Advertisement
ಬೇರೆ ಏನು ಮಾಡಬೇಕು ಅಂತ ತಿಳಿಯದವರು, ವೃತ್ತಿಯಿಂದ ಬಲು ಬೇಗ ನಿವೃತ್ತರಾಗುವುದೂ ಉಂಟು. ತಾವು ಮಾಡುತ್ತಿರುವ ಕೆಲಸ ತೀರಾ ಬೋರ್ ಹೊಡೆಸುತ್ತಿದೆ ಅನ್ನಿಸಿದಾಗ ಕೆಲವರು ಆ ಕೆಲಸ ಬಿಟ್ಟು ಇನ್ನೊಂದು ಕೆಲಸ ಹುಡುಕುತ್ತಾರೆ. ಎಷ್ಟೋ ಸಲ, ಪದವಿ ಇಲ್ಲಿ ಅಡ್ಡ ಬರೋಲ್ಲ. ಎಷ್ಟೋ ಜನ ಹವ್ಯಾಸವನ್ನೇ ವೃತ್ತಿಯನ್ನಾಗಿಸಿಕೊಳ್ಳುತ್ತಾರೆ.
Related Articles
Advertisement
ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟ್ ಮ್ಯಾನೇಜ್‌ಮೆಂಟ್, ನಾರ್ತ್ ಬೆಂಗಾಲ್, ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಮೂರು ತಿಂಗಳಿಂದ ಒಂದು ವರ್ಷದ ಅವಧಿಯವರೆಗಿನ ಟೀ. ಟೇಸ್ಟಿಂಗ್ ಬಗ್ಗೆ ಕೋರ್ಸ್‌ಗಳು ಇವೆ.
ನಾಯಿ ಬೆಕ್ಕುಗಳ ಶೃಂಗಾರ : ಮನೆಯಲ್ಲಿರುವ ನಾಯಿ, ಬೆಕ್ಕುಗಳು ಕೇವಲ ಪ್ರೀತಿಯ ಪ್ರಾಣಿಗಳು ಮಾತ್ರವಲ್ಲ. ಅವುಗಳು ಕೂಡ ನಮ್ಮ ನಿಮ್ಮಂತೆ ಬಲು ಸುಂದರವಾಗಿ ಕಾಣಬೇಕು ಅನ್ನೋದು ಕೆಲವು ಮಾಲೀಕರ ಆಸೆ. ಇದೇನು ಪ್ರಾಣಿಗಳ ಬೇಡಿಕೆಅಲ್ಲದೇ ಇದ್ದರೂ ಪರರ ನೋಟದ ಬಲೆಗೆ ಈ ಪೆಟ್ ಅನಿಮಲ್‌ಗಳೂ ಬಿದ್ದಿವೆ. ಹೀಗಾಗಿ, ಪೆಟ್ ಅನಿಮಲ್‌ಗಳಿಗೆ ಅಲಂಕಾರ ಮಾಡುವುದು ಕೂಡ ಉದ್ಯೋಗವಾಗಿದೆ. ಮನುಷ್ಯರೆಲ್ಲ ಹೇಗೆ ತಲೆಯ ಕೂದಲು ಕಟ್ ಮಾಡಿಕೊಳ್ಳುತ್ತಾರೋ, ಮಹಿಳೆಯರು ಹೇಗೆ ಐಬ್ರೋ ತೀಡಿಕೊಳ್ಳುತ್ತಾರೋ, ಅದೆಲ್ಲವನ್ನೂ ತಾವು ಸಾಕಿದ ಮುದ್ದು ಪ್ರಾಣಿಗಳಿಗೂ ಮಾಡಿ ಅವುಗಳ ಚೆಂದ ನೋಡಬೇಕು ಎಂದುಆಸೆಪಡುವ ಮಾಲೀಕರೂ ಇದ್ದಾರೆ.
