದಿ, ಪತ್ನಿ ಅರುಣಾ ಅವರಿಗೆ ರಾಜಣ್ಣ ಭೇಟಿಗೆ ಅವಕಾಶ ನೀಡಿದ್ದಾರೆ.
Advertisement
ಹಿಗ್ಗಾಮುಗ್ಗಾ ಥಳಿತ?ಜೈಲಿನಲ್ಲಿ ಡಿಐಜಿ ರೂಪಾ ಪರ ಮತ್ತು ವಿರೋಧವಾಗಿ ಪ್ರತಿಭಟನೆ ನಡೆಸಿದ ಕೈದಿಗಳಿಗೆ ಜೈಲಿನ ಸಿಬ್ಬಂದಿ ಹಿಗ್ಗಾಮುಗ್ಗಾ
ಥಳಿಸಿದ್ದಾರೆ ಎನ್ನಲಾಗಿದೆ. ಅವರ ಲಾಠಿ ಏಟಿನ ತೀವ್ರತೆ ಎಷ್ಟಿತ್ತೆಂದರೆ ಕೈದಿಗಳು ಸ್ಥಳಾಂತರಗೊಳ್ಳುತ್ತಿರುವ ವೇಳೆ ನಡೆಯಲು ಸಹ ಸಾಧ್ಯವಾಗುತ್ತಿರಲಿಲ್ಲ. ಬೇರೆ ಜೈಲಿಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೂ ಸಹ ಲಾಠಿ ಏಟು
ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.