Advertisement

ಪುಟಿದೆದ್ದ ಬಂಗಾರದ ಮಾರಾಟ: ಆಭರಣ ಅಂಗಡಿಗಳಿಂದ ಆಫ‌ರ್

04:20 PM Oct 23, 2020 | Nagendra Trasi |

ಬೆಂಗಳೂರು: ಕೊರೊನಾ ಲಾಕ್‌ ಡೌನ್‌ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಚಿನ್ನಾಭರಣ ಉದ್ಯಮವು ಚೇತರಿಕೆಯ ಹಾದಿಯಲ್ಲಿದೆ. ಗ್ರಾಹಕರ ಸಂಖ್ಯೆಯಲ್ಲೂ ಶೇ.40 ಹೆಚ್ಚಳವಾಗಿದ್ದು, ಮಾಸಿಕ ವಹಿವಾಟು 500 ಕೋಟಿ ರೂ.ಗೆ ತಲುಪಿದೆ.

Advertisement

ಒಂದೆಡೆ ದಸರಾ-ದೀಪಾವಳಿ ಹಬ್ಬ ಚೇತರಿಕೆಯ ಟಾನಿಕ್‌ ನೀಡುತ್ತಿದ್ದು, ಮತ್ತೂಂದೆಡೆ ಜನರು ಭವಿಷ್ಯದ “ನಿಧಿ’ಯಾಗಿ ಚಿನ್ನವನ್ನು ಆಯ್ಕೆ ಮಾಡುತ್ತಿರುವುದು ಮಾರುಕಟ್ಟೆಯನ್ನು ಪುಟಿದೇಳುವಂತೆ ಮಾಡಿದೆ. ಜತೆಗೆ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಆಭರಣ ಅಂಗಡಿಗಳು ಉತ್ತಮ ಆಫ‌ರ್‌ಗಳನ್ನು ನೀಡುತ್ತಿದ್ದು, ಜನರನ್ನು ಸೆಳೆಯುವ ಕೆಲಸ ಮಾಡುತ್ತಿವೆ.

ಶೇ.40 ಗ್ರಾಹಕರು ಹೆಚ್ಚಳ: ಲಾಕ್‌ಡೌನ್‌ ಅವಧಿಯಲ್ಲಿ ವಹಿವಾಟು ಸಂಪೂರ್ಣ ಬಂದ್‌ ಆಗಿತ್ತು. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಅನ್‌ಲಾಕ್‌ ಆರಂಭವಾದ ಜೂನ್‌, ಜುಲೈನಲ್ಲಿ ಶೇ.5 ರಷ್ಟು, ಆಗಸ್ಟ್‌, ಸೆಪ್ಟೆಂ ಬರ್‌ನಲ್ಲಿ ಶೇ.15ರಷ್ಟು ಗ್ರಾಹಕರು ಚಿನ್ನದಂಗಡಿಗಳಿಗೆ ಭೇಟಿ ನೀಡು ತ್ತಿದ್ದರು. ಅಕ್ಟೋಬರ್‌ನಲ್ಲಿ ಹಬ್ಬಗಳ ವಿಶೇಷ ಮಾರಾಟ ಆರಂಭವಾದ ಬಳಿಕ ಗ್ರಾಹಕರ ಆಗಮನ ಶೇ.40ಕ್ಕೆ ಹೆಚ್ಚಳವಾಗಿದೆ ಎಂದು ರಾಜ್ಯ ಚಿನ್ನ ಮಾರಾಟಗಾರ ಸಂಘ ಹೇಳುತ್ತಿದೆ.

ಸದ್ಯ ಇಳಿಕೆಯಾಗಲ್ಲ ಚಿನ್ನ: ಜನರು ಚಿನ್ನದ ದರ ಇಳಿಕೆಯನ್ನು ಎದುರು ನೋಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ವರ್ಷ ಭಾರೀ ಪ್ರಮಾಣದಲ್ಲಿ ದರ ಇಳಿಕೆಯಾಗಲ್ಲ. 60-80 ರೂ. ಏರಿಳಿಕೆಯಾಗುತ್ತದೆ. ಮುಂದಿನ ವರ್ಷ ಕೊರೊನಾ ಲಸಿಕ ತಡವಾಗಿ ಪರಿಸ್ಥಿತಿ ಇನ್ನಷ್ಟು ಕ್ಲಿಷ್ಟ ವಾದರೆ ಮತ್ತೆ ದರ ಏರಿಕೆಯಾಗುತ್ತದೆ ಎಂದು ರಾಜ್ಯ ಆಭರಣ ವರ್ತ ಕರ ಸಂಘದ ಅಧ್ಯಕ್ಷ ಡಾ.ರಾಮಾಚಾರಿ ಹೇಳುತ್ತಾರೆ. ತನಿಷ್ಕ್‌ ಜ್ಯುವೆಲರಿಯಲ್ಲಿ ಚಿನ್ನಾಭರಣಗಳ ಮೇಕಿಂಗ್‌ ಚಾರ್ಜ್‌ನಲ್ಲಿ ಶೇ.25 ರವರೆಗೂ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಆಭರಣ ಅಂಗಡಿಗಳಿಂದ ರಿಯಾಯಿತಿ
ಹಬ್ಬದ ಹಿನ್ನೆಲೆ ವಿವಿಧ ಚಿನ್ನಾಭರಣಗಳ ಮೇಕಿಂಗ್‌ ಶುಲ್ಕದಲ್ಲಿ ಶೇ.70 ರವರೆಗೂ ರಿಯಾಯಿತಿ ನೀಡಲಾಗಿದೆ. ವಜ್ರ ಪ್ರತಿ ಕ್ಯಾರೆಟ್‌ ಗೆ 13 ಸಾವಿರದವರೆಗೂ ರಿಯಾಯಿತಿ, ಬೆಳ್ಳಿ ಮೇಕಿಂಗ್‌ ಚಾರ್ಜ್‌ಗೆ ಶೇ.30 ರಿಯಾಯಿತಿ ಇದೆ.

Advertisement

ಲಕ್ಕಿ ಡ್ರಾ ಸೇಲ್‌ ನಡೆಯುತ್ತಿದ್ದು, 20 ಸಾವಿರಕ್ಕೂ ಅಧಿಕ ಮೌಲ್ಯದ ವಸ್ತು ಕೊಂಡರೆ, ಲಕ್ಕಿ ಡ್ರಾ ಆಗಿ 55 ಹೊಂಡಾ ಅಕ್ಟಿವಾ ಸ್ಕೂಟರ್‌ಗಳಿವೆ. 50 ಸಾವಿರಕ್ಕೂ ಮೇಲ್ಕಟ್ಟ ಆಭರಣ ಕೊಂಡರೆ, ಲಕ್ಕೀ ಡ್ರಾಗೆ 11 ಹುಂಡೈ ಕಾರುಗಳನ್ನು ಇಡಲಾಗಿದೆ ಎಂದು ಭೀಮಾ ಜ್ಯುವೆಲರ್ಸ್‌ನ ಸೇಲ್ಸ್‌ ಮತ್ತು
ಮಾರ್ಕೆ ಟಿಂಗ್‌ ವಿಭಾ ಗದ ಮುಖ್ಯಸ್ಥ ಮಹೇಶ್‌ ಶಿವರಾಮ್‌ ಹೇಳಿದ್ದಾರೆ.

ವಜ್ರ ಖರೀದಿ ಮೇಲೆ ಪ್ರತಿ ಕ್ಯಾರೆಟ್‌ಗೆ 3000 ರೂ. ಮತ್ತು ಚಿನ್ನಾಭರಣಗಳಲ್ಲಿ ಶೇ.2 ವೇಸ್ಟೆಜ್‌ ರಿಯಾಯಿತಿಯನ್ನು ನೀಡಲಾಗಿದೆ. ಗ್ರಾಹಕರ ಆಕರ್ಷಿಸಲು ಹೊಸ ವಿನ್ಯಾಸದ ಆಭರಣಗಳ ಮಾರಾಟಕ್ಕೆ ಆದ್ಯತೆ ನೀಡಲಾಗಿದೆ.
ಮೀರಾನ್‌ ಮನ್ನಾ,
ಶಾಖಾ ವ್ಯವಸ್ಥಾಪಕ ಲಲಿತಾ ಜ್ಯುವೆಲ್ಲರಿ ಮಾರ್ಟ್‌

ಗ್ರಾಹಕರು ನೀಡುವ ಹಳೆ ಚಿನ್ನದ ಮೇಲೆ ಗ್ರಾಂಗೆ 50 ರೂ. ಹೆಚ್ಚು ಹಣ ನೀಡಿ ಖರೀದಿಸಲಾಗುತ್ತಿದೆ. ಹೊಸ ಚಿನ್ನದ ಮೇಲೆ 150 ರೂ. ರಿಯಾಯಿತಿ, ಒಂದು ಕೆ.ಜಿ ಬೆಳ್ಳಿ ಮೇಲೆ ಎರಡು ಸಾವಿರ ರಿಯಾಯಿತಿ ನೀಡಲಾಗಿದೆ.
ಟಿ.ಎ.ಶರವಣ, ಅಧ್ಯಕ್ಷ,
ರಾಜ್ಯ ಜ್ಯುವೆಲರಿ ಅಸೋಸಿಯೇಷನ್‌

ದಸರಾ, ದೀಪಾವಳಿ ಕಡಿಮೆ ಅಂತರದಲ್ಲಿ ಬಂದಿರುವುದರಿಂದ ವಹಿವಾಟಿಗೆ ಚೇತರಿಕೆ ನೀಡಿವೆ. ಪ್ರಸಕ್ತ ತಿಂಗಳು ವಹಿವಾಟು ಒಂದು ಸಾವಿರ ಕೋಟಿಗೆ ಹೆಚ್ಚಳವಾಗುವ ನಿರೀಕ್ಷೆ ಇದೆ.
ಡಾ.ರಾಮಾಚಾರಿ,
ಅಧ್ಯಕ್ಷ, ರಾಜ್ಯ ಆಭರಣ ವರ್ತಕರ ಸಂಘ
ಜಯಪ್ರಕಾಶ್ ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next