ಹಾಗಾಗಿ, ಪೆಟ್‌ಗಳಿಗೆ ಶೃಂಗಾರ ಮಾಡುವುದನ್ನು ಕಲಿಸುವ ಕೋರ್ಸ್ ಗಳೂ ಇವೆ. ಈ ಕೋರ್ಸ್‌ಗಳಲ್ಲಿ, ಮುದ್ದು ಪ್ರಾಣಿಗಳ ವರ್ತನೆಯ ಬಗ್ಗೆ ತಿಳಿಸಿಕೊಡಲಾಗುತ್ತದೆ. ಹಾಗೆಯೇ, ಹೈಜನಿಕ್ ಆಗಿ ಈ ಕೆಲಸ ಮಾಡುವ ಬಗ್ಗೆಯೂ ಕೋರ್ಸ್‌ನ ಸಿಲಬಸ್‌ನಲ್ಲಿ ವಿವರವಾಗಿ ತಿಳಿಸಲಾಗಿದೆ.
ಪ್ರಾಣಿಗಳ ಉಗುರು ಕತ್ತರಿಸುವುದು, ಕಣ್ಣುಗಳನ್ನು ತೀಡುವುದು ಮತ್ತು ಬಹಳ ಮುಖ್ಯವಾಗಿ, ನಾಯಿಗಳಿಗೆ ಕಟಿಂಗ್ ಮಾಡುವ ಮೂಲಕ ಅವುಗಳ ಒಟ್ಟಂದ ಬದಲಿಸುವುದು ಹೇಗೆ, ಅಂತೆಲ್ಲಾ ಇಲ್ಲಿ ಹೇಳಿಕೊಡುವುದುಂಟು. ಶ್ರೀ ಶಿರಡಿ ಸಾಯಿ ಇನ್‌ಸ್ಟಿಟ್ಯೂಟ್‌ನಂಥ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳು, ಮನೆಯಲ್ಲಿ ಸಾಕಿದ ಪ್ರಾಣಿಗಳನ್ನು ಚೆಂದಗೊಳಿ ಸುವುದಕ್ಕೆ ಪದವಿ ನೀಡುತ್ತಿವೆ. ಇದರಲ್ಲಿ 30 ದಿನ ದಿಂದ 180 ದಿನಗಳು ಹಾಗೂ ಒಂದು ವರ್ಷದ ಅವಧಿಯವರೆಗಿನ ಕೋರ್ಸ್‌ಗಳು ಇವೆ. ಸಾವಿರಾರು ರೂ. ಕೊಟ್ಟು ಖರೀದಿಸುವ ನಾಯಿ, ಬೆಕ್ಕು, ಪಕ್ಷಿಗಳ ನಿರ್ವಹಣೆಗೆ ಅವುಗಳ ಆರೈಕೆಯ ಕುರಿತು ಚೆನ್ನಾಗಿ ಬಲ್ಲ ಇವರುಗಳ ಸಹಾಯ ಬೇಕು. ಸಾಕು ಪ್ರಾಣಿಗಳ ಮೆಡಿಕಲ್ ಸ್ಟೋರನ್ನು ಕೂಡ ಇವರು ತೆರೆಯಬಹುದು. ವೆಟರ್ನಿಟಿ ಸಹಾಯಕರೂ ಆಗಬಹುದು.
ಜೆರೊಂಥಾಲಜಿ : ಇದೇನಪ್ಪಾ ಈ ಕೋರ್ಸ್‌ನ ಹೆಸರು ಹೀಗಿದೆ ಅಂತೀರಾ? ಹೌದು, ಇದೊಂದು ವಿಚಿತ್ರವಾದ ಕೋರ್ಸ್. ಶ್ರೀಮಂತರಿಗೆ ಹಾಗೂ ಸೇವಾ ಮನೋಭಾವದವರಿಗೆ ಮಾತ್ರ. ಹಣ ಮಾಡಲು ಇಲ್ಲಿ ಸಾಧ್ಯವಾಗದು. ಏಕೆಂದರೆ, ವಯಸ್ಸಾದಂತೆ ವೃದ್ಧರಲ್ಲಿ ಆಗುವ ಮಾನಸಿಕ, ದೈಹಿಕ ಬದಲಾವಣೆಯ ಬಗ್ಗೆ ಅಧ್ಯಯನ ಮಾಡುವುದು. ಅವರಿಗೆ ನೆರವಾಗುವುದು ಈ ಕೋರ್ಸ್‌ನ ಮೂಲ ಉದ್ದೇಶ. ಹಾಗಾಗಿ, ಆರ್ಥಿಕವಾಗಿ ಸದೃಢರಾಗಿರುವವರು, ಸೇವೆ ಮಾಡಬೇಕು ಅಂತ ಅನಿಸಿದವರು ಮಾತ್ರ ಈ ಕೋರ್ಸ್ ಮಾಡಬಹುದು.
ನಮ್ಮಲ್ಲಿರುವ ವೃದ್ಧಾಶ್ರಮ, ಆಸ್ಪತ್ರೆ, ಹೆಲ್ತ್‌ಕೇರ್‌ಗಳಲ್ಲಿ ವಯಸ್ಸಾದವರನ್ನು ಮುತುವರ್ಜಿಯಿಂದ ನೋಡಿಕೊಳ್ಳಲುತರಬೇತಿ ಪಡೆದವರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಾರೆ. ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್, ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಹೋಮ್ ಎಕನಾಮಿಕ್ಸ್‌ನಲ್ಲಿ ಈ ಕೋರ್ಸ್ ಉಂಟು.
ಥೆರಪಿಸ್ಟ್ : ಥೆರಪಿಸ್ಟ್ ಅಂದರೆ ವೈದ್ಯರಲ್ಲ. ಬದಲಾಗಿ, ನಮ್ಮಲ್ಲಿ ನರ್ಸ್‌ಗಳು ಅಂತೀವಲ್ಲ. ಅದೇ ರೀತಿಯಲ್ಲಿ ಕೆಲಸಮಾಡುವ ಆಯುರ್ವೇದ ಪದ್ಧತಿಯ ನರ್ಸ್‌ಗಳು ಅಂತಲೇ ಹೇಳಬೇಕು. ಹೌದು, ಇವರಿಗೆ ಆಯುರ್ವೇದ, ಸಿದ್ಧ ಔಷಧಗಳ ಬೇಸಿಕ್ ಜ್ಞಾನ ಇರಬೇಕು. ಇವರನ್ನು ಸ್ಪಾ ಥೆರಪಿಸ್ಟ್‌ಗಳು ಅಂತಲೂ ಕರೆಯುತ್ತಾರೆ. ಇದೀಗ ಸ್ಪಾ ಕ್ಷೇತ್ರ ಆಯುರ್ವೇದದ ವಿಸ್ತರಣಾ ರೂಪದಂತೆ ಆಗಿದೆ. ಆಲಸ್ಯ ದೇಹಕ್ಕೆ ಚಿಕಿತ್ಸೆ ಕೊಡುವ ನಮ್ಮ ಪ್ರಾಚೀನ ವಿಧಾನವೇ ಸ್ಪಾ. ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಸ್ಪಾ ಥೆರಪಿಸ್ಟ್‌ಗಳು ಆಗಬಹುದು. ಥೆರಪಿಸ್ಟ್ ಗಳು ಸ್ಪಾ ಬಗ್ಗೆ ಮಾಹಿತಿ ಕೊಡುವುದು, ಪ್ರಾಡಕ್ಟ್ಗಳು ಏತಕ್ಕೆ ಬಳಕೆಯಾಗುತ್ತವೆ? ಅದರ ಪರಿಣಾಮ ಏನಾಗುತ್ತದೆ ಎಂದು ವಿವರಿಸಿ, ಗ್ರಾಹಕರನ್ನು ಸೆಳೆಯುವ ಮಾರ್ಕೆಟಿಂಗ್ ಕೆಲಸ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಲ್ಯಾಕ್ಮೆ ಅಕಾಡೆಮಿಯಲ್ಲಿ ಇದಕ್ಕೆ ಸಂಬಂಧಿಸಿದ ಕೋರ್ಸ್‌ಗಳು ಇವೆ.
-ಗುರು