Advertisement
ದೇವತೆಗಳಿಗೆ ಅರ್ಚನೆ, ಪೂಜೆ ಮಾಡುವ ಸಂದರ್ಭದಲ್ಲಿ ಉಗ್ರವಾಸನೆಯ ಸುಗಂಧ ತೈಲವನ್ನು ಉಪಯೋಗಿಸಬಾರದು . ಉಗ್ರವಾಸನೆಯಿಂದ ಪ್ರಕ್ಷೇಪಿತವಾಗುವ ಪರಿಮಳದ ಲಹರಿಗಳ ಕಡೆಗೆ ದೇವತೆಯ ಸಗುಣ ತಣ್ತೀವು ಮಾತ್ರ ಆಕರ್ಷಿಸಲ್ಪಡುತ್ತದೆ. ತದ್ವಿರುದ್ಧ ಮಂದ ಮತ್ತು ಮನಸಿಗೆ ಆಹ್ಲಾದಕವೆನಿಸುವ ಸೌಮ್ಯ ಪರಿಮಳದಿಂದ ಬ್ರಹ್ಮಾಂಡದಲ್ಲಿನ ನಿಜಗುಣ ತಣ್ತೀವು ಕಡಿಮೆ ಕಾಲಾವಧಿಯಲ್ಲಿ ಆಕರ್ಷಿಸಲ್ಪಡುತ್ತದೆ. ಇದರಿಂದ ಜೀವಕ್ಕೆ ಸಿಗುವ ಚೈತನ್ಯವು ದೀರ್ಘಕಾಲ ಉಳಿಯುತ್ತದೆ.(ಆಧಾರ : ಸನಾತನ ಸಂಸ್ಥೆಯ “ಪೂಜಾಸಾಮಗ್ರಿಯ ಮಹತ್ವವೇನು ? ಕೃತಿಯಿಂದ)