ಮಂಗಳೂರು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನ. 2ರಂದು ಮಂಗಳೂರಿಗೆ ಆಗಮಿಸಲಿ ದ್ದಾರೆ. ಬೆಳಗ್ಗೆ 10.30ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಬಳಿಕ ಸುರತ್ಕಲ್ ಎನ್‌ಐಟಿಕೆಯಲ್ಲಿ ನಡೆಯುವ 17ನೇ ಘಟಿಕೋತ್ಸವ ಮತ್ತು ವಜ್ರಮಹೋತ್ಸವದಲ್ಲಿ ಭಾಗವಹಿಸುವರು. ಅಪರಾಹ್ನ 3.10ಕ್ಕೆ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆರಳಲಿದ್ದಾರೆ.
ಪೂರ್ವಸಿದ್ಧತೆ ಸಭೆ
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅಧ್ಯಕ್ಷತೆ ಯಲ್ಲಿ ಶುಕ್ರವಾರ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ಉಪರಾಷ್ಟ್ರಪತಿಗಳ ಆಗಮನದ ವೇಳೆ ಭದ್ರತೆ ಸಹಿತ ಯಾವುದೇ ರೀತಿಯ ಲೋಪ ಕಂಡು ಬರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಉಪರಾಷ್ಟ್ರಪತಿಗಳು ವಿಮಾನ ನಿಲ್ದಾಣದಿಂದ ಸುರತ್ಕಲ್ ಎನ್‌ಐಟಿಕೆ ವರೆಗೆ ರಸ್ತೆ ಮೂಲಕ ಸಂಚರಿ ಸುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಮನಪಾ ಅಧಿಕಾರಿಗಳು ರಸ್ತೆಯನ್ನು ಕೂಡಲೇ ಸುವ್ಯಸ್ಥಿತಗೊಳಿಸಬೇಕು. ಅದರಲ್ಲೂ ಸುರತ್ಕಲ್‌ನಿಂದ ನಗರದ ಸರ್ಕಿಟ್ ಹೌಸ್ ವರೆಗಿನ ಹೆದ್ದಾರಿಯನ್ನು ತತ್‌ಕ್ಷಣದಿಂದಲೇ ಸುವ್ಯವಸ್ಥಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.