Advertisement

ಎರಡಕ್ಕಿಂತ ಹೆಚ್ಚು ಮಕ್ಕಳಿದ್ದುದಕ್ಕೆ ಗ್ರಾ.ಪಂ.ನಿಂದ ಮಹಿಳೆ ಅನರ್ಹ

01:53 AM Oct 03, 2019 | mahesh |

ಭುವನೇಶ್ವರ: ಒಡಿಶಾದ ಗ್ರಾಮ ಪಂಚಾಯಿತಿಯ ಸದಸ್ಯೆಯೊಬ್ಬರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ, ಒಡಿಶಾದ ಜಿಲ್ಲಾ ನ್ಯಾಯಾಲಯವು ಅನರ್ಹಗೊಳಿಸಿದೆ. ಕಂಧಮಲ್‌ನ ದರಿಂಗಿಬಡಿ ಪಂಚಾಯಿತಿ ಸಮಿತಿಯ ಸದಸ್ಯೆ ಸುಭ್ರೆಂತಿ ಪ್ರಧಾನ್‌ ಅನರ್ಹತೆಗೆ ಒಳಗಾಗಿದ್ದಾರೆ. 1994ರ ಸಮಿತಿ ಕಾಯ್ದೆಯನ್ನು ಅವರು ಉಲ್ಲಂ ಸಿದ್ದಾರೆ ಎಂಬ ಕಾರಣಕ್ಕೆ ಕೋರ್ಟ್‌ ಈ ನಿರ್ಧಾರ ಕೈಗೊಂಡಿದೆ. 1991ರಲ್ಲೇ ಎರಡು ಮಕ್ಕಳ ನಿಯಮವನ್ನು ಒಡಿಶಾ ಸರಕಾರ ಅಳವಡಿಸಿಕೊಂಡಿತ್ತು. ಬಿಜೆಡಿ ಶಾಸಕ ಸಲುಗ ಪ್ರಧಾನ್‌ ಪತ್ನಿ ಸುಭ್ರೆಂತಿ ಈ ಹುದ್ದೆಗೆ ಸ್ಪರ್ಧಿಸುವಾಗ ತನ್ನ ಮಕ್ಕಳ ಸಂಖ್ಯೆಯನ್ನು ಎರಡು ಎಂದು ನಮೂದಿಸಿದ್ದರು. ಈ ಕುರಿತಂತೆ ಸಮೀಪದ ತಜುಂಗಿಯಾ ಪಂಚಾಯಿತಿ ಸಮಿತಿ ಸದಸ್ಯ ರುಡಾ ಮಲಿಕ್‌ ದೂರು ಸಲ್ಲಿಸಿದ್ದರು.

Advertisement

ಹಲವು ಬಾರಿ ಈ ನೀತಿ ರಾಜ್ಯದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದು, ಬುಡಕಟ್ಟು ಜನರ ಮೇಲೆ ಹಗೆ ಸಾಧಿಸಲು ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಈ ಹಿಂದಿನ ಕೆಲವು ಪ್ರಕರಣಗಳಲ್ಲಿ ಅನರ್ಹತೆಯನ್ನು ಸುಪ್ರೀಂಕೋರ್ಟ್‌ ಕೂಡ ಎತ್ತಿಹಿಡಿದಿದ್ದರಿಂದ, ಈ ನೀತಿಗೆ ಇನ್ನಷ್ಟು ಬಲ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next