Advertisement

ನ. 15: ಮಂಗಳೂರಲ್ಲಿ ರಾಜ್ಯ ಮಟ್ಟದ ಸಹಕಾರ ಸಪ್ತಾಹ

10:55 AM Oct 22, 2017 | |

ಮಂಗಳೂರು, ಅ. 21: ಸಹಕಾರ ಚಳವಳಿ ಸಂದೇಶವನ್ನು ಸಾರುವ 64ನೇ ಅಖೀಲ ಭಾರತ ಸಹಕಾರ ಸಪ್ತಾಹ ನ. 14ರಿಂದ 20ರ ವರೆಗೆ ರಾಜ್ಯಾದ್ಯಂತ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಹಕಾರ ಇಲಾಖೆ ಹಾಗೂ ರಾಜ್ಯ ಸಹಕಾರ ಮಹಾಮಂಡಳ ನಿಗಮ ಬೆಂಗಳೂರು ನಿರ್ದೇಶನದಲ್ಲಿ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ಸಪ್ತಾಹದ ಒಂದು ದಿನದ ಕಾರ್ಯಕ್ರಮ ನ. 15ರಂದು
ಮಂಗಳೂರಿನಲ್ಲಿ ನಡೆಯಲಿದೆ.

Advertisement

ಇದಕ್ಕಾಗಿ ಸಮಾಲೋಚನ ಸಭೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಗಮ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಇವರ ಅಧ್ಯಕ್ಷತೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಸಭಾಂಗಣದಲ್ಲಿ ಶನಿವಾರ ನಡೆಯಿತು. 

ಅಧ್ಯಕ್ಷತೆ ವಹಿಸಿದ್ದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿ, ಸಹಕಾರ ಸಪ್ತಾಹವನ್ನು ಪ್ರತಿದಿನ ಒಂದೊಂದು ಧ್ಯೇಯೋದ್ದೇಶಗಳನ್ನು ಇಟ್ಟು ಕೊಂಡು ಆಚರಿಸಲಾಗುವುದು. ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವನ್ನು “ಸಹಕಾರ ಸಂಸ್ಥೆಗಳು ಉತ್ಪಾದಕರಿಂದ ಗ್ರಾಹಕರ ವರೆಗೆ’ ಎಂಬ ವಿಷಯಾ ಧಾರಿತವಾಗಿ ಆಯೋಜಿಸಲಾಗಿದೆ ಎಂದರು. ಸುಮಾರು 10,000 ಮಂದಿ ಸಹಕಾರಿಗಳನ್ನು ಒಗ್ಗೂಡಿಸಿ ಸಹಕಾರ ಕ್ಷೇತ್ರ, ಸಹಕಾರ ತಣ್ತೀ ಮತ್ತು ಆಚರಣೆಯ ಅರಿವು ಮೂಡಿಸುವ ಉದ್ದೇಶವನ್ನು ಈ ಕಾರ್ಯಕ್ರಮದಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಸಮಾಲೋಚನ ಸಭೆಯಲ್ಲಿ ಸಹಕಾರ ಸಂಘಗಳ ಅಪರ ನಿಬಂಧಕರಾದ (ಬಳಕೆ ಮತ್ತು ಮಾರಾಟ) ಕೆ.ಎಸ್‌. ನವೀನ್‌, ಮೈಸೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕ ಎಚ್‌.ಸಿ. ಜೋಶಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಆರ್‌. ಶಿವಪ್ರಕಾಶ್‌, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಗುರುಸ್ವಾಮಿ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ, ಪ್ರವೀಣ್‌ ನಾಯಕ್‌, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಹರೀಶ್‌ ಆಚಾರ್‌, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್‌.ಜಿ. ಮಂಜುನಾಥ್‌ ಸಿಂಗ್‌, ಗೋಪಾಲಯ್ಯ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್‌ ಎಸ್‌., ಬ್ಯಾಂಕಿನ ನಿರ್ದೇಶಕರಾದ ಬಿ. ನಿರಂಜನ್‌, ಟಿ.ಜಿ. ರಾಜಾರಾಮ ಭಟ್‌, ಭಾಸ್ಕರ್‌ ಎಸ್‌. ಕೋಟ್ಯಾನ್‌, ರಘುರಾಮ್‌ ಶೆಟ್ಟಿ, ಎಂ. ವಾದಿರಾಜ್‌ ಶೆಟ್ಟಿ, ಕೆ.ಎಸ್‌. ದೇವರಾಜ್‌, ಸದಾಶಿವ ಉಳ್ಳಾಲ, ಶಶಿಕುಮಾರ್‌ ರೈ, ಸ್ಕ್ಯಾಡ್ಸ್‌ ಅಧ್ಯಕ್ಷ ರವೀಂದ್ರ ಕಂಬಳಿ, ಮಂಗಳೂರು ಟಿಎಪಿಸಿಎಂಎಸ್‌ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಬಂಟ್ವಾಳ ಪಿ.ಎಲ್‌.ಡಿ. ಬ್ಯಾಂಕ್‌ ಅಧ್ಯಕ್ಷ ಸುದರ್ಶನ್‌ ಜೈನ್‌ ಹಾಗೂ ಉಭಯ ಜಿಲ್ಲೆಗಳ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next