Advertisement
ಮಹಾನಗರ: “ಕರಾವಳಿಗೆ ನಾನು ಒಂದೆರಡು ಬಾರಿ ಈ ಹಿಂದೆ ಬಂದಿದ್ದೇನೆ. ಇಲ್ಲಿನ ಐಸ್‌ಕ್ರೀಂ ಹಾಗೂ ಬೇರೆ ಬೇರೆ ರೀತಿಯ ತಿನಿಸನ್ನು ಆಸ್ವಾದಿ ಸಿದ್ದೇನೆ. ಇಲ್ಲಿನ ಮೀನಿನ ಖಾದ್ಯ ಕೂಡ ಇಷ್ಟವಾಗುತ್ತದೆ. ಹೀಗಾಗಿ ಕರಾವಳಿ ಅಂದಾಗ ಇಲ್ಲಿನ ಒಂದೊಂದೇ ತಿನಿಸುಗಳು ನೆನಪಿಗೆ ಬರುತ್ತವೆ’ ಎಂದು ನೆನಪು ಮಾಡಿದವರು ವಾರಾಣಸಿಯ ಚೆಲುವೆ ಶಾನ್ವಿ ಶ್ರೀವಾಸ್ತವ.
ನಾನು ಹುಟ್ಟಿದ್ದು ವಾರಾಣಸಿಯಲ್ಲಿ. ವಿದ್ಯಾಭ್ಯಾಸ ಕೂಡ ಅಲ್ಲಿಯೇ ಆಗಿತ್ತು. ನಮ್ಮದು ಕೂಡು ಕುಟುಂಬ. ಸದ್ಯ ಮುಂಬಯಿಯಲ್ಲಿ ಹೆಚ್ಚು ಓಡಾಡು ತ್ತಿದ್ದೇನೆ. ಹಾಗೆಯೇ ಬೆಂಗಳೂರಿನಲ್ಲಿಯೂ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ನನ್ನ ಅಕ್ಕ ನಟಿಯಾಗಿದ್ದರೂ ನಾನು ನಟಿಯಾ ಗಬೇಕೆಂದು ಮನಸ್ಸು ಮಾಡಿರಲಿಲ್ಲ. ಆದರೆ ಮೊದಲ ಸಿನೆಮಾ ಹೆಸರು ಮಾಡುತ್ತಿದ್ದಂತೆ ಸಿನೆಮಾದಲ್ಲಿ ಮುಂದುವರಿಯುವ ಬಗ್ಗೆ ಆಸಕ್ತಿ ಬೆಳೆಸಿದೆ. ಕರಾವಳಿ ಭಾಗಕ್ಕೆ ನೀವು ಈ ಹಿಂದೆ ಬಂದಿದ್ದೀರಾ?
ಒಂದೆರಡು ಬಾರಿ ಮಂಗಳೂರಿಗೆ ಬಂದಿದ್ದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನೆಮಾದ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದೆ. ಸ್ನೇಹಿತರು ಮಂಗಳೂರು ಭಾಗದಲ್ಲಿ ಇದ್ದಾರೆ. ಇಲ್ಲಿನ ಬೆಳಗ್ಗಿನ ಹವಾಮಾನ ಕೂಡ ನನಗೆ ಇಷ್ಟ. ಜತೆಗೆ ಇಲ್ಲಿನ ಪರಿಸರ, ವಾತಾವರಣ ಇಷ್ಟ. 2-3 ದಿನ ಬಂದು ಇಲ್ಲೇ ವಾಸ್ತವ್ಯ ಹೂಡಬೇಕು ಎಂಬ ಯೋಚನೆಯಿದೆ.
Related Articles
ಇದು ನನ್ನ ಮೊದಲ ಪ್ಯಾನ್ ಇಂಡಿಯಾ ಸಿನೆಮಾ. ಹೀಗಾಗಿ, ಬಹಳಷ್ಟು ನಿರೀಕ್ಷೆ, ಜವಾಬ್ದಾರಿ ಇಟ್ಟುಕೊಂಡು ಈ ಸಿನೆಮಾ ಮಾಡಲಾಗಿದೆ. ರಕ್ಷಿತ್ ಶೆಟ್ಟಿ ಅವರ ಸಿನೆಮಾ ಇದಾಗಿರುವುದರಿಂದ ಈ ಸಿನೆಮಾ ಇನ್ನಷ್ಟು ಹೊಸ ಲೋಕವನ್ನೇ ಪಡೆದುಕೊಂಡಿದೆ. ಸುಮಾರು 3 ವರ್ಷಗಳ ಕಾಲ ಈ ಸಿನೆಮಾಕ್ಕಾಗಿ ಇಡೀ ಚಿತ್ರ ತಂಡ ಶ್ರಮಿಸಿದೆ. ಅದರ ಫಲಿತಾಂಶ ಇದೀಗ ಥಿಯೇಟರ್‌ಗಳಿಂದ ಸಿಗುತ್ತಿರುವಾಗ ತುಂಬ ಖುಷಿಯಾಗುತ್ತಿದೆ.
Advertisement
ಮೂಲತಃ ಬೇರೆ ರಾಜ್ಯದವರಾದ ಕಾರಣ ಈ ಸಿನೆಮಾದಲ್ಲಿ ಕನ್ನಡದಲ್ಲಿ ಡಬ್ ಮಾಡುವುದು ನಿಮಗೆ ಹೇಗೆ ಸುಲಭವಾಯಿತು?ಮೊದಲ ಕನ್ನಡ ಚಿತ್ರದಲ್ಲಿ ಅಭಿನಯಿಸುವಾಗ ನನಗೆ ಕನ್ನಡ ಬಹಳಷ್ಟು ಕಷ್ಟ ಆಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಕನ್ನಡ ತುಂಬಾ ಇಷ್ಟ ಆಗುತ್ತಾ ಬಂತು. ಇದೇ ಪ್ರೇರಣೆಯಿಂದ ಅವನೇ ಶ್ರೀಮನ್ನಾರಾಯಣ ಸಿನೆಮಾದ ಮೂಲಕ ನನ್ನ ಕನ್ನಡ ಇನ್ನಷ್ಟು ಸುಧಾರಣೆ ಕಂಡಿದೆ. ಕೊಂಚ ಕಷ್ಟ ಪಟ್ಟು ಡಬ್ಬಿಂಗ್ ಮಾಡಿರುವುದರಿಂದ ಹೆಚ್ಚುವರಿ ದಿನ ಬೇಕಾಯಿತು. ಕನ್ನಡ ನನಗೆ ಇದೀಗ ತುಂಬ ಹತ್ತಿರವಾಗುತ್ತಿದೆ. ಮುಂದಿನ ಸಿನೆಮಾ?
ಅವನೇ ಶ್ರೀಮನ್ನಾರಾಯಣದ ಬಳಿಕ ನನಗೆ ಒಂದಿಷ್ಟು ಜವಾಬ್ದಾರಿ ಈಗ ಹೆಚ್ಚಿದೆ. ಹೀಗಾಗಿ ಕೆಲವು ಆಫರ್‌ಗಳಿದ್ದರೂ ಎಲ್ಲವನ್ನು ಒಪ್ಪಿಕೊಂಡಿಲ್ಲ. ಒಂದೆರಡು ಸಿನೆಮಾದ ಬಗ್ಗೆ ಮಾತುಕತೆ ನಡೆಸ ಲಾಗುತ್ತಿದೆ. ಇನ್ನೂ ಫೈನಲ್ ಮಾಡಿಲ್ಲ. “ತುಳು ಸಿನೆಮಾದ ಸಾಧನೆ ಗ್ರೇಟ್’
ತುಳು ಫಿಲ್ಮ್ ಇಂಡಸ್ಟ್ರಿ ಬಗ್ಗೆ ನಿಮ್ಮ ಅಭಿಪ್ರಾಯ..
ತುಳು ಭಾಷೆಯಲ್ಲಿಯೂ ಹಲವು ಸಿನೆಮಾಗಳು ಸದ್ಯ ತೆರೆಕಾಣುತ್ತಿರುವ ಬಗ್ಗೆ ನಾನು ತಿಳಿದಿದ್ದೇನೆ. ಇದೊಂದು ಆಶಾದಾಯಕ ಬೆಳವಣಿಗೆ. ಕಡಿಮೆ ವೆಚ್ಚದಲ್ಲಿ ಕರಾವಳಿ ಭಾಗದ ಜನರು ಎಲ್ಲೆಡೆ ನೋಡಬಹುದಾದ ಸಿನೆಮಾ ವನ್ನು ಇಲ್ಲಿನವರೇ ಮಾಡುತ್ತಿರುವುದು ಗ್ರೇಟ್. ಹೀಗೆಯೇ ಮುಂದುವರಿದರೆ ಕನ್ನಡ ಇಂಡಸ್ಟ್ರಿಗೆ ಸರಿಸಮಾನವಾಗಿ ತುಳು ಇಂಡಸ್ಟ್ರಿಯೂ ಬೆಳೆಯಬಹುದು.