Advertisement

ವಯಸ್ಸು 75 ದಾಟಿದರೂ , ಇವರೀಗ ಪಿಎಚ್ ಡಿ ಮಾಡಲು ಹೊರಟ ವಿದ್ಯಾರ್ಥಿ…

01:23 PM Sep 11, 2021 | ಸುಹಾನ್ ಶೇಕ್ |
1974 ರಲ್ಲಿ ಗಣೇಶ್ ಕಂಪೆನಿಯೊಂದರಲ್ಲಿ ಅಟೆಂಡರ್ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಾರೆ. ನಿಧಾನವಾಗಿ ದಿನನಿತ್ಯದ ಬಡತನದ ದಿನವನ್ನು ನೆಮ್ಮದಿಯ ದಿನಗಳನ್ನಾಗಿ ಮಾಡಿ ಪರಿಶ್ರಮ ಪಟ್ಟು ದುಡಿಯುತ್ತಾರೆ ಗಣೇಶ್. 2004 ರ ಸಮಯ ಅಂದು ಗಣೇಶ್ ತನ್ನ ಸುದೀರ್ಘ ಕೆಲಸದ ಅನುಭವದಿಂದ, ಭಡ್ತಿ ಹೊಂದಿ ನಿವೃತ್ತಿಯಾಗುವ ದಿನ. ನಿವೃತ್ತಿ ಆಗಿ ಎಲ್ಲರಂತೆ ನೆಮ್ಮದಿಯ ಜೀವನ ನಡೆಸುವುದು ಗಣೇಶ್ ಅವರ ಕನಸಾಗಿರಲಿಲ್ಲ‌. ತನ್ನ ನಾಲ್ಕು ಮಕ್ಕಳು,ಆರು ಮೊಮ್ಮಕ್ಕಳು, ಒಂದು ಮರಿಮೊಮ್ಮಗುವಿನ ಸಮ್ಮುಖದಲ್ಲಿ ಗಣೇಶ್ ಅವರು ಅಂದುಕೊಂಡ ಹೈಯರ್ ಸ್ಟಡೀಸ್ ಮಾಡುವ ಮೊದಲ ಹಂತದ ಹೆಜ್ಜೆಯನ್ನು ಇಡುತ್ತಾರೆ...
Now pay only for what you want!
This is Premium Content
Click to unlock
Pay with

ಕಲಿಕೆಗೆ ವಯಸ್ಸಿಲ್ಲ. ಯಾವ ವಯಸ್ಸಿನಲ್ಲಾದರೂ ಕಲಿಯುತ್ತಾ ಸಾಧನೆ ಮಾಡಬಹುದು ಎನ್ನುವುದಕ್ಕೆ ಸಾವಿರಾರು ಜನರು ಸಾಕ್ಷ್ಯವಾಗಿ ಕಾಣ ಸಿಗುತ್ತಾರೆ. ಅಂಥ ಸಾವಿರಾರು ಸಾಕ್ಷ್ಯಗಳಲ್ಲಿ ಒಬ್ಬರು ಕೇರಳದ ತೂತುಕುಡಿಯ 75 ವರ್ಷದ ಎಂ.ಗಣೇಶ್ ನಾಡಾರ್. ಇವರಿಗೀಗ ವಯಸ್ಸು 75 .ಆದರೆ ಇವರೀಗ ಪಿಎಚ್ ಡಿ ಗೆ ತಯಾರಾಗಿರುವ ವಿದ್ಯಾರ್ಥಿ ! ರೈತ ಕುಟುಂಬದಲ್ಲಿ ಜನಿಸಿದ ಗಣೇಶ್ ಮನೆಯಲ್ಲಿ ಬಡತನ ಸುಲಭವಾಗಿ ಕುಗ್ಗದ ಸವಾಲಾಗಿತ್ತು. ಕಷ್ಟದಲ್ಲೂ ಗಣೇಶ್ ತಂದೆ  ತಾಯಿ ಅವರನ್ನು ಎಸ್ ಎಸ್ ಎಲ್ ಸಿ ವರೆಗಿನ ಶಿಕ್ಷಣವನ್ನು ನೀಡಿ, ಆರ್ಥಿಕ ಸಮಸ್ಯೆಯಿಂದ ಮುಂದೆ ಮಕ್ಕಳನ್ನು ಕಲಿಸುವ ಸಾಹಸಕ್ಕೆ ಹೋಗುವುದಿಲ್ಲ.

Advertisement

1974 ರಲ್ಲಿ ಗಣೇಶ್ ಕಂಪೆನಿಯೊಂದರಲ್ಲಿ ಅಟೆಂಡರ್ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಾರೆ. ನಿಧಾನವಾಗಿ ದಿನನಿತ್ಯದ ಬಡತನದ ದಿನವನ್ನು ನೆಮ್ಮದಿಯ ದಿನಗಳನ್ನಾಗಿ ಮಾಡಿ ಪರಿಶ್ರಮ ಪಟ್ಟು ದುಡಿಯುತ್ತಾರೆ ಗಣೇಶ್. 2004 ರ ಸಮಯ ಅಂದು ಗಣೇಶ್ ತನ್ನ ಸುದೀರ್ಘ ಕೆಲಸದ ಅನುಭವದಿಂದ, ಭಡ್ತಿ ಹೊಂದಿ ನಿವೃತ್ತಿಯಾಗುವ ದಿನ. ನಿವೃತ್ತಿ ಆಗಿ ಎಲ್ಲರಂತೆ ನೆಮ್ಮದಿಯ ಜೀವನ ನಡೆಸುವುದು ಗಣೇಶ್ ಅವರ ಕನಸಾಗಿರಲಿಲ್ಲ‌. ತನ್ನ ನಾಲ್ಕು ಮಕ್ಕಳು,ಆರು ಮೊಮ್ಮಕ್ಕಳು, ಒಂದು ಮರಿಮೊಮ್ಮಗುವಿನ ಸಮ್ಮುಖದಲ್ಲಿ ಗಣೇಶ್ ಅವರು ಅಂದುಕೊಂಡ ಉನ್ನತ ವ್ಯಾಸಂಗ ಮಾಡುವ ಮೊದಲ ಹಂತದ ಹೆಜ್ಜೆಯನ್ನು ಇಡುತ್ತಾರೆ.

ಈ ಉತ್ಸಾಹಕ್ಕೆ ಅರಂಭ ಇತ್ತು. ಅಂತ್ಯವೆನ್ನುವುದು ಇವತ್ತಿಗೂ ನಿಂತಿಲ್ಲ. ಗಣೇಶ್ ಮೊದಲು ಮಾಡಿದ್ದು ಇಂಗ್ಲಿಷ್ ನಲ್ಲಿ ಮಾಸ್ಟರ್ಸ್, ಆ ಬಳಿಕ 2008 ರಲ್ಲಿ ಸೋಶಿಯಲಿಜಿ ಕೋರ್ಸ್ ಗೆ ಸೇರುತ್ತಾರೆ. 2011 ಮತ್ತು 2021 ರ ನಡುವೆ ಗಣೇಶ್ ಸಮಾಜಶಾಸ್ತ್ರ, ಇತಿಹಾಸ, ಸಾರ್ವಜನಿಕ ಆಡಳಿತ, ರಾಜಕೀಯ ವಿಜ್ಞಾನ, ಮಾನವ ಹಕ್ಕುಗಳು, ಸಾಮಾಜಿಕ ಕೆಲಸ, ಅರ್ಥಶಾಸ್ತ್ರ ಮತ್ತು ತಮಿಳಿನಲ್ಲಿ M.ಅ ಪದವಿಗಳನ್ನು ಪಡೆದಿದ್ದಾರೆ.

ಇಷ್ಟು ಮಾತ್ರವಲ್ಲದೆ, 75 ವರ್ಷದ ಹರೆಯದಲ್ಲಿ ಗಣೇಶ್ ಸಮಾಜಶಾಸ್ತ್ರದಲ್ಲಿ ಪಿಎಚ್ ಡಿ ಮಾಡಲು ತಮಿಳುನಾಡಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ಅಪ್ಲೈ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಲೇಜಿನ ಕುಲಪತಿಗಳು ಡಿಸೆಂಬರ್ ನಲ್ಲಿ ನಡೆಯಲಿರುವ ಪ್ರವೇಶ ಪರೀಕ್ಷೆಗೆ ತಯರಾಗಲು ಹೇಳಿದ್ದಾರೆ. ತನ್ನ ವಯಸ್ಸನ್ನು ಪರಿಗಣಿಸಿ ತನಗೆ ಪ್ರವೇಶ ಪರೀಕ್ಷೆಯಿಲ್ಲದೆ ಪಿಎಚ್ ಡಿ ಮಾಡಲು ಅವಕಾಶ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಗಣೇಶ್ ಅವರ ವಯಸ್ಸು 75 ದಾಟಿದರೂ, ಎಂ ಗಣೇಶ್ ನಾಡಾರ್ ಸಕ್ರಿಯ ಕ್ರೀಡಾಪಟು ಮತ್ತು ತರುವೈನಲ್ಲಿರುವ ಕ್ರೀಡಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲಿಷ್ ಕಲಿಸುತ್ತಿದ್ದಾರೆ.

*ಸುಹಾನ್ ಶೇಕ್

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